ದೇಶಾದ್ಯಂತ ಮಹಾಮಾರಿ Corona ಮತ್ತೆ ಆರ್ಭಟಿಸುತ್ತಿದೆ. ಅದ್ರಲ್ಲೂ ರಾಜ್ಯದಲ್ಲೂ ಕೊರೊನಾ ಸೋಂಕು ವಿಪರೀತವಾಗಿ ಹಬ್ಬುತ್ತಿದೆ. ಬೆಂಗಳೂರು ಬೆಳಗಾವಿ ಸೇರಿದಂತೆ ಹಲವೆಡೆ ಗರ್ಭಿಣಿಯರು, ಮಕ್ಕಳಿಗೆ ಹೆಚ್ಚಾಗಿ ಕಾಡುತ್ತಿದೆ. ಈಗಾಗ್ಲೇ 35 ಸಕ್ರಿಯ ಕೋವಿಡ್ ಪ್ರಕರಣ ಕಂಡು ಬಂದಿದೆ. ಈ ಪೈಕಿ ಬೆಂಗಳೂರಿನಲ್ಲಿಯೇ 32 ಸಕ್ರಿಯ ಪ್ರಕರಣಗಳು ದಾಖಲಾಗಿವೆ. ಹೀಗಾಗಿ, ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ದೆಹಲಿ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ Corona ಪ್ರಕರಣಗಳು ಕಂಡು ಬಂದಿದ್ದು ಅಲ್ಲಿನ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿಯೂ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾರ್ವಜನಿಕರು ಅನುಸರಿಸಬೇಕಾದ ಮುಂಜಾಗೃತಾ ಕ್ರಮ, ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹಾಗಾದ್ರೆ, ಸರ್ಕಾರದ ಮಾರ್ಗಸೂಚಿಯಲ್ಲಿ ಏನಿದೆ ಅನ್ನೋದನ್ನು ಹೇಳ್ತೀವಿ ನೋಡಿ.
Also Read: ಹೊಸ ಫಾಸ್ಟ್‌ಟ್ಯಾಗ್ ಟೋಲ್ ನೀತಿ : ಒಮ್ಮೆ ರೂ. 3000 ಪಾವತಿಸಿ, ಅನಿಯಮಿತವಾಗಿ ಚಾಲನೆ ಮಾಡಿ
ಗೈಡ್‌ಲೈನ್ಸ್‌ನಲ್ಲಿ ಏನಿದೆ? ಅನ್ನೋದಾದ್ರೆ,
- ಗರ್ಭಿಣಿಯರು, ಮಕ್ಕಳ ಆರೋಗ್ಯದ ಬಗ್ಗೆ ನಿಗಾವಹಿಸಿ
- ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ, ಅಂತರವಿರಲಿ
- ಮಕ್ಕಳು, ವೃದ್ಧರು, ಅನಾರೋಗ್ಯ ಇದ್ರೆ ಮಾಸ್ಕ್ ಧರಿಸುವುದು
- ನೆಗಡಿ, ಕೆಮ್ಮು, ಜ್ವರದ ಸಮಸ್ಯೆ ಇದ್ರೆ ನಿರ್ಲಕ್ಷ್ಯ ಬೇಡ
- ಜನದಟ್ಟಣೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಓಡಾಡಬೇಕು
- ನಿಯಮಿತವಾಗಿ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು
- ಉಸಿರಾಟದ ಸಮಸ್ಯೆ ಇರೋರು ಚಿಕಿತ್ಸೆ ಪಡೆಯಬೇಕು
- ಸಂಭಾವ್ಯ ಅಪಾಯ ತಡೆಗಟ್ಟಲು ಕೊವಿಡ್ ಟೆಸ್ಟ್ ಮಾಡಿಸಿ
ನೀವು ಕೊರೊನಾ ಬಗ್ಗೆ ಜಾಗೃತೆ ವಹಿಸಿ.. ಮತ್ತೆ ಕೊರೊನಾ ಕಾಲ, ಮಾಸ್ಕ್ ಧರಿಸಿ ಓಡಾಡುವ ಕಾಲ ಬಂದರೂ ಅಚ್ಚರಿಪಡಬೇಕಿಲ್ಲ.
