India Reopens 32 Airports: ವಿಮಾನ ನಿಲ್ದಾಣ ಪ್ರಾಧಿಕಾರ ಆದೇಶ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹಾಗೂ ಯುದ್ಧ ಭೀತಿಯಿಂದ 32 ಏರ್ಪೋರ್ಟ್‌ಗಳನ್ನ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿತ್ತು. ಆದ್ರೀಗ ಎರಡು ದೇಶಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಈ ಹಿನ್ನೆಲೆ ಉತ್ತರ ಮತ್ತು ವಾಯುವ್ಯ ಭಾರತದಲ್ಲಿ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ 32 ವಿಮಾನ ನಿಲ್ದಾಣಗಳನ್ನು ಪುನಃ ತೆರೆಯಲಾಗಿದೆ. ಭಾರತ ಸರ್ಕಾರವು ಮೇ 7ರಂದು ಭಾರತದ ಹಲವು ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಿತ್ತು. ಪ್ರಮುಖವಾಗಿ ಚಂಡೀಗಢ, ಶ್ರೀನಗರ, ಅಮೃತಸರ, ಲುಧಿಯಾನ, ಧರ್ಮಶಾಲಾ, ಶಿಮ್ಲಾ, ಪಟಿಯಾಲ, ಬಟಿಂಡಾ, ಲೇಹ್, ಜೈಸಲ್ಮೇರ್, ಜೋಧ್‌ಪುರ್, ಬಿಕಾನೇರ್, ಪಠಾಣ್‌ಕೋಟ್, ಜಮ್ಮು, ಭುಜ್, ಜಾಮ್‌ನಗರ ಮುಂತಾದವು ಉತ್ತರದ ಎಲ್ಲಾ ನಿಲ್ದಾಣಗಳನ್ನು ಮುಚ್ಚುವಂತೆ ಆದೇಶ ಜಾರಿಯಾಗಿತ್ತು.

ಕದನ ವಿರಾಮ ಘೋಷಣೆ ಬಳಿಕ ಈ ನಿರ್ಧಾರವನ್ನು ಸದ್ಯ ಹಿಂತೆಗೆದುಕೊಳ್ಳಲಾಗಿದೆ. ಶ್ರೀನಗರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಮತ್ತೆ ಕಾರ್ಯಾರಂಭಕ್ಕೆ ಸಿದ್ಧವಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (AAI) ಬಿಡುಗಡೆ ಮಾಡಿದ ಹೊಸ ಮಾಹಿತಿ ಪ್ರಕಾರ, ವಿಮಾನ ನಿಲ್ದಾಣಗಳು ಪುನಃ ತೆರೆಯಲ್ಪಟ್ಟಿದ್ದರೂ, ವಿಮಾನಯಾನ ಸಂಸ್ಥೆಗಳು (airlines) ತಮ್ಮ ವಿಮಾನಗಳ ಕಾರ್ಯಾಚರಣೆಯನ್ನು ಇನ್ನೂ ಆರಂಭಿಸಿಲ್ಲ. ಆದ್ದರಿಂದ, ಪ್ರಯಾಣಿಕರು ತಮ್ಮ ವಿಮಾನಗಳ ಸ್ಥಿತಿಯನ್ನು ತನಿಖೆ ಮಾಡಿ ತಮ್ಮ ಏರ್‌ಲೈನ್‌ಗಳ ವೆಬ್‌ಸೈಟ್ ಅಥವಾ ಗ್ರಾಹಕ ಸೇವೆಯೊಂದಿಗೆ ಸಂಪರ್ಕಿಸಿ ಪರಿಶೀಲಿಸಬೇಕು ಎಂದು ಸೂಚನೆ ಹೊರಡಿಸಿದೆ. ವಿಮಾನ ನಿಲ್ದಾಣ ಮುಚ್ಚಿದ ಕಾರಣ ಸುಮಾರು 500 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದವು. ಇದೀಗ 32 ವಿಮಾನ ನಿ

ಲ್ದಾಣಗಳನ್ನ ರೀ ಓಪನ್‌ ಮಾಡಲಾಗಿದೆ. ಆದರೆ, ವಿಮಾನಯಾನ ಸಂಸ್ಥೆಗಳು ಇನ್ನೂ ತಮ್ಮ ವೇಳಾಪಟ್ಟಿಯನ್ನು ಘೋಷಿಸಿಲ್ಲ. ಇನ್ನು ವಿಮಾನ ನಿಲ್ದಾಣಗಳಲ್ಲಿ ಕಟ್ಟುನಿಟ್ಟಿನ ಭದ್ರತಾ ತಪಾಸಣೆಗಳು ನಡೆಯಲಿದ್ದು, ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತು ವಿಮಾನ ಕಂಪನಿಗಳಲ್ಲಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.

ಪುನಃ ಓಪನ್‌ ಆದ ವಿಮಾನ ನಿಲ್ದಾಣಗಳ ಪಟ್ಟಿ
ಅಧಂಪುರ್, ಅಂಬಾಲ, ಅಮೃತಸರ, ಅವಂತಿಪುರ, ಬಟಿಂಡಾ, ಭುಜ್, ಬಿಕಾನೆರ್, ಚಂಡೀಗಢ, ಹಲ್ವಾರಾ, ಹಿಂದನ್, ಜೈಸಲ್ಮೇರ್, ಜಮ್ಮು, ಜಾಮ್‌ನಗರ್, ಜೋಧಪುರ, ಕಾಂಡ್ಲಾ, ಕಾಂಗ್ರಾ (ಗಗ್ಗಲ್), ಕೆಶೋಡ್, ಕಿಶನ್‌ಗಢ, ಕುಲ್ಲು ಮನಾಲಿ (ಭುಂತರ್), ಲೆಹ್, ಲುಧಿಯಾನ, ಮುಂದ್ರಾ, ನಲಿಯಾ, ಪಠಾಣ್‌ಕೋಟ್, ಪಟಿಯಾಲ, ಪೋರಬಂದರ್, ರಾಜ್‌ಕೋಟ್ (ಹಿರಾಸರ್), ಸರ್ಸಾವಾ, ಶಿಮ್ಲಾ, ಶ್ರೀನಗರ, ಥೋಯಿಸ್, ಉತ್ತರಲೈ.

Also Read: ʻNamo’s speech : ಎಲ್ಲರ ಚಿತ್ತ ಮೋದಿಯತ್ತ : ಇಂದು ರಾತ್ರಿ 8 ಗಂಟೆಗೆ ʻನಮೋʼ ಭಾಷಣ

ಇಂಡಿಗೋ ವಿಮಾನ ಸಂಸ್ಥೆ ತಮ್ಮ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸರ್ಕಾರದ ಇತ್ತೀಚಿನ ಸೂಚನೆಗಳಿಗೆ ಅನುಸಾರವಾಗಿ, ಮುಚ್ಚಲಾಗಿದ್ದ ವಿಮಾನ ನಿಲ್ದಾಣಗಳು ಮತ್ತೆ ತೆರೆಯಲ್ಪಟ್ಟಿವೆ. ಈಗಿನಿಂದ ನಾವು ಹಂತ ಹಂತವಾಗಿ ವಿಮಾನ ಸೇವೆಗಳನ್ನು ಪುನರಾರಂಭಿಸುತ್ತಿದ್ದೇವೆ ಎಂದಿದೆ. ಸ್ಪೈಸ್‌ಜೆಟ್ ವಿಮಾನ ಸಂಸ್ಥೆ ಕೂಡಾ X ನಲ್ಲಿ ಈ ಹಿಂದೆ ತಾತ್ಕಾಲಿಕವಾಗಿ ಮುಚ್ಚಲಾಗಿದ್ದ ವಿಮಾನ ನಿಲ್ದಾಣಗಳು ಈಗ ಕಾರ್ಯಾಚರಣೆಗೆ ಮುಕ್ತವಾಗಿವೆ ಎಂಬ ಸುದ್ದಿ ನೀಡಲು ನಾವು ಸಂತೋಷಪಡುತ್ತೇವೆ. ಸರ್ಕಾರದ ಹೊಸ ಸೂಚನೆಗಳ ಆಧಾರದ ಮೇಲೆ, ನಮ್ಮ ತಂಡಗಳು ಈಗ ಮಾರ್ನ ವಿಮಾನ ಸಂಚಾರ ಪುನರಾರಂಭಿಸಲು ತಕ್ಷಣ ಕೆಲಸ ಮಾಡುತ್ತಿವೆ. ಈ ಸಮಯದಲ್ಲಿ ನೀವು ತೋರಿಸುತ್ತಿರುವ ಸಹನೆ ಮತ್ತು ಸಹಕಾರಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದೆ.

Share.
Leave A Reply