ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅಧೋಗತಿಯಾಗಿದೆ.. ವಾಯುಮಾಲಿನ್ಯವಂತೂ ಈ ಋತುವಿನಲ್ಲೇ ಅತ್ಯಂತ ಕೆಟ್ಟ ಸ್ಥಿತಿಗೆ ತಲುಪಿದೆ.. ತೀವ್ರ ಮಟ್ಟದಿಂದ ʻತೀವ್ರ ಪ್ಲಸ್’ ಮಟ್ಟಕ್ಕೆ ಮಾಲಿನ್ಯ ತಲುಪಿದ್ದು ವೃದ್ಧರು, ಮಕ್ಕಳು, ಉಸಿರಾಟದ ತೊಂದರೆ ಇರುವವರು ಪರದಾಡುವಂತಾಗಿದೆ.. ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಕಾರಣ ದೆಹಲಿ ಸರ್ಕಾರ ಮಹತ್ವದ ನಿರ್ಧಾರ ತೆಗದುಕೊಂಡಿದೆ. ರಾಜ್ಯದ ಎಲ್ಲಾ ಶಾಲೆಗಳಲ್ಲಿ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಆನ್ಲೈನ್ ತರಗತಿಗಳನ್ನು ನಡೆಸುವಂತೆ ನಿರ್ದೇಶಿಸಿದೆ. ಇತ್ತ 9 ಮತ್ತು 11 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್ ಮೋಡ್ನಲ್ಲಿ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ.. ಇನ್ನೂ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ಶೇ.50ರಷ್ಟು ನೌಕರರಿಗೆ ವರ್ಕ್ ಫ್ರಮ್ ಹೋಮ್ ಕಡ್ಡಾಯಗೊಳಿಸಿದೆ.. ಜೊತೆಗೆ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಿದ್ದು, ಕಾರ್ಮಿಕರಿಗೆ 10,000 ರೂ. ಪರಿಹಾರವನ್ನು ಘೋಷಿಸಲಾಗಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಅಲ್ಲದೇ BS-6ಗಿಂತ ಕಡಿಮೆ ವಾಹನಗಳನ್ನು ರಾಷ್ಟ್ರ ರಾಜಧಾನಿಯಲ್ಲಿ ಬ್ಯಾನ್ ಮಾಡಲಾಗಿದೆ.. ಪಿಯುಸಿಸಿ ಇಲ್ಲದ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಸಿಗದಿರಲು ನಿರ್ಧರಿಸಲಾಗಿದೆ.. ಡೀಸೆಲ್ ಜನರೇಟರ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ.. coal ಮತ್ತು firewood tandoorಗಳನ್ನು ಬ್ಯಾನ್ ಮಾಡಿ ತಂದೂರಿ ಚಿಕನ್ ಪ್ರಿಯರಿಗೆ ಶಾಕ್ ನೀಡಿದೆ.. ಇನ್ನು ಇತ್ತೀಚೆಗೆ ಬೆಂಗಳೂರಿನಲ್ಲೂ ಗಾಳಿಯ ಗುಣಮಟ್ಟ ಸೂಚ್ಯಂಕ ಕುಸಿಯುತ್ತಿರುವ ಕಾರಣ ದೆಹಲಿಯ ಸ್ಥಿತಿಯೇ ಎದುರಾಗಬಹುದೆಂಬ ಆತಂಕ ಎದುರಾಗಿದೆ.. ಮಕ್ಕಳು, ವೃದ್ಧರು, ಉಸಿರಾಟದ ಸಮಸ್ಯೆ ಇರುವವರು ಇದರ ಬಗ್ಗೆ ಗಮನ ಹರಿಸಬೇಕಿದೆ..
Subscribe to Updates
Get the latest creative news from FooBar about art, design and business.
Previous ArticleRCB ಮಡಿಲಿಗೆ ಯಾರ್ ಬಂದ್ರು ಗೊತ್ತಾ?
Next Article ವೃದ್ಧನ ಬಲಿ ಪಡೆದ ಬಿಇ ವಿದ್ಯಾರ್ಥಿ
