ಇತ್ತೀಚಿಗೆ ಬೆಟ್ಟಿಂಗ್ ಆ್ಯಪ್ಗಳ ಹಾವಳಿ ಹೆಚ್ಚಾಗಿದ್ದು, ಯುವಕರೇ ಬಲಿಯಾಗ್ತಿದ್ದಾರೆ. ಜನರು ಬೆಟ್ಟಿಂಗ್ ಆ್ಯಪ್ಗಳಿಂದ ಲಕ್ಷ ಕೋಟಿಗೂ ಅಧಿಕ ಹಣ ಕಳೆದುಕೊಂಡು ಕಂಗಾಲಾಗುತ್ತಿದ್ದಾರೆ. ಬೆಟ್ಟಿಂಗ್ ಆ್ಯಪ್ಗಳಿಂದ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಳ್ಳೋದೆ ಹೆಚ್ಚು. ಆದ್ರೂ ಸಹ ಎಚ್ಚೆತ್ತುಕೊಳ್ಳದೇ ಬೆಟ್ಟಿಂಗ್ ಆ್ಯಪ್ ಆಳಕ್ಕೆ ಧುಮುಕಿ ಒದ್ದಾಡುವವರ ಸಂಖ್ಯೆ ಹೆಚ್ಚಾಗಿದೆ.
ಈ ಅಪ್ಲಿಕೇಶನ್‌ಗಳು ಸುಲಭವಾಗಿ ಹಣ ಗಳಿಸುವ ಆಸೆ ಭರವಸೆಯಿಂದ ಜನರನ್ನು ಆಕರ್ಷಿಸಿ ಜೂಜಾಟದ ಚಟಕ್ಕೆ ದೂಡುತ್ತಿವೆ. ಮೊಬೈಲ್ ತೆಗೆದು ಡೆಟಾ ಆನ್ ಮಾಡಿದ್ರೆ ಸಾಕು, ಬರೀ ಬೆಟ್ಟಿಂಗ್ ಆ್ಯಪ್ಗಳ ಅಡ್ವಟೈಸ್‌ಗಳೇ ಬರುತ್ವೇ. ಸೋಷಿಯಲ್ ಮೀಡಿಯಾದಲ್ಲಂತೂ ಕೇಳಲೇಬೇಡಿ, ಯುಟ್ಯೂಬರ್ಸ್, ಇನ್‌ಫ್ಲೂಯೆನ್ಸ್‌ರ್ಗಳಿಂದ ಬೆಟ್ಟಿಂಗ್ ಆ್ಯಪ್ಗಳ ಪ್ರಚಾರ ಮಿತಿಮೀರಿ ನಡೆಯುತ್ತಿದೆ.
ಅಲ್ಲದೇ ಬೆಟ್ಟಿಂಗ್ ಆಪ್‌ಗಳ ಪ್ರಚಾರದಲ್ಲಿ ಸೆಲೆಬ್ರಿಟಿಗಳದ್ದೇ ಹವಾ. ಸೆಲೆಬ್ರಿಟಿಗಳು ಬೆಟ್ಟಿಂಗ್ ಆ್ಯಪ್ಗಳ ಪ್ರಚಾರ ಮಾಡ್ತಿದ್ರಿಂದ, ಯುವಕರು ಬೆಟ್ಟಿಂಗ್ ಆಪ್‌ಗಳಿಗೆ ತುತ್ತಾಗುತ್ತಿದ್ದಾರೆ. ಸೆಲೆಬ್ರಿಟಿಗಳ ಈ ಬೆಟ್ಟಿಂಗ್ ಆಪ್‌ಗಳಿಗೆ ಕಡಿವಾಣ ಹಾಕಲು ಟೊಂಕ ಕಟ್ಟಿ ನಿಂತ ಇಡಿ, ರಶ್ಮಿಕಾ ಬಾಯ್‌ಫ್ರೆಂಡ್ ಸೇರಿ ೨೯ ನಟರ ವಿರುದ್ಧ ಕೇಸ್ ದಾಖಲಿಸಿಕೊಂಡಿದೆ.
ಪ್ರಕಾಶ್ ರಾಜ್, ನಿಧಿ ಅಗರ್ವಾಲ್, ವಿಜಯದೇವರಕೊಂಡ, ಶ್ರೀಮುಖಿ, ರಾಣಾ, ಮಂಚು ಲಕ್ಷ್ಮಿ, ಅನನ್ಯ ನಾಗಲ್ಲ, ಸಿರಿ ಹನುಮಂತು, ವರ್ಷಿಣಿ ಸೌಂದರರಾಜನ್, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ಪ್ರಿಯಾ, ಸನ್ನಿ ಯಾ ವಿಷ್ಣು, ಸನ್ನಿ ಖಾನ್ ತೇಜ, ಬಂಡಾರು ಶೇಷಾಯಣಿ ಸುಪ್ರಿತಾ ವಿರುದ್ಧ ಪ್ರಕರಣ ದಾಖಲಾಗಿದೆ. ಮಿಯಾಪುರ ಮೂಲದ ಉದ್ಯಮಿ ಪಿ.ಎಂ. ಫಣೀಂದ್ರ ಶರ್ಮಾ ಅವರ ದೂರಿನ ಮೇರೆಗೆ ಸೆಲೆಬ್ರಟಿಗಳು ಹಾಗೂ ವಿವಿಧ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಮಿಯಾಪುರ ಮೂಲದ ಉದ್ಯಮಿ ಪಿ.ಎಂ. ಫಣೀಂದ್ರ ಶರ್ಮಾ ಅವರ ದೂರಿನ ಮೇರೆಗೆ ಸೆಲೆಬ್ರಟಿಗಳು ಹಾಗೂ ವಿವಿಧ ಕಂಪನಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸೆಲೆಬ್ರಿಟಿಗಳು ಮತ್ತು ಪ್ರಭಾವಿಗಳು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವಿಶೇಷವಾಗಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಫಣೀಂದ್ರ ಶರ್ಮಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.
ಈ ಆ್ಯಪ್ ಗಳು ಹಾಗೂ ಮಧ್ಯಮ ವರ್ಗದವರ ಮೂಲಕ ಸಾವಿರಾರು ಕೋಟಿ ರೂ. ಕೆಳ ಮಧ್ಯಮ ವರ್ಗದ ಕುಟುಂಬಗಳು ಆರ್ಥಿಕ ನಷ್ಟವನ್ನು ಎದುರಿಸುತ್ತಿವೆ. ಈ ಅಪ್ಲಿಕೇಶನ್‌ಗಳು ಸುಲಭವಾಗಿ ಹಣ ಗಳಿಸುವ ಆಸೆ ಭರವಸೆಯಿಂದ ಜನರನ್ನು ಆಕರ್ಷಿಸುತ್ತಿವೆ ಮತ್ತು ಅವರನ್ನು ಜೂಜಾಟದ ಚಟಕ್ಕೆ ಎಳೆಯುತ್ತಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
