ಕೆಜಿಎಫ್‌ ಖ್ಯಾತಿಯ ಮಂಗಳೂರು ದಿನೇಶ್‌ ನಿಧನರಾಗಿದ್ದಾರೆ. ಇಂದು ಮುಂಜಾನೆ ಕುಂದಾಪುರದಲ್ಲಿ ವಿಧಿವಶರಾಗಿದ್ದಾರೆ. ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಇಂದು ಕೊನೆಯುಸಿರೆಳೆದಿದ್ದಾರೆ. ಇನ್ನು ಇವರ ಪಾರ್ಥಿವ ಶರೀರವನ್ನ ಇಂದು ಸಂಜೆ ಬೆಂಗಳೂರಿಗೆ ತರಲಾಗುತ್ತಿದೆ.

ಕನ್ನಡ ಚಿತ್ರರಂಗದಲ್ಲಿ ಪ್ರತಿಭಾನ್ವಿತ ನಟ ಮತ್ತು ಕಲಾ ನಿರ್ದೇಶಕ ಎನಿಸಿಕೊಂಡಿದ್ದರು. ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಉಡುಪಿ ಜಿಲ್ಲೆಯ ಕುಂದಾಪುರದ ತಮ್ಮ ಮನೆಯಲ್ಲಿ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕುಂದಾಪುರದ ಕೋಟೇಶ್ವರದ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಕುಂದಾಪುರದ ಬಳಿ ಬಾಡಿಗೆ ಮನೆಯಲ್ಲಿದ್ದ ದಿನೇಶ್ ಮಂಗಳೂರು ಅವರಿಗೆ ಸಿನಿಮಾವೊಂದರ ಚಿತ್ರೀಕರಣದ ಸಂದರ್ಭ ಪಾರ್ಶ್ವ ವಾಯು ಆಟ್ಯಾಕ್ ಆಗಿತ್ತು. ಆ ವೇಳೆ ತಕ್ಷಣ ಅವರನ್ನು ಬೆಂಗಳೂರಿಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು.

ನಂತರ ಚಿಕಿತ್ಸೆಯಿಂದ ಗುಣಮುಖರಾಗಿದ್ದ ನಟ ದಿನೇಶ್ ಮಂಗಳೂರು ಅವರು ಕುಂದಾಪುರದಲ್ಲಿ ನೆಲೆಸಿದ್ದರು. ಮತ್ತೆ ಕಳೆದ ವಾರ ಪುನಃ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕುಂದಾಪುರದ ಕೋಟೇಶ್ವರದ ಸರ್ಜನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಇಂದು ಮುಂಜಾನೆ ಸರ್ಜನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸಿದೆ ಅವರು ಮೃತಪಟ್ಟಿದ್ದಾರೆ. ಅಪಾರ ಅಭಿಮಾನಿಗಳು, ನಟ, ನಟಿಯರ ಆತ್ಮೀಯರಾಗಿದ್ದ ಹಿನ್ನಲೆಯಲ್ಲಿ ಅವರ ಮೃತದೇಹವನ್ನು ಸಾರ್ವಜನಿಕರ ದರ್ಶನಕ್ಕಾಗಿ ಕುಂದಾಪುರದಿಂದ ಬೆಂಗಳೂರಿಗೆ ರವಾನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ರಂಗಭೂಮಿ ಕಲಾವಿದ, ಚಿತ್ರನಟ, ಕಲಾ ನಿರ್ದೇಶಕನಾಗಿ ಕನ್ನಡ ಚಿತ್ರರಂಗದ ಕಲಾಪೋಷಕ ನಟನಾಗಿದ್ರು. ಕನ್ನಡದ ಅತೀದೊಡ್ಡ ಹಿಟ್‌ ಸಿನಿಮಾ ಕೆಜಿಎಫ್‌ನಲ್ಲಿ ನಟಿಸಿದ ಇವರು, ಕೆಜಿಎಫ್‌ ಮೂಲಕ ಮತ್ತಷ್ಟು ಪ್ರಖ್ಯಾತಿಯನ್ನ ಪಡೆದುಕೊಂಡಿದ್ದರು. ರಿಕ್ಕಿ, ಉಳಿದವರು ಕಂಡಂತೆ,ಆ ದಿನಗಳು, ಕಿಚ್ಚ, ಕಿರಿಕ್ ಪಾರ್ಟಿ, ಕೆಜಿಎಫ್ ಚಾಪ್ಟರ್‌ 1, ಕೆಜಿಎಫ್‌ ಚಾಪ್ಟರ್‌ 2, 777 ಚಾರ್ಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ದಿನೇಶ್ ಮಂಗಳೂರು ಅಭಿನಯಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರು ಬಹುಬೇಡಿಕೆಯ ಪೋಷಕ ನಟನಾಗಿ ಅವರು ಗುರುತಿಸಿಕೊಂಡಿದ್ದರು. ದಿನೇಶ್ ಮಂಗಳೂರು ನಿಧನಕ್ಕೆ ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ.

Read Also : ಯೂಟ್ಯೂಬ್‌ಗೆ ಗುಡ್‌ಬೈ ಹೇಳಿದ್ರಾ ಡಾಕ್ಟರ್‌ ಬ್ರೋ..? ಈ ಸಲ ಬಿಗ್‌ಬಾಸ್‌ ಮನೆಗೆ ಹೋಗ್ತಾರಾ?

Share.
Leave A Reply