ದೇಶದ ರಾಜಧಾನಿ ವಿಷಪೂರಿತವಾಗಿದೆ. ಅಲ್ಲಿ ಬದುಕುವುದು ಅಕ್ಷರಶಃ ಸಾವಿಗೆ ದಾರಿ ಮಾಡಿಕೊಟ್ಟಂತಾಗುತ್ತಿದೆ. ವಿಷಗಾಳಿ, ಮೈಕೊರೆಯುವ ಚಳಿಯಿಂದ ಅಲ್ಲಿನ ಜನರ ಬದುಕು ತತ್ತರಿಸಿ ಹೋಗುತ್ತಿದೆ. ದಿನ ಕಳೆದಂತೆ ವಾತಾವರಣ ಹದಗೆಡುತ್ತಿದೆ. ಹೀಗಾಗಿ ಅಲ್ಲಿನ ಶಾಲಾ-ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಲಾಗಿದೆ.

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿಯುತ್ತಿದೆ. ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಕಂಡುಬಂದ ದಟ್ಟ ಮಂಜಿನ ಹೊದಿಕೆ ಜನಜೀವನವನ್ನು ಸಂಪೂರ್ಣವಾಗಿ ಸ್ತಬ್ದಗೊಳಿಸಿದೆ. ಕಣ್ಣೆದುರಿಗಿನ ರಸ್ತೆಯೇ ಕಾಣದಷ್ಟು ದಟ್ಟವಾಗಿ ಹರಡಿರುವ ಮಂಜು, ಅತ್ತ ಉಸಿರುಗಟ್ಟಿಸುವ ವಾಯು ಮಾಲಿನ್ಯ ಅಲ್ಲಿನ ಜನರನ್ನು ಹೈರಾಣಾಗಿಸಿದೆ. ನೋಯ್ಡಾದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿಮಾನಗಳ ಹಾರಾಟದಲ್ಲಿ ಏರುಪೇರಾಗಿದೆ, ರೈಲುಗಳು ತಡವಾಗಿ ಸಂಚರಿಸುತ್ತಿವೆ.

ವಿಷಗಾಳಿ ಸೇವನೆಯಿಂದ ಅಲ್ಲಿನ ಜನ ದಿನದಿಂದ ದಿನಕ್ಕೆ ಅನಾರೋಗ್ಯ ಹೊಂದುತ್ತಿದ್ದಾರೆ. ಹೀಗಾಗಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಹಲವೆಡೆ ವಿಸಿಬಿಲಿಟಿ ‘ಶೂನ್ಯ’ಕ್ಕೆ ಇಳಿದಿದೆ.

Share.
Leave A Reply