ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮೊಟ್ಟಮೊದಲ ಬಾರಿ Taliban ಸರ್ಕಾರದ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. 2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದಾಗಿನಿಂದ ಈವರೆಗೆ ಭಾರತ ಅಧಿಕೃತವಾಗಿ ಯಾವುದೇ ಸಂಪರ್ಕ ಹೊಂದಿಲ್ಲವಂತೆ ಕಾಣಿಸಿತ್ತು. ಆದರೆ ಇತ್ತೀಚಿನ ಬೆಳವಣಿಗೆಯು ಭಾರತದ ವಿದೇಶಾಂಗ ನೀತಿಯಲ್ಲಿ ಬದಲಾವಣೆಯೊಂದು ಸಾಧ್ಯವಿದೆ ಎಂಬ ಸಂದೇಶ ನೀಡುತ್ತಿದೆ.
ತಾಲಿಬಾನ್ ಸರ್ಕಾರದ ಜೊತೆ ಮಾತುಕತೆ ನಡೆಸುವುದರಿಂದ ಭಾರತಕ್ಕೆ ಹಲವಾರು ರೀತಿಯ ಲಾಭಗಳಿವೆ. ಮೊದಲು, ಅಫ್ಘಾನಿಸ್ತಾನದಲ್ಲಿ ಭಾರತ ಹೂಡಿದ ವಿಕಾಸ ಕಾಮಗಾರಿ ಹಾಗೂ ಯೋಜನೆಗಳ ಭದ್ರತೆ ಈ ಮಾತುಕತೆಯ ಪ್ರಮುಖ ಅಂಶ. ಭಾರತವು ಅಲ್ಲಿ ಹಾಸ್ಪಿಟಲ್‌ಗಳು, ರಸ್ತೆ ಮತ್ತು ಶಾಲೆಗಳ ನಿರ್ಮಾಣದಂತಹ ಹಲವು ಹೂಡಿಕೆಗಳನ್ನು ಮಾಡಿದ್ದು, ಅವು ಭವಿಷ್ಯದಲ್ಲಿಯೂ ಕಾರ್ಯನಿರ್ವಹಿಸಬೇಕು ಎಂಬುದು ಭಾರತದ ಉದ್ದೇಶ.
Also Read: ಈ ಸಿಂಪಲ್ ಮೆಥಡ್‌ಗಳಿಂದ ವೈಟ್‌ಹೆಡ್ಸ್‌ಗೆ ಹೇಳಿ Goodbye!
ಇನ್ನು ಪಾಕಿಸ್ತಾನಕ್ಕೆ ಇದು ದೊಡ್ಡ ಆಘಾತವಾಗಿದೆ. ಅಫ್ಘಾನಿಸ್ತಾನದ ಮೇಲೆ ತನ್ನ ಪ್ರಭಾವವಿದೆ ಎಂಬ ಭಾವನೆಯಲ್ಲಿರುವ ಪಾಕ್, ಭಾರತ ಮತ್ತು ತಾಲಿಬಾನ್ ನಡುವೆ ಸಂಭಾಷಣೆಯೇ ಅವರ “ಸ್ಪೇಸ್” ಕಡಿಮೆಯಾಗುತ್ತಿದೆ ಎಂಬ ಭಯ ಹುಟ್ಟಿಸಿದೆ. ಈ ಮೂಲಕ ಭಾರತ ತನ್ನ ಭೌಗೋಳಿಕ ರಾಜಕೀಯದ ವ್ಯಾಪ್ತಿಯನ್ನು ಮರುಸ್ಥಾಪಿಸಲು ಮುಂದಾಗಿದೆ..
ಇನ್ನು ಈ ಮಾತುಕತೆ ಭಾರತೀಯ ವಿದೇಶಾಂಗ ನೀತಿಗೆ ಹೊಸ ತಿರುವು, ಮತ್ತು ಭದ್ರತೆ, ವ್ಯಾಪಾರ ಹಾಗೂ ಪ್ರಾದೇಶಿಕ ಪ್ರಭಾವದ ದೃಷ್ಟಿಯಿಂದ ಭಾರತಕ್ಕೆ ಒಳ್ಳೆಯ ಅವಕಾಶವಾಗಿ ಪರಿಣಮಿಸಬಹುದು.
