ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ಗೆ ವಿಘ್ನಗಳು ಒಂದಾದ ಮೇಲೊಂದರಂತೆ ಕಾಡುತ್ತಿವೆ.. ಈಗಾಗ್ಲೇ ಹುಲಿ ಉಗುರು, ಪತ್ನಿ ಮೇಲೆ ಹಲ್ಲೆ, ರೇಣುಕಾಸ್ವಾಮಿ ಕೊಲೆ ಕೇಸ್‌ ಸೇರಿದಂತೆ ಹಲವು ಕೇಸ್‌ಗಳ ಬಳಿಕ ಮತ್ತೊಂದು ಸಂಕಷ್ಟ ಎದುರಾಗಿದೆ.. ಇದೀಗ ದರ್ಶನ್‌ಗೆ(Darshan Case) ಹಳೆಯ ಕೇಸ್​​ಗೆ ಸಂಬಂಧಿಸಿ ನೋಟಿಸ್ ನೀಡಲಾಗಿದೆ.

ಮೈಸೂರಿನ ತಮ್ಮ ಫಾರಂ ಹೌಸ್ ನಲ್ಲಿ ವಿದೇಶಿ ಬಾತು ಕೋಳಿ ಸಾಕಿದ್ದ ಕೇಸ್​ಗೆ ಸಂಬಂಧಿಸಿ ಈಗ ಹೊಸ ಸಮನ್ಸ್‌ ನೀಡಲಾಗಿದೆ. ತಿ.‌ನರಸೀಪುರ ನ್ಯಾಯಾಲಯದಿಂದ ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ ಗೆ ಸಮನ್ಸ್ ಜಾರಿಯಾಗಿದೆ.. ವಿಚಾರಣೆಗೆ ಹಾಜರಾಗಲು ಸಮಸ್ಸ್ ಜಾರಿ ಮಾಡಿರೋ ನ್ಯಾಯಾಲಯ ʼಬಾರ್‌ ಹೆಡೆಡ್‌ ಗೂಸ್‌ʼ ಎಂಬ 4 ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ಸಾಕಿದ್ದ ದರ್ಶನ್ ವಿರುದ್ಧ ವಿಚಾರಣೆಗೆ ಬರುವಂತೆ ನೋಟಿಸ್​​ನಲ್ಲಿ ತಿಳಿಸಿದೆ..

Also Read: policeman extramarital affair: ಪತ್ನಿಗೆ ಕಾಟ.. ಪರಸ್ತ್ರೀಯರ ಜತೆ ಪೊಲೀಸಪ್ಪನ ಚೆಲ್ಲಾಟ !

ಕೆಂಪಯ್ಯನ ಹುಂಡಿಯ ನಟ ದರ್ಶನ್ ತೋಟದ ಮೇಲೆ ದಾಳಿ ಮಾಡಿದ್ದ ಅರಣ್ಯಾಧಿಕಾರಿಗಳು, ಈ ವೇಳೆ ವಿದೇಶಿ ಪ್ರಭೇದದ ಬಾತು ಕೋಳಿ ವಶಕ್ಕೆ ಪಡೆದಿದ್ದರು. ಬಾರ್‌ ಹೆಡೆಡ್‌ ಗೂಸ್‌ ಹೆಚ್ಚಾಗಿ ಮಧ್ಯ ಏಷ್ಯಾ ಪ್ರದೇಶದ್ದಾಗಿದ್ದು, ಅವು ವಲಸೆ ಬಂದಿದ್ದವು.. ಇವುಗಳನ್ನು ಸಾಕುವುದು ವನ್ಯಜೀವಿ ಸಂರಕ್ಷಣೆಯ ಕಾಯ್ದೆಯಡಿ ಅಪರಾಧ. ಬಾತುಕೊಳಿಗಳನ್ನ ಸ್ನೇಹಿತರು ನೀಡಿದ್ದರು ಅಂತಾ ದರ್ಶನ್ ಸ್ಪಷ್ಟನೆ ನೀಡಿದ್ದರು.

ನಟ ದರ್ಶನ್ ವಿರುದ್ಧ ನಿಷೇಧಿತ ವನ್ಯ ಪಕ್ಷಿಗಳ ಸಾಕಣೆಗಾಗಿ ಪ್ರಕರಣ ದಾಖಲಾಗಿತ್ತು. ಇದೀಗ ನ್ಯಾಯಾಲಯ ವಿಚಾರಣೆಗೆ ಬರುವಂತೆ ನಟನಿಗೆ ಸಮನ್ಸ್ ನೀಡಿದೆ. ತಿ.ನರಸೀಪುರ ಕೋರ್ಟ್‌, ದರ್ಶನ್‌ ಹಾಗೂ ವಿಜಯಲಕ್ಷ್ಮೀಗೆ ಹೊಸ ಸಮನ್ಸ್‌ ಜಾರಿ ಮಾಡಲಾಗಿದೆ..

Share.
Leave A Reply