ಗುಜರಾತ್ನಿಂದ ಲಂಡನ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡು ಭಾರೀ ಅನಾಹುತ ಸೃಷ್ಟಿಸಿದೆ. ತಾಂತ್ರಿಕ ದೋಷದಿಂದ ಟೇಕ್ ಆಫ್ ಆದ ಐದು ನಿಮಿಷದಲ್ಲಿ ವಿಮಾನ ಪತನಗೊಂಡಿದೆ. ಅಹ್ಮದಾಬಾದ್ನಲ್ಲಿರುವ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ಗೆ ಬಂದು ಅಪ್ಪಳಿಸಿದ್ದು, ಬೆಂಕಿಯ ಉಂಡೆಯಾಗಿ ಧಗಧಗಿಸಿದೆ. ವಿಮಾನ ಪತನಗೊಳ್ಳುತ್ತಿದ್ದಂತೆಯೇ ಬೆಂಕಿಯ ಜ್ವಾಲೆ ಆವರಿಸಿದೆ. ಇದೀಗ 15 ಮೆಡಿಕಲ್ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿದ್ದಾರೆ.
ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ಲೈನರ್ 242 ಪ್ರಯಾಣಿಕರೊಂದಿಗೆ ಟೇಕ್ ಆಪ್ ಆಗಿತ್ತು. ಅದರಲ್ಲಿ 230 ಪ್ರಯಾಣಿಕರು, 10 ವಿಮಾನ ಸಿಬ್ಬಂದಿ, ಇಬ್ಬರು ಪೈಲಟ್ಸ್ ಇದ್ದರು. ಇಂದು ಮಧ್ಯಾಹ್ನ 1.38ಕ್ಕೆ ಸರಿಯಾಗಿ ವಿಮಾನ ಟೇಕ್-ಆಫ್ ಆಗಿತ್ತು. ಆದರೆ ಐದೇ ನಿಮಿಷದಲ್ಲಿ ವಿಮಾನ ಪತನವಾಗಿದೆ.
