ಬಾಲಿವುಡ್ ನಟಿ ಕರೀಷ್ಮಾ ಕಪೂರ್ ಮಾಜಿ ಪತಿ ನಿಧನ ಬೆನ್ನಲ್ಲೇ ಆಸ್ತಿಗಾಗಿ ಕಲಹ ತೀವ್ರಗೊಂಡಿದೆ. ಉದ್ಯಮಿಯಾಗಿದ್ದ ಸಂಜಯ್ ಕಪೂರ್ ಇತ್ತೀಚೆಗಷ್ಟೇ ನಿಧನ ಹೊಂದಿದ್ದು, 30 ಸಾವಿರ ಕೋಟಿ ಆಸ್ತಿಗಾಗಿ ಅವರ ಪತ್ನಿಯರು, ಮಕ್ಕಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಜಯ್ ಕಪೂರ್ ನಿಧನದ ನಂತರ ಆಸ್ತಿಯನ್ನ ಅವರ ಮೂರನೇ ಪತ್ನಿ ಪ್ರಿಯಾ ಸಚ್ದೇವ್ ನೋಡಿಕೊಳ್ಳುತಿದ್ದಾರೆ. ಇದಕ್ಕೆ ಸಂಜಯ್ ಕಪೂರ್‌ರ ಮಾಜಿ ಪತ್ನಿ ಕರೀಷ್ಮಾ ಕಪೂರ್ ಹಾಗೂ ಮಕ್ಕಳು ಸಂಜಯ್ ಆಸ್ತಿಯಲ್ಲಿ ಪಾಲು ಬೇಕು ಅಂತಾ ಕೇಳಿದ್ದಾರೆ.
ಇದಕ್ಕಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಸಂಜಯ್ ಕಪೂರ ಅವರ ಆಸ್ತಿಯನ್ನ ಬಳಕೆ ಮಾಡದಂತೆ, ಕರೀಷ್ಮಾ ಕಪೂರ್ ಹಾಗೂ ಮಕ್ಕಳು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಸಂಜಯ್ ಕಪೂರ್ಗೆ ಸಂಬಂಧಿಸಿದ ಆಸ್ತಿ, ಲೆಕ್ಕಪತ್ರಗಳ ಹಂಚಿಕೆ ಪ್ರತಿಪಾದನೆಗೆ ಅರ್ಜಿ ಸಲ್ಲಿಸಿ ಶಾಶ್ವತ ತಡೆಯಾಜ್ಞೆಗೆ ಕೋರಿದ್ದಾರೆ. ತಂದೆ ಸಂಜಯ್ ಕಪೂರ್ ಅವರು ನಿಧನ ಹೊಂದಿದ ಮೇಲೆ ಮಲತಾಯಿ ಪ್ರಿಯಾ ಸಚ್ದೇವ್ ಅವರು ಆಸ್ತಿ, ದಾಖಲೆ ಪತ್ರಗಳಿಗೆ ಸಂಬಂಧಿಸಿದಂತೆ ಇತರೆ ಮಾಹಿತಿ ಹಂಚಿಕೊಳ್ಳಲು ನಿರಾಕರಣೆ ಮಾಡಿದ್ದಾರೆ.
ಅಲ್ಲದೇ ನಮಗೆ ಆಸ್ತಿ ಸಿಗದಂತೆ ಮಾಡಲು ಮುಂದಾಗಿದ್ದಾರೆ. ಇಡೀ ಆಸ್ತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ತಂದೆಯ ವಿಲ್ ಅನ್ನು ನಕಲು ಮಾಡಲು ಯತ್ನಿಸಿದ್ದಾರೆ ಅಂತಾ ಕರೀಷ್ಮಾ ಮಕ್ಕಳು ಆರೋಪಿಸಿದ್ದಾರೆ. ಇನ್ನು, ಸಂಜಯ್ ಕಪೂರ್ ಜೂನ್ 11ರಂದು ನಿಧನ ಹೊಂದಿದ್ದರು.
Read Also : ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್‌ಗೆ 1.14 ಲಕ್ಷ ದಂಡ.. ಫೈನ್ ಕಟ್ಟಲು 25 ದಿನ ಗಡುವು..!
