ಬೆಂಗಳೂರು, ಮಾ.10: ವಿಶ್ವದಲ್ಲಿ ಮೂರನೇ ಮಹಾಯುದ್ಧದ ವಾತಾವರಣ ಸೃಷ್ಟಿಯಾಗಿದೆ. ಇರಾನ್‌ ದೇಶದ ಮೇಲೆ ಇಸ್ರೇಲ್ ಮತ್ತು US ಜಂಟಿ ದಾಳಿಯಿಂದಾಗಿ ಮಧ್ಯಪ್ರಾಚ್ಯ ದೇಶಗಳಲ್ಲಿ ತಿಕ್ಕಾಟ ಶುರುವಾಗಿದೆ. ಇರಾನ್-ಇಸ್ರೇಲ್ ಸಂಘರ್ಷ ಈಗ ವಿಶ್ವಕ್ಕೆ ದೊಡ್ಡ ಸಮಸ್ಯೆಯಾಗಿ ಹೆಗಲೇರಿದ್ದು, ಎಲ್ಲೆಡೆ ಭಾರೀ ದರ ಏರಿಕೆಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಇದರ ಮಧ್ಯೆ UAE ರಾಯಭಾರಿ ಹುಸೇನ್ ಹಸನ್ ಮಿರ್ಜಾ ಹೇಳಿರುವ ಮಾತು ಭಾರಿ ಸದ್ದು ಮಾಡ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಮತ್ತು ಇರಾನ್‌ಗೆ ಒಂದೇ ಒಂದು ಫೋನ್ ಕರೆ ಮಾಡಿ ಸಂಘರ್ಷ ನಿಲ್ಲಿಸುವಂತೆ ಹೇಳಿದರೆ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಹಸನ್ ಮಿರ್ಜಾ ಹೇಳಿದ್ದಾರೆ.

ಈ ಮಾತು ಮೋದಿ ಹಾಗೂ ಭಾರತದ ಶಕ್ತಿಯನ್ನ ಎತ್ತಿ ಹಿಡಿಯುತ್ತಿದೆ. ಇರಾನ್-ಇಸ್ರೇಲ್ ಮತ್ತು ಅಮೆರಿಕ ಯುದ್ಧ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಭಾರತದ ಮೊದಲ UAE ರಾಯಭಾರಿ ಹುಸೇನ್ ಹಸನ್ ಮಿರ್ಜಾ, ಗಲ್ಫ್ ನಾಯಕರು ಪ್ರಧಾನಿ ಮೋದಿಯವರನ್ನ ತುಂಬಾ ಗೌರವದಿಂದ ಕಾಣುತ್ತಾರೆ ಹಾಗೂ ಅವರ ಮಾತನ್ನು ತಳ್ಳಿಹಾಕುವುದಿಲ್ಲ. ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಭಾಗಿಯಾಗಲು ನಮಗೆ ಇಷ್ಟ ಇಲ್ಲ. ನರೇಂದ್ರ ಮೋದಿ ಅವರು ಇರಾನ್ ಮತ್ತು ಇಸ್ರೇಲ್‌ಗೆ ಒಂದು ಫೋನ್ ಕರೆ ಮಾಡಿ ಮಾತನಾಡಿದರೆ ಈ ಸಮಸ್ಯೆಯನ್ನು ಪರಿಹರಿಸಬಹುದು, ಈ ಯುದ್ಧಕ್ಕೆ ಅಂತ್ಯಹಾಡುವ ಶಕ್ತಿ ಭಾರತದ ಪ್ರಧಾನಿ ಮೋದಿಯವರಿಗೆ ಮಾತ್ರ ಇದೆ ಅಂತ ಹೇಳಿದ್ದಾರೆ.

Share.
Leave A Reply