ಮದ್ದೂರು ಗಲಾಟೆ ಪ್ರಕರಣದ ಬಗ್ಗೆ ದೆಹಲಿಯಲ್ಲಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ರಾತ್ರಿ ಗಣೇಶನ ಮೆರವಣಿಗೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದಾರೆ . ಕಳೆದ ವರ್ಷದ ಪ್ರಕರಣ ಮಂಡ್ಯದಲ್ಲಿ ಪುನರಾವರ್ತನೆ ಆಗಿದೆ. ನಾನು ಮಂಡ್ಯ ಜನರಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಘಟನೆಯನ್ನ ಹಿಂಸೆಯ ಕಡೆ ತೆಗೆದುಕೊಂಡು ಹೋಗಬೇಡಿ ಎಂದು ಮದ್ದೂರು ಜನರಿಗೆ ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಮಂಡ್ಯದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುವ ಕೆಲಸ ಆಗುತ್ತಿದೆ. ಇಂಥ ಪ್ರಕರಣಗಳು ಮಂಡ್ಯದಲ್ಲಿ ಈ ಹಿಂದೆ ಆಗಿಲ್ಲ . ಮಂಡ್ಯ ಜಿಲ್ಲೆಯಲ್ಲಿ ಇಷ್ಟು ದೊಡ್ಡಮಟ್ಟದಲ್ಲಿ ಇಂಥ ಘಟನೆಗಳು ನಡೆಯಲು ಕಾಂಗ್ರೆಸ್ ಸರ್ಕಾರ ಕಾರಣ. ಹಿಂದೂ ಸಮಾಜದಲ್ಲಿ ದೊಡ್ಡ ಮಟ್ಟದಲ್ಲಿ ಅಸಮಾಧಾನ ಆಗುತ್ತಿದೆ. ಇದಕ್ಕೆ ಕಾಂಗ್ರೆಸ್ ಆಡಳಿತ, ನಡವಳಿಕೆ ಕಾರಣ, ಇಡೀ ರಾಜ್ಯದಲ್ಲಿ ಮೂಲೆ ಮೂಲೆಯಲ್ಲಿ ಗಲಾಟೆ ನಡೆಯಲು ಕಾಂಗ್ರೆಸ್ ಆಡಳಿತ ಕಾರಣ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ದೂರಿದ್ದಾರೆ.
ಮದ್ದೂರಲ್ಲಿ ಪ್ರತಿಭಟನೆ ನಡೆಯುತ್ತಿರುವುದು ನೋಡಿದ್ರೆ ಕಾಂಗ್ರೆಸ್ ಪತನ ಶುರುವಾಗಿದೆ ಅಂತಾನೇ ಅರ್ಥ ಎಂದಿದ್ದಾರೆ. ಈಗಲಾದ್ರೂ ಕಾಂಗ್ರೆಸ್ ಪಕ್ಷ ಅರ್ಥ ಮಾಡಿಕೊಳ್ಳಬೇಕು. ಡಿಸಿ, ಎಸ್ಪಿ ಮಾತಾಡಿದ್ದೇನೆ. ಮದ್ದೂರು ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ದುರ್ಘಟನೆ ಗಳಿಗೆ ಅವಕಾಶ ಮಾಡಿಕೊಡಬೇಡಿ ಎಂದು ಕುಮಾರಸ್ವಾಮಿ ದೆಹಲಿಯಿಂದಲೇ ಮದ್ದೂರು ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.