ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ 101ನೇ ಭೂ ವೀಕ್ಷಣಾ ಉಪಗ್ರಹ EOS-09 ಉಡಾವಣೆ ಯಶಸ್ವಿಯಾಯಿತು. ಆದರೆ EOS-09 ಉಪಗ್ರಹ ಕಾರ್ಯಾಚರಣೆಯನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದ ಸಂಸ್ಥೆ ನಡೆಸಿದ ಪ್ರಯತ್ನವು ವಿಫಲವಾಗಿದೆ ಎಂದು ಈ ಬಗ್ಗೆ ಇಸ್ರೋ ಅಧಿಕೃತವಾಗಿ ಮಾಹಿತಿ ನೀಡಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ತನ್ನ 101ನೇ ಉಡಾವಣೆಯಾದ EOS-09 ಉಪಗ್ರಹವನ್ನು PSLV-C61 ರಾಕೆಟ್ ಮೂಲಕ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 5:59 ಕ್ಕೆ ಉಡಾವಣೆ ಮಾಡಿತು. ಆದರೆ, ಈ ಉಡಾವಣೆಯು ನಿರೀಕ್ಷಿತ ಫಲಿತಾಂಶವನ್ನು ನೀಡಲಿಲ್ಲ.

ಉಡಾವಣೆಯ ಪ್ರಾರಂಭಿಕ ಹಂತಗಳು ಸಮರ್ಪಕವಾಗಿ ನಡೆದ್ರು ಸಹ, ಮೂರನೇ ಹಂತದಲ್ಲಿ ತಾಂತ್ರಿಕ ದೋಷ ಎದುರಾಗಿ ಮಿಷನ್‌ ಫೇಲ್‌ ಆಗಿದೆ. ISRO ಅಧ್ಯಕ್ಷ ವಿ. ನಾರಾಯಣನ್ ಅವರು ಈ ಕುರಿತು ಮಾಹಿತಿ ನೀಡಿದ್ದು, “ಮೂರನೇ ಹಂತದಲ್ಲಿ ಒತ್ತಡ ಕುಸಿತದಿಂದಾಗಿ ಕಕ್ಷೆ ಸೇರುವಲ್ಲಿ ವಿಫಲತೆ ಸಂಭವಿಸಿತು,” ಎಂದು ತಿಳಿಸಿದ್ದಾರೆ.

Also Read: Charminar ಬಳಿ ಅಗ್ನಿಅವಘಡ : 17 ಮಂದಿ ಸಜೀವ ದಹನ, 30 ಜನರಿಗೆ ಗಂಭೀರ ಗಾಯ

EOS-09 ಉಪಗ್ರಹವು ರೇಡಾರ್ ಇಮೇಜಿಂಗ್ ಉಪಗ್ರಹವಾಗಿದ್ದು, ಭೂಮಿಯ ಮೇಲ್ಮೈಯಿಂದ 500 ಕಿಲೋಮೀಟರ್‌ಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಳ್ಳಬೇಕಿತ್ತು. ಈ ಉಪಗ್ರಹವು ಕೃಷಿ, ವನಸಂಪನ್ಮೂಲ, ನಗರ ಯೋಜನೆ, ದುರಂತ ನಿರ್ವಹಣೆ ಮತ್ತು ರಾಷ್ಟ್ರೀಯ ಭದ್ರತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉಪಯುಕ್ತವಾಗಬೇಕಿತ್ತು. ಆದ್ರೆ ಈ ಘಟನೆಯಿಂದ ಪಾಠಗಳನ್ನು ಕಲಿಯುವ ಮೂಲಕ ಭವಿಷ್ಯದಲ್ಲಿ ಇನ್ನಷ್ಟು ಯಶಸ್ವಿ ಉಡಾವಣೆಗಳನ್ನು ನಡೆಸಲು ISRO ಮತ್ತೆ ಜೋಶ್‌ನೊಂದಿಗೆ ಸಿದ್ಧತೆ ನಡೆಸಿದೆ.

Share.
Leave A Reply