ವರ್ಲ್‌ವೈಡ್‌ನಲ್ಲೆ ಹಾಟ್ ನ್ಯೂಸ್ ಆಗಿರೋ ಸುದ್ದಿ ಅಂದ್ರೆ ಆಪರೇಷನ್ ಸಿಂಧೂರ್. ಜಗತ್ತಿನ ಮೂಲೆ ಮೂಲೆಯಲ್ಲೂ ಭಾರತ ದೇಶದ ಆಪರೇಷನ್ ಸಿಂಧೂರ್‌ದ ಬಗ್ಗೆಯೇ ಚರ್ಚೆಯಾಗ್ತಿದೆ. ಹೀಗಿರುವಾಗ ಈ ವಿಷಯದ ಬಗ್ಗೆ ನಮ್ಮ ಚಿತ್ರರಂಗದಲ್ಲಿ ಚರ್ಚೆಯಾಗದೇನೆ ಇರುತ್ತಾ. ಇಂತಹ ಘಟನೆಗಳ ಬಗ್ಗೆ ಸಿನಿಮಾ ಮಾಡಲು ಡೈರೆಕ್ಟರ್‌ಗಳು ತುದಿಗಾಲಲ್ಲಿ ನಿಂತು ಕಾಯ್ತಿರ್ತಾರೆ. ಹೌದು.. ಭಯೋತ್ಪಾದಕ ಅಡಗುತಾಣಗಳ ಮೇಲೆ ಭಾರತ ಆಪರೇಷನ್ ಸಿಂಧೂರ್ ಅಡಿಯಲ್ಲಿ (Operation Sindoor) ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ‘ಆಪರೇಷನ್ ಸಿಂಧೂರ್’ ಟೈಟಲ್ ಸಖತ್ ಸೆನ್ಷೇಷನ್ ಆಗಿದೆ. ಈ ಬಗ್ಗೆ ಸಿನಿಮಾ ಮಾಡಲು ಬಾಲಿವುಡ್ ತಯಾರಿ ನಡೆಸಿದೆ.
‘ಆಪರೇಷನ್ ಸಿಂಧೂರ’ದ ರೋಚಕ ಪಯಣವನ್ನು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದೆ. ಇದೀಗ ‘ಆಪರೇಷನ್ ಸಿಂಧೂರ್’ದ ಹೆಸರಿನಲ್ಲಿ ಸಿನಿಮಾವೊಂದು ಅನೌನ್ಸ್ ಆಗೇ ಬಿಟ್ಟಿದೆ. ಪೋಸ್ಟರ್ ಕೂಡ ರಿಲೀಸ್ ಆಗಿದೆ. ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ ಮತ್ತು ದಿ ಕಂಟೆಂಟ್ ಎಂಜಿನಿಯರ್ ಅಧಿಕೃತವಾಗಿ ಈ ಸಿನಿಮಾವನ್ನ ಘೋಷಿಸಿದೆ. ಈ ಚಿತ್ರವು ಮೇ 6 ಮತ್ತು 7 ರ ಮಧ್ಯರಾತ್ರಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು, ಹಲವಾರು ಭಯೋತ್ಪಾದಕರನ್ನು ತಟಸ್ಥಗೊಳಿಸಿದ ಭಾರತೀಯ ಸಶಸ್ತ್ರ ಪಡೆ ನಡೆಸಿದ ಕಾರ್ಯಾಚರಣೆಯ ಥೀಮ್‌ನಲ್ಲಿಯೇ ಈ ಸಿನಿಮಾ ತೆರೆ ಮೇಲೆ ಬರಲಿದೆ.
“ಆಪರೇಷನ್ ಸಿಂಧೂರ್” ಎಂದು ಹೆಸರಿಸಲಾದ ಈ ಚಿತ್ರವನ್ನು ನಿರ್ದೇಶಕ ಉತ್ತಮ್ ಮಹೇಶ್ವರಿ ಅವರು ಮೇ 9, 2025 ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದಾರೆ. ಈ ಸಿನಿಮಾವನ್ನ ನಿಕಿ ವಿಕಿ ಭಗ್ನಾನಿ ಫಿಲ್ಮ್ಸ್ ಮತ್ತು ದಿ ಕಂಟೆಂಟ್ ಎಂಜಿನಿಯರ್ ನಿರ್ಮಿಸಲಿದ್ದಾರೆ. ಆದ್ರೆ ಇವರ ಆಪರೇಷನ್ ಸಿಂಧೂರ್‌ದ ಸಿನಿಮಾದ ಪೋಸ್ಟ್ ನೆಟ್ಟಿಗರ ಟೀಕೆಗಳಿಗೆ ಗುರಿಯಾಗಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಈ ಸಿನಿಮಾ ಅಗತ್ಯವಿರಲಿಲ್ಲ. ಚಲನಚಿತ್ರೋದ್ಯಮವು ‘ಆಪರೇಷನ್ ಸಿಂಧೂರ್’ದ ಟೈಟಲ್‌ನ ಲಾಭಕ್ಕಾಗಿ ವಾಣಿಜ್ಯೀಕರಣಗೊಳಿಸಬಾರದು. ಈ ಸಿನಿಮಾ ತುಂಬಾ ಅನುಚಿತ ಮತ್ತು ಅನಗತ್ಯ ಇದನ್ನು ಬಹಿಷ್ಕರಿಸಬೇಕು ಎಂದು ನೆಟ್ಟಿಗರು ಟೀಕಿಸಿದ್ದಾರೆ. ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್‌ಗಳು ಬಂದ ಬೆನ್ನಲ್ಲೇ, ಸಿನಿಮಾದ ನಿರ್ದೇಶಕ ಉತ್ತಮ್ ಮಹೇಶ್ವರಿ ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.
Also Read: Dawood Ibrahim: ಜನರಿಗಿಂತ ಉಗ್ರರ ಮೇಲೆಯೇ ಪಾಕ್‌ಗೆ ಪ್ರೀತಿ: ಹೇಡಿ ದಾವೂದ್ ಇಬ್ರಾಹಿಂ ಮತ್ತೆ ಎಸ್ಕೇಪ್?
“ನಮ್ಮ ಭಾರತೀಯ ಸಶಸ್ತ್ರ ಪಡೆಗಳ ಇತ್ತೀಚಿನ ವೀರೋಚಿತ ಪ್ರಯತ್ನಗಳಿಂದ ಪ್ರೇರಿತವಾದ ಆಪರೇಷನ್ ಸಿಂಧೂರ್ ಆಧಾರಿತ ಚಲನಚಿತ್ರವನ್ನು ಇತ್ತೀಚೆಗೆ ಘೋಷಿಸಿದ್ದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಯಾರ ಭಾವನೆಗಳನ್ನು ನೋಯಿಸುವುದು ಅಥವಾ ಪ್ರಚೋದಿಸುವುದು ಎಂದಿಗೂ ನನ್ನ ಉದ್ದೇಶವಾಗಿರಲಿಲ್ಲ. ಒಬ್ಬ ಚಲನಚಿತ್ರ ನಿರ್ಮಾಪಕನಾಗಿ, ನಮ್ಮ ಸೈನಿಕರು ಮತ್ತು ನಾಯಕತ್ವದ ಧೈರ್ಯ, ತ್ಯಾಗ ಮತ್ತು ಬಲದಿಂದ ನಾನು ಭಾವುಕನಾದೆ, ಮತ್ತು ಈ ಶಕ್ತಿಯುತ ಕಥೆಯನ್ನು ಬೆಳಕಿಗೆ ತರಲು ಬಯಸಿದ್ದೆ ಹೊರತು ಖ್ಯಾತಿ ಮತ್ತು ಹಣಗಳಿಕೆಗಾಗಿ ಅಲ್ಲ” ಎಂದು ಅವರು ಬರೆದಿದ್ದಾರೆ. ಇನ್ನು ಇದು ಕೇವಲ ಒಂದು ಚಿತ್ರವಲ್ಲ, ಇದು ಇಡೀ ರಾಷ್ಟ್ರದ ಭಾವನೆ ಮತ್ತು ಜಾಗತಿಕವಾಗಿ ದೇಶದ ಸಾಮಾಜಿಕ ಚಿತ್ರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
