ಈರುಳ್ಳಿ ಸಾಮಾನ್ಯವಾಗಿ ಪ್ರತಿ ಅಡುಗೆಯಲ್ಲೂ ಬಳಕೆಯಾಗುವ ಒಂದು ತರ್ಕಾರಿ. ಏನಿಲ್ಲ ಅಂದ್ರೂ ಈರುಳ್ಳಿನ ಸೈಡ್ಸ್ ಥರ ಆದ್ರೂ ಯೂಸ್‌ಮಾಡ್ತಾರೆ. ಅಲ್ಲದೇ ಸಾಕಷ್ಟು ಆರೋಗ್ಯ ಪ್ರಯೋಜನಗಳು(Onions Benefits) ಕೂಡ ಈರುಳ್ಳಿಯಲ್ಲಿವೆ. ಇನ್ನು, ಈರುಳ್ಳಿಯಲ್ಲಿ ಎರಡು ರೀತಿ ಇದೆ.

ಕೆಂಪು ಹಾಗೂ ಬಿಳಿ ಈರುಳ್ಳಿ. ಸಿಟಿಗಳಲ್ಲಿ ಆಲ್ ಮೋಸ್ಟ್ ಸಿಗುವಂಥದ್ದು ಕೆಂಪು ಈರುಳ್ಳಿ. ಬಿಳಿ ಈರುಳ್ಳಿ ಗ್ರಾಮೀಣ ಭಾಗಗಳಲ್ಲಿ ಅಂದ್ರೆ ಹಳ್ಳಿಗಳಲ್ಲಿ ಕಂಡು ಬರುತ್ತೆ. ಇವೆ ರಡ್ರಲ್ಲಿ ಆರೋಗ್ಯಕ್ಕೆ ಯಾವುದು ಜಾಸ್ತಿ ಒಳ್ಳೇದು ಗೊತ್ತಾ? ಬಿಳಿ ಈರುಳ್ಳಿ ಅತ್ಯಂತ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿದೆ ಅಂತಾ ಆಹಾರ ತಜ್ಞರು ಹೇಳ್ತಾರೆ.
ಬಿಳಿ ಈರುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಫ್ಲೇವನಾಯ್ಡ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಇರುತ್ತವೆ. ಇವು ದೇಹದ ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುವಲ್ಲಿ ಮತ್ತು ಮಧುಮೇಹವನ್ನು ನಿಯಂತ್ರಿಸುವಲ್ಲಿ ವಿಶೇಷವಾಗಿ ಪರಿಣಾಮಕಾರಿ ಅಂತಾ ಹೇಳ ಲಾಗುತ್ತೆ. ಬಿಳಿ ಈರುಳ್ಳಿಯಲ್ಲಿರುವ ಕ್ರೋಮಿಯಂ ಮತ್ತು ಸಲ್ಫರ್‌ನಂತಹ ಅಂಶಗಳು ರಕ್ತದಲ್ಲಿನ ಸಕ್ಕರೆ ಮಟ್ಟ ವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಬಿಳಿ ಈರುಳ್ಳಿಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಉತ್ಕರ್ಷಣ ನಿರೋಧಕಗಳು ಕೂಡ ಅಧಿಕವಾಗಿವೆ. ದೇಹದ ಅಂಗಾಂಶಗಳಲ್ಲಿ ಅಪಾಯಕಾರಿ ಬದಲಾವಣೆಗಳನ್ನು ತಡೆಗಟ್ಟುವಲ್ಲಿ ಇವು ಉಪಯುಕ್ತವಾಗಿವೆ. ಈ ಈರುಳ್ಳಿ ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಉತ್ತಮ ಕೆಲಸ ಮಾಡುತ್ತದೆ.
ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರ ಜೊತೆಗೆ, ಅವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತವೆ. ಕೆಂಪು ಈರುಳ್ಳಿಗೆ ಹೋಲಿಸಿದ್ರೆ ಬಿಳಿ ಈರುಳ್ಳಿ ದುಪ್ಪಟ್ಟು ಪ್ರಯೋಜನಕಾರಿಯಾಗಿದೆ.
