2019-20ರಲ್ಲಿ ಮೂರು ಅಲೆಗಳಾಗಿ ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ Covid ಮಹಾಮಾರಿ ಒಮ್ಮೆ ತೊಲಗಿದ್ರೆ ಸಾಕಪ್ಪ ಅಂತ ಜನರೆಲ್ಲಾ ರೋಧಿಸಿದ್ರು. ಲಕ್ಷಾಂತರ ಜನರನ್ನು ಬಲಿ ಪಡೆದು ಈ ಕಾಯಿಲೆ ಮಾಯವಾಗಿತ್ತು.. ಆದ್ರೆ ಈಗ ಮತ್ತೆ ಈ ಮಹಾಮಾರಿ ವಕ್ಕರಿಸಿರುವ ಆತಂಕ ಶುರುವಾಗಿದೆ.

ಈ ಹಿಂದೆ ಹೊರ ದೇಶಗಳಿಗೆ ಹೋಗುವಾಗ, ಬರುವಾಗ ಎಚ್ಚರಿಕೆ ವಹಿಸದೇ ಇದಿದ್ದಕ್ಕೆ ಅಷ್ಟೆಲ್ಲಾ ಅವಾಂತರಗಳಾಗಿತ್ತು. ಆದ್ರೆ ಈಗ ಭಾರತೀಯರು ಈ ದೇಶಗಳಿಗೆ ಹೋಗುವವರಿದ್ರೆ ಎಚ್ಚರಿಕೆ ವಹಿಸಿ.. ನಿಮ್ಮ ಪ್ರಯಾಣವನ್ನು ಒಂದೆರಡು ತಿಂಗಳು ಮುಂದೆ ತಳ್ಳಿ.

ಏಷ್ಯಾದ ಕೆಲವು ದೇಶಗಳಲ್ಲಿ ಕೋವಿಡ್‌ ವೈರಸ್‌ ಅತ್ಯಂತ ವೇಗವಾಗಿ ಹರಡುತ್ತಿದೆ.. ಹಾಂಗ್ ಕಾಂಗ್ ಮತ್ತು ಸಿಂಗಾಪುರದಲ್ಲಿ ಸೋಂಕುಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದ್ರಿಂದ ಏಷ್ಯಾದ್ಯಂತ ದೊಡ್ಡ ಅಲೆಯನ್ನೇ ಶುರು ಮಾಡುವ ಆತಂಕವನ್ನು ಸೃಷ್ಟಿ ಮಾಡಿದೆ. ಹಾಂಗ್ ಕಾಂಗ್‌ನಲ್ಲಿ ಅಂತೂ ಕೋವಿಡ್‌ ಸೋಂಕು ಗರಿಷ್ಠ ಮಟ್ಟವನ್ನು ತಲುಪಿದೆ ಅಂತ ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Also Read: ನಾಳೆಯಿಂದ Bengaluru ಭಾರೀ ಮಳೆ!

ಹೀಗಾಗಿ ಈ ಎರಡು ದೇಶಗಳು ಫುಲ್‌ ಅಲರ್ಟ್‌ ಆಗಿದ್ದು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿವೆ. ಇತ್ತ ಚೀನಾ, ಥೈಲ್ಯಾಂಡ್‌ನಲ್ಲೂ ಕೋವಿಡ್‌ ದಿನೇ ದಿನೇ ಹೆಚ್ಚುತ್ತಿದೆ ಅಂತ ವರದಿಯಾಗಿದೆ. ಜನರು ಕೂಡಲೇ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಇಲಾಖೆ ಸೂಚಿಸಿದೆ ಅಂತ ಹೇಳಲಾಗಿದೆ..

Share.
Leave A Reply