ಕನ್ನಡಿಗರನ್ನ ಕೆಣಕಿ ಉಳಿದವರಿಲ್ಲ ಎಂಬುದು ಪ್ರಪಂಚಕ್ಕೆ ಗೊತ್ತು. ಈ ನಡುವೆ ಎಸ್ಬಿಐ ಮಹಿಳಾ ಮ್ಯಾನೇಜರ್ ಕರ್ನಾಟಕದಲ್ಲಿರುವವರೆಗೆ ನಾನು ಯಾವತ್ತೂ ಕನ್ನಡ ಮಾತಾಡಲ್ಲ ಎಂದು ದರ್ಪ ಮೆರೆದ ಘಟನೆ ಆನೇಕಲ್ ತಾಲೂಕು ಸೂರ್ಯ ನಗರ SBI ಬ್ಯಾಂಕ್ನಲ್ಲಿ ನಡೆದಿತ್ತು. ಆ ಮ್ಯಾನೇಜರ್ ಕನ್ನಡ ಮಾತಾಡಲ್ಲ.. ಹಿಂದಿ ಮಾತಾಡ್ತೀನಿ ಎಂದು ಹೇಳುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಕನ್ನಡಿಗರನ್ನ ಕೆಣಕಿದ ಕಿರಿಕ್ ಲೇಡಿ ದೌವಲತ್ತಿಗೆ ಬ್ರೇಕ್ ಬಿದ್ದಿದೆ(KickOut).
ಬೆಂಗಳೂರಿನ ಹೊರವಲಯ ಆನೇಕಲ್ ತಾಲೂಕಿನ ಸೂರ್ಯನಗರದ SBI ಶಾಖೆಯ ಮ್ಯಾನೇಜರ್ ನಾನು ಕನ್ನಡ ಮಾತನಾಡೊಲ್ಲ, ನೀವೇ ಹಿಂದಿ ಮಾತನಾಡಿ. ಇಲ್ಲವೆಂದರೆ ಅದೇನು ಮಾಡ್ಕೋತೀರೋ ಮಾಡಿಕೊಳ್ಳಿ ಎಂದು ದರ್ಪ ಮೆರೆದಿದ್ದ ಎಸ್ಬಿಐ ಬ್ಯಾಂಕ್ ಮ್ಯಾನೇಜರ್ನನ್ನು ವರ್ಗಾವಣೆ ಮಾಡಿ ಬ್ಯಾಂಕ್ ಆಡಳಿತ ಮಂಡಳಿ ಶಿಕ್ಷೆ ನೀಡಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮಾಹಿತಿ ನೀಡಿದ್ದಾರೆ.
Also Read: ಮಾನವ, ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ: CM Siddaramaiah
ಮತ್ತೊಂದೆಡೆ, ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆನೇಕಲ್ ತಾಲೂಕಿನ ಎಸ್ಬಿಐ ಬ್ಯಾಂಕ್ಗೆ ನುಗ್ಗಿ ಪ್ರತಿಭಟನೆ ನಡೆಸಿದ್ದಾರೆ.. ಕನ್ನಡ ಮಾತಾಡದ ಬ್ಯಾಂಕ್ ಸಿಬ್ಬಂದಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದರಿಂದ ಮಣಿದ ಬ್ಯಾಂಕ್ ಮ್ಯಾನೇಜರ್, ಕ್ಷಮೆ ಕೇಳಿದ್ದಾರೆ.
ವಿಡಿಯೋ ಮೂಲಕ ಕ್ಷಮೆ ಕೇಳಿರುವ ಬ್ಯಾಂಕ್ ಮ್ಯಾನೇಜರ್, ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ, ನಾನು ಕನ್ನಡದಲ್ಲೇ ವ್ಯವಹರಿಸಲು ಪ್ರಯತ್ನಿಸುತ್ತೇನೆ ಅಂತಾ ನಗುತ್ತಾ ಕ್ಷಮೆ ಕೇಳಿದ್ದಾರೆ. ಈ ವಿಡಿಯೋಗೂ ಆಕ್ರೋಶ ವ್ಯಕ್ತವಾಗಿದೆ.
ಲೇಡಿ ಮ್ಯಾನೇಜರ್ ಬೇಕಾಬಿಟ್ಟಿ ಕಾಟಾಚಾರಕ್ಕೆ ಕ್ಷಮೆ ಕೇಳಿದ್ದಾರೆ.. ಅವರಿಗೆ ಪಶ್ಚಾತ್ತಾಪವೇ ಇಲ್ಲ.. ನಗುತ್ತಾ ಕೇಳಿರುವುದು ಅದೆಂತಹ ಕ್ಷಮೆ? ಈ ರೀತಿಯ ಕ್ಷಮೆ ನಮಗೆ ಬೇಕಾಗಿಲ್ಲ.. ಎಸ್ಬಿಐ ಖುದ್ದಾಗಿ ಈ ಬಗ್ಗೆ ಪತ್ರದ ಮೂಲಕ ಕ್ಷಮೆ ಕೇಳಬೇಕು. ಈ ಮಹಿಳೆಯನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ..
