ಅದ್ಧೂರಿ ಟ್ರೈಲರ್‌ ಮೂಲಕ ಧೂಳೆಬ್ಬಿಸಿರುವ ಕಾಂತಾರ ಚಾಪ್ಟರ್‌ 1 ಸಿನಿಮಾ ಪ್ರೇಕ್ಷಕರ ನಿರೀಕ್ಷೆಯನ್ನ ಡಬಲ್‌ ಆಗಿಸಿದೆ. ಅಕ್ಟೋಬರ್‌ 2ರಂದು ಕಾಂತಾರ ಚಾಪ್ಟರ್‌ 1 ವರ್ಲ್ಡ್‌ ವೈಡ್‌ ರಿಲೀಸ್‌ ಆಗಿ ಅಬ್ಬರಿಸಲು ಸಜ್ಜಾಗಿದ್ದು, ಈ ನಡುವೆ ಟಿಕೆಟ್‌ ಬುಕಿಂಗ್‌ ಕೂಡ ಶುರುವಾಗಿದೆ. ಸೆಪ್ಟೆಂಬರ್‌ 26 ಮಧ್ಯಾಹ್ನ 12.29ರಿಂದ ಟಿಕೆಟ್‌ ಬುಕಿಂಗ್‌ ಶುರುವಾಗಿದ್ದು ಇಲ್ಲಿಯವರೆಗೆ 1.9ಲಕ್ಷ ಟಿಕೆಟ್‌ಗಳು ಮಾರಟವಾಗಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ. ಬಹುದೊಡ್ಡ ಮಟ್ಟದಲ್ಲಿ ಕಾಂತಾರ ಚಾಪ್ಟರ್ 1 ಸಿನಿಮಾ ತೆರೆಕಾಣಲಿದ್ದು ಭಾರತದಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್​​ಗಳಲ್ಲಿ ಬಿಡುಗಡೆ ಆಗಲಿದೆ. ಕನ್ನಡ ಮಾತ್ರವಲ್ಲದೇ ಒಟ್ಟು 7 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದು ವಿಶೇಷ. ಕರ್ನಾಟಕದಲ್ಲಿ ಸಿನಿಮಾ ಟಿಕೆಟ್ ದರ 200 ರೂಪಾಯಿ ಮೀರಬಾರದು ಎಂದು ಇತ್ತೀಚೆಗೆ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಅದರ ವಿರುದ್ಧ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಮತ್ತು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದ್ದವು. ಆದ್ದರಿಂದ ಸರ್ಕಾರದ ಆದೇಶಕ್ಕೆ ಹೈಕೋರ್ಟ್​ ಮಧ್ಯಂತರ ತಡೆ ನೀಡಿತ್ತು. ಹೀಗಾಗಿ ಕಾಂತಾರ ಚಾಪ್ಟರ್ 1 ಟಿಕೆಟ್ ಬೆಲೆ 200ರಿಂದ 1200 ರೂಪಾಯಿ ಆಗಿದ್ದು, ಕಲೆಕ್ಷನ್‌ನಲ್ಲಿ ಸಾವಿರ ಕೋಟಿ ಗಡಿ ದಾಟುವ ನಿರೀಕ್ಷೆ ಇದೆ.

2022ರಲ್ಲಿ ಬಂದಿದ್ದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಹಿಟ್ ಆಗಿತ್ತು. ವಿಶ್ವದಾದ್ಯಂತ 450ಕೋಟಿಗೂ ಅಧಿಕ ಗಳಿಗೆ ಮಾಡಿದ್ದ ಕಾಂತಾರ ಒಂದು ದಂತಕಥೆ, ಅದರ ಪ್ರೀಕ್ವೆಲ್ ಆದ ಕಾಂತಾರ: ಚಾಪ್ಟರ್ 1 ನಿರೀಕ್ಷೆ ಹೆಚ್ಚಿಸಿತ್ತು. ಈಗ ಕಾಂತಾರದ ಟ್ರೈಲರ್‌ ನೋಡಿರುವ ಅಭಿಮಾನಿಗಳು ಥಿಯೇಟರ್‌ಗೆ ಬರಲು ಸಜ್ಜಾಗಿದ್ದಾರೆ. 7000ಕ್ಕೂ ಸ್ಕ್ರೀನ್​​ಗಳಲ್ಲಿ ಬಿಡುಗಡೆ ಆಗುತ್ತಿರುವ ಕಾಂತಾರ ಸಿನಿಮಾ ಸಾವಿರ ಕೋಟಿ ದಾಟುವ ಕನ್ನಡದ ಎರಡನೇ ಚಿತ್ರವಾಗಲಿದೆ ಎಂಬ ಮಾತುಗಳು ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಕಾಂತಾರ: ಚಾಪ್ಟರ್ 1 ಚಿತ್ರದಲ್ಲಿ ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದು, ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ.

Read Also : 47 ವರ್ಷದ ಟ್ರೋಫಿ ಬರ : ಚೊಚ್ಚಲ ಪ್ರಶಸ್ತಿ ಗೆಲ್ಲುವತ್ತ ಭಾರತ ಮಹಿಳಾ ತಂಡ

Share.
Leave A Reply