ಬಿಗ್ಬಾಸ್ ವೀಕ್ಷಕರ ಫೈನಲ್ ಲೆಕ್ಕಾಚಾರ ಏನು?
ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿರುವ ಬಿಗ್ಬಾಸ್ ಸೀಸನ್ ಹನ್ನೊಂದು(Bigg boss season 11) ಮಹತ್ವದ ಘಟ್ಟಕ್ಕೆ ಬಂದು ತಲುಪಿದೆ. ಬಿಗ್ ಬಾಸ್ ಫಿನಾಲೆಗೆ ಇನ್ನೇನು 2-3 ವಾರಗಳಷ್ಟೇ ಬಾಕಿ ಉಳಿದಿದೆ. ಈ ವಾರ ಭವ್ಯಾ ಗೌಡ, ಚೈತ್ರಾ ಕುಂದಾಪುರ, ಧನರಾಜ್ ಆಚಾರ್, ಮೋಕ್ಷಿತಾ ಪೈ ಹಾಗೂ ತ್ರಿವಿಕ್ರಮ್ ಸೇರಿ ಒಟ್ಟು ಐದು ಜನ ನಾಮಿನೇಟ್ ಆಗಿದ್ದಾರೆ. ಇದೀಗ ಈ ಬೆನ್ನಲ್ಲೇ ಈ ಐವರಲ್ಲಿ ದೊಡ್ಮನೆಗೆ ಗುಡ್ ಬೈ ಹೇಳೋರು ಯಾರು ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಫಿನಾಲೆಗೆ 5 ಸ್ಪರ್ಧಿಗಳಷ್ಟೇ ಎಂಟ್ರಿಯಾಗುವ ಅವಕಾಶವಿದೆ. ಅವರ ಹೊರತಾಗಿ ಇನ್ನುಳಿದ ಕಂಟೆಸ್ಟೆಂಟ್ಗಳು ಗಂಟುಮೂಟೆ ಕಟ್ಟುವುದು ಖಚಿತ. ಸದ್ಯ ಈ ವಾರ ನಾಮಿನೇಟ್ ಆದ ಐವರಲ್ಲಿ ಚೈತ್ರಾ ಕುಂದಾಪುರ ಹೊರಬರುವುದು ಗ್ಯಾರಂಟಿ ಅನ್ನೋ ಲೆಕ್ಕಾಚಾರ ಬಿಗ್ಬಾಸ್ ವೀಕ್ಷಕರದ್ದು. ಆದರೆ ಈ ವಾರ ಡಬಲ್ ಎಲಿಮಿನೇಷನ್ ಇರುವ ಸಾಧ್ಯತೆ ಇದೆ. ಏಕೆಂದರೆ ಉಳಿದಿರುವುದು ಕೇವಲ 2 ವಾರವಷ್ಟೇ. ಹೀಗಿರುವಾಗ ನಾಲ್ವರು ಮನೆಯಿಂದ ಹೊರಹೋಗಲೇಬೇಕಾದ ಪರಿಸ್ಥಿತಿ ಇದೆ. ಆದರೆ ಈ ಬಗ್ಗೆ ಇನ್ನೂ ಯಾವುದೂ ಪಕ್ಕಾ ಆಗಿಲ್ಲ. ಇನ್ನೊಂದೆಡೆ ಚೈತ್ರಾ ಕುಂದಾಪುರ ಅವರಿಗೆ ಓಟ್ ತೀರಾ ಕಡಿಮೆಯಿದೆ. ಅವರು ಇದುವರೆಗೆ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವುದು ತನ್ನ ಮಾತುಗಳಿಂದಲೇ ಎಂಬುದು ವೀಕ್ಷಕರ ಮಾತು. ಒಂದಷ್ಟು ಫ್ಯಾನ್ ಫಾಲೋವರ್ಸ್ ಇದೆ ಹೊರತು, ಹೇಳಿಕೊಳ್ಳುವಷ್ಟು ಛಾಪು ಮೂಡಿಸಿಲ್ಲ ಚೈತ್ರಾ ಕುಂದಾಪುರ. ಈ ಹಿನ್ನೆಲೆಯಲ್ಲಿ ಅವರು ಹೊರ ಬೀಳುವ ಸಾಧ್ಯತೆ ಇದೆ……..
ನಾಮಿನೇಟ್ ಆದ ಐವರಲ್ಲಿ ತ್ರಿವಿಕ್ರಮ್(Trivikram), ಧನರಾಜ್ ಆಚಾರ(Dhanraj Acharya), ಭವ್ಯಾ ಗೌಡ (Bhavya Gowda)ಉತ್ತಮವಾಗಿ ಆಟವಾಡುತ್ತಾ ಬಂದಿದ್ದಾರೆ. ಇವರನ್ನು ಹೊರತುಪಡಿಸಿ, ಉಳಿದ ಇಬ್ಬರು ಕಂಟೆಸ್ಟೆಂಟ್ ಅಂದ್ರೆ ಚೈತ್ರಾ ಮತ್ತು ಮೋಕ್ಷಿತಾ ಪೈ.
ಇವರಿಬ್ಬರ ಪೈಕಿ ಮೋಕ್ಷಿತಾ ಅವರಿಗೆ ವೀಕ್ಷಕರ ಸಪೋರ್ಟ್ ಇದೆ. ಆದರೆ ಕಳೆದ ಎರಡು ಮೂರು ವಾರಗಳಿಂದ ಮೋಕ್ಷಿತಾ ತುಂಬಾ ಡಲ್ ಆಗಿ ಕಾಣಿಸಿಕೊಂಡಿದ್ದಾರೆ. ಚೆನ್ನಾಗಿ ಆಡುತ್ತಿಲ್ಲ ಎಂಬುದು ಅನೇಕರ ಮಾತು. ಇದರ ಹೊರತಾಗಿ ಓಟಿಂಗ್ ಪ್ರಕಾರ ನೋಡಿದರೆ ಮೋಕ್ಷಿತಾ ಎಲಿಮಿನೇಟ್ ಆಗುವುದು ಅನುಮಾನ. ಬೇರೆ ವಿಚಾರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಮೋಕ್ಷಿತಾ ಸೇಫ್ ಆಗುವುದು ಅನುಮಾನ. ಇವರಲ್ಲದಿದ್ದರೆ ಧನರಾಜ್ ಆಚಾರ್ಯ ಕೂಡ ಈ ವಾರ ಎಲಿಮಿನೇಟ್ ಆದರೂ ಆಗಬಹುದು ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಈ ವಾರದ ಎಪಿಸೋಡ್ ಸಖ್ಖತ್ ಥ್ರಿಲ್ ಆಗಿರೋದಂತು ನಿಜ.