ಮುಖದ ಅಂದವನ್ನ ಹೆಚ್ಚಿಸಿಕೊಳ್ಳೋಕೆ ಹೆಣ್ಮಕ್ಳು ಹಲವು ಕಾಸ್ಮೆಟಿಕ್‌ ಪ್ರಾಡಕ್ಸ್‌ಅನ್ನ ಬಳಸ್ತಾರೆ. ಆದ್ರೆ ಮಾರ್ಕೆಟ್‌ ಅಲ್ಲಿ ಸಿಗೋ ಪ್ರಾಡಕ್ಟ್‌ಗಳು ರಾಸಾಯನಿಕಗಳಿಂದ ತುಂಬಿರುತ್ವೆ. ಸೋ,  ಕೆಮಿಕಲ್‌ಯುಕ್ತ ಪ್ರಾಡಕ್ಟ್‌ಗಳನ್ನ ಬಳಸೋ ಬದಲು ಕೆಲವೊಂದನ್ನ ನೀವೇ ಮನೇಲಿ ತಯಾರಿಸ್ಬಹುದು. ಉದಾಹರಣೆಗೆ Mascara. ಕಣ್ಣಿನ ರೆಪ್ಪೆಯ ಕೂದಲ ಗಳನ್ನ ಇನ್ನೂ ಎನ್‌ಹ್ಯಾನ್ಸ್‌ ಮಾಡೋದಿಕ್ಕೆ, ಇನ್ನೂ ಗಾಢವಾಗಿ ಉದ್ದವಾಗಿ ಕಾಣುವಂತೆ ಮಾಡೋದಿಕ್ಕೆ ಮಸ್ಕರಾವನ್ನ ಬಳಸಲಾಗುತ್ತೆ.

ಕಣ್ಣಿಗೆ ಬಳಸೋ ಯಾವುದೇ ಪ್ರಾಡಕ್ಟ್‌ ಆಗಿರ್ಲಿ ಅದರ ಬಗ್ಗೆ ಸ್ವಲ್ಪ ಜಾಸ್ತಿ ಕಾಳಜಿ ಇರ್ಲೇಬೇಕು. ಯಾಕಂದ್ರೆ ಕಣ್ಣು ಬಹಳ ಸೂಕ್ಷ್ಮವಾದ ಅಂಗವಾಗಿದೆ. ಹೀಗಾಗಿ ಎಕ್ಸ್‌ಟ್ರಾ ಕೇರ್‌ ವಹಿಸಲೇಬೇಕಾಗುತ್ತೆ. ಕೆಮಿಕಲ್‌ಯುಕ್ತ Mascara ಬಳಕೆಯಿಂದ ಕಣ್ಣುಗಳಿಗೆ ಹಾನಿಯಾಗ್ಬಹುದು.‌ ಹೀಗಾಗಿ ಈ ಮಸ್ಕರಾವಾನ್ನ ಸುಲಭವಾಗಿ ನೀವು ಮನೇನಲ್ಲೇ ನ್ಯಾಚುರಲ್‌ ಇಂಗ್ರೀಡಿಯಂಟ್ಸ್‌ ಬಳಸಿ ತಯಾರಿಸಬಹುದು.

ಎರಡು ದೀಪದ ಹಣತೆಗಳನ್ನ ತಗೊಂದು ಅದ್ರಲ್ಲೊ ಎಂಟರಿಂದ ಹತ್ತು ಬಾದಾಮಿ, ಎರಡು ಚಮಚ ತುಪ್ಪ ಹಾಕಿ ಬರ್ನ್‌ ಮಾಡಿ. ಈ ರೀತಿ ಎರಡು ಲೋಟಗಳನ್ನ ಪಕ್ಕದಲ್ಲಿಟ್ಟು ಅದ್ರ ಮೇಲೆ ಒಂದು ತಟ್ಟೆಯನ್ನ ಮುಚ್ಚಿ. ಹೊಗೆಯಿಂದ ತಟ್ಟೆಯಲ್ಲಿ ಶೇಖರಣೆಯಾಗೋ ಮಸಿಯನ್ನ ಸ್ಪೂನ್‌ನಿಂದ ಸ್ಕ್ರೇಪ್‌ ಮಾಡಿ. ಇದಿಕ್ಕೆ ಒಂದು ಚಮಚ ವ್ಯಾಸಲಿನ್‌ ಜೆಲ್, ಒಂದು ಚಮಚ ಅಲೊವೆರಾ ಜೆಲ್‌ ಹಾಗೆ ಕಾಲು ಚಮಚ ಹರಳೆಣ್ಣೆ ಹಾಕಿ ಮಿಕ್ಸ್‌ ಮಾಡಿದ್ರೆ ಹೋಮ್‌ಮೇಡ್‌ ಮಸ್ಕರಾ ರೆಡಿಯಾಗುತ್ತೆ.

Also Read: Mysore Sandal Soap-Tamannaah : ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ಯಾಕೆ? MB Patil ಸ್ಪಷ್ಟನೆ

ಇದನ್ನ ಹಚ್ಚೋದ್ರಿಂದ ಕಣ್ಣಿನ ರೆಪ್ಪೆಯ ಕೂದಲಿನ ಆರೋಗ್ಯವೂ ಸುಧಾರಿಸುತ್ತೆ. ಸೋ ಒಂದ್‌ ಸಲ ಮನೆಯಲ್ಲೇ ಟ್ರೈ ಮಾಡಿ, ಹೇಗಿತ್ತು ಅಂತಾ ಕಾಮೆಂಟ್‌ ಮಾಡಿ..

Share.
Leave A Reply