ಕಾಲಿವುಡ್ ನಟ Kamal Hassan ವಿವಾದಾತ್ಮಕ ಹೇಳಿಕೆಗೆ ಬಗ್ಗೆ ಈಗಾಗಲೇ ನಿಮಗೆಲ್ಲ ಗೊತ್ತಿದೆ. ಹೀಗಿರುವಾಗ ರಾಜ್ಯದಲ್ಲಿ ಕಮಲ್ ಹಾಸನ್ ವಿರುದ್ಧ ಭಾರೀ ಟೀಕೆ ಹಾಗೂ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿ ಕಮಲ್ ವಿರುದ್ಧ ಕ್ಷಮೆ ಕೇಳುವಂತೆ ಭಾರೀ ಪ್ರತಿಭಟನೆ ಕೂಡ ಮಾಡಲಾಯಿತು. ಆದರೆ ಇದಕ್ಕೆ ಕಮಲ್ ಹಾಸನ್ ಮತ್ತೆ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಕನ್ನಡಿಗರ ತೀವ್ರ ಆಕ್ರೋಶದ ಬಳಿಕವೂ ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳಲು ನಿರಾಕರಿಸಿದ್ದಾರೆ. ಚೆನ್ನೈನಲ್ಲಿ ಇಂದು ಮಾತನಾಡಿದ ಕಮಲ್ ಹಾಸನ್, ನಾನು ಕ್ಷಮೆ ಕೇಳಲ್ಲ. ನಾನು ತಪ್ಪು ಮಾಡಿದ್ದರೆ ಮಾತ್ರ ಕ್ಷಮೆ ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವ. ನಾನು ಕಾನೂನು ಮತ್ತು ನ್ಯಾಯದ ಮೇಲೆ ನಂಬಿಕೆ ಇಟ್ಟಿದ್ದೇನೆ. ನಾನು ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳವನ್ನು ನಿಜವಾಗಲೂ ಪ್ರೀತಿಸುತ್ತೇನೆ. ನಾನು ಏನಾದ್ರು ತಪ್ಪು ಮಾಡಿ ದ್ರೆ ಕ್ಷಮೆ ಕೇಳುತ್ತೇನೆ. ನಾನು ತಪ್ಪೇ ಮಾಡಿಲ್ಲ. ಬೆದರಿಕೆಗಳಿಂದ ನಾನು ತಬ್ಬಿಬ್ಬು ಆಗಿಲ್ಲ. ತಮ್ಮ ಹೇಳಿಕೆಯಿಂದ ಹಿಂದೆ ಸರಿಯಲ್ಲ ಅಂತಾ ಕನ್ನಡಿಗರ ಕ್ಷಮೆ ಕೇಳಲು ಕಮಲ್ ಹಾಸನ್ ನಿರಾಕರಿಸಿದ್ದಾರೆ.
ಕಮಲ್ ಹಾಸನ್ ವಿರುದ್ಧ ಗಣಿಗ ರವಿ ಗರಂ
ಕ್ಷಮೆ ಕೇಳೊಲ್ಲ ಅನ್ನೋ Kamal Hassan ಉದ್ದಟತನ ವಿಚಾರವಾಗಿ ವಿಧಾನಸೌಧದಲ್ಲಿ ಶಾಸಕ ಗಣಿಗ ರವಿ ಕಿಡಿಕಾರಿದ್ದಾರೆ. ಕಮಲ್ ಹಾಸನ್ ನಾಲಿಗೆ ಬಿಗಿ ಹಿಡಿದು ಮಾತಾಡಬೇಕು. ಕಮಲ್ ಅಂದರೆ ತಮಿಳಿನಲ್ಲಿ ತೇವರ್ ಅಂತ. ಹಾಗಾದ್ರೆ ಅವರು ತೇವರ್ ಹಾಸನ್ ಅಂತ ಹೆಸರು ಇಟ್ಟುಕೊಳ್ಳಿ. ಇದು ದುರಹಂಕಾರ ಮಾತುಗಳನ್ನ ಆಡೋದು ಬಿಡಿ ಮೊದಲು ಕ್ಷಮೆ ಕೇಳಿ ಅಂದಿದ್ದಾರೆ.
ಕಮಲ್ ಹಸನ್ ಹೇಳಿಕೆಗೆ ಶಿವಣ್ಣ ಸೈಲೆಂಟ್
ಇನ್ನು ಶಿವಣ್ಣ ಸೈಲೆಂಟ್ ಆಗಿರೋ ವಿಚಾರಕ್ಕೆ ಕಿಡಿಕಾರಿದ್ದಾರೆ.. ಶಿವರಾಜ್ ಕನ್ನಡದ ಅನ್ನ ತಿನ್ನುವ ನಟ ಕಮಲ್ ಹಾಸನ್‌ರನ್ನ ಅಪ್ಪಿಕೊಳ್ಳೋದು ಸರಿಯಲ್ಲ.. ಕನ್ನಡಕ್ಕೆ ಅಪಮಾನ ಮಾಡಿದಾಗ ಶಿವರಾಜ್ ಕುಮಾರ್ ಮಾತಾಡ ಬೇಕು. ಶಿವರಾಜ್ ಕುಮಾರ್ ಕಮಲ್ ಹಾಸನ್‌ರನ್ನ ರಕ್ಷಣೆ ಮಾಡ್ತಿರೋದು ಸರಿಯಲ್ಲ. ಹೊಸೂರು ಹಿಂದೆ ಮೈಸೂರು ಭಾಗವಾಗಿತ್ತು. ಹಾಗಾದ್ರೆ ಅದನ್ನ ಕೊಟ್ಟು ಬಿಡಲಿ. ಕಮಲ್ ಹಾಸನ್ ಕನ್ನಡಿಗರನ್ನ ಕೂಡಲೇ ಕ್ಷಮೆ ಕೇಳಬೇಕು. ಇಲ್ಲದೆ ಹೋದರೆ ಸಿನಿಮಾ ರಿಲೀಸ್ ಮಾಡಲು ಬಿಡೋದಿಲ್ಲ ಅಂತಾ ವಾಗ್ದಾಳಿ ನಡೆಸಿದ್ರು..
Also Read: Darshan Thoogudeepa : ವಿದೇಶಕ್ಕೆ ಹಾರೋಕೆ ದರ್ಶನ್‌ಗೆ ಗ್ರೀನ್ ಸಿಗ್ನಲ್!
ವಾಣಿಜ್ಯ ಮಂಡಳಿ ಬೆಣ್ಣೆ ಹಚ್ಚೋದು ಮಾತು ಬೇಡ. ಕೂಡಲೇ ಥಗ್ ಲೈಫ್ ಸಿನಿಮಾವನ್ನ ಕರ್ನಾಟಕದಲ್ಲಿ ಬ್ಯಾನ್ ಮಾಡಲಿ. ಇಲ್ಲದೆ ಹೋದ್ರೆ ಸರ್ಕಾರದಿಂದ ಅವರ ಸಿನಿಮಾ ಬ್ಯಾನ್ ಮಾಡಬೇಕು. ನಟಿ ರಮ್ಯ ಹಾಗೂ ಶಿವರಾಜ್ ಕುಮಾರ್ ಯಾಕ್ ಹೀಗ್ ಹೇಳೋದ್ರು ಏನೋ ಗೊತ್ತಿಲ್ಲ. ಕನ್ನಡದ ಅನ್ನ ತಿನ್ನೋರು ಕನ್ನಡದ ಬಗ್ಗೆ ಯಾರಾದ್ರೂ ಮಾತಾಡಿದಾಗ ಅದನ್ನ ಖಂಡಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ರು…
ತಮನ್ನಾ ರಾಯಭಾರಿಗೆ ರಮ್ಯ ವಿರೋಧ ವಿಚಾರ
ಇನ್ನು ಮೈಸೂರು ಸ್ಯಾಂಡಲ್ ಸೋಪ್‌ಗೆ ತಮನ್ನಾ ರಾಯಭಾರಿಗೆ ನಟಿ ರಮ್ಯ ವಿರೋಧ ವಿಚಾರವಾಗಿ ಮಾತನಾಡಿ, ನಮ್ಮ ಸೋಪನ್ನ ಗ್ಲೋಬರ್ ಮಾರ್ಕೆಟ್ ಮಾಡಲು ಇದನ್ನ ಮಾಡಲಾಗಿದೆ. ಇದು ಬಿಟ್ಟು ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ. ತಮನ್ನಾ ಗ್ಲೋಬಲ್ ನಟಿ. ಅದರಲ್ಲಿ ತೆರಿಗೆ ಪೋಲು ಎಲ್ಲಾ ಇಲ್ಲ. 6 ಕೋಟಿ ಕೊಟ್ಟು 6 ಸಾವಿರ ಕೋಟಿ ಹೊಡೆಯೋದು ನಮ್ಮ ತಂತ್ರಗಾರಿಕೆ ಎಂದು ತಮನ್ನಾ ಪರ ಬ್ಯಾಟ್ ಬೀಸಿದ್ದು, ನಟಿ ರಮ್ಯಾಗೆ ರವಿ ಗಣಿಗ ತಿರುಗೇಟು ನೀಡಿದ್ದಾರೆ..
