ಬಿಗ್‌ಬಾಸ್ ಕನ್ನಡ ಸೀಸನ್ 12 ಶುರುವಾಗಿ ಕೇವಲ ಒಂದು ದಿನಕ್ಕೆ ಅತಿದೊಡ್ಡ ಟ್ವಿಸ್ಟ್ ಸಿಕ್ಕಿದೆ. ಮೊದಲ ದಿನವೇ ಯಾರೂ ಊಹಿಸಿರದ ಎಲಿಮಿನೇಷನ್ ನಡೆದಿದೆ. ಭಾನುವಾರವಷ್ಟೇ ಬಿಗ್‌ಬಾಸ್ ಮನೆಗೆ ಕಾಲಿಟ್ಟ ಸ್ಪರ್ಧಿ ರಕ್ಷಿತಾ ಶೆಟ್ಟಿ ಒಂದೇ ದಿನಕ್ಕೆ ತಮ್ಮ ಬಿಗ್‌ಬಾಸ್ ಪಯಣ ಮುಗಿಸಿದ್ದಾರೆ. ಶೋಗೆ ಹೋಗಾಯ್ತು ಎಂದು ಖುಷಿಪಡುವಷ್ಟರಲ್ಲೇ ಸ್ಪರ್ಧಿಗಳಿಗೆ ಎಲಿಮಿನೇಷನ್ ಶಾಕ್ ಕೊಟ್ಟಿರುವ ಬಿಗ್ ಬಾಸ್ ಮೊದಲ ಸ್ಪರ್ಧಿಗೆ ಮೊದಲ ದಿನವೇ ಟಾಟಾ ಹೇಳಿದ್ದಾರೆ. ಮುಂಬೈ ಮೂಲದ ತುಳುನಾಡ ಚೆಲುವೆ ಪುಟ್ಟ ಪೋರಿ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಮೊದಲ ದಿನವೇ ದೊಡ್ಡ ಟ್ವಿಸ್ಟ್ ಕೊಟ್ಟಿರುವ ಬಿಗ್ ಬಾಸ್ ರಕ್ಷಿತಾಗೆ ಗೇಟ್‌ಪಾಸ್ ನೀಡಿದ್ದಾರೆ.. ಆದ್ರೆ ಶಾಕಿಂಗ್ ಕಾರಣವೊಂದು ರೀವೀಲ್ ಆಗಿದೆ..

ಬಿಗ್ ಬಾಸ್ ಕನ್ನಡ 12ರಲ್ಲಿ ಒಂಟಿ ವರ್ಸಸ್ ಜಂಟಿ ಟಾಸ್ಕ್ ಇರುವುದು ಗೊತ್ತೇ ಇದೆ. ಯಾರು ಒಂಟಿಯಾಗಬೇಕು, ಯಾರು ಜಂಟಿಯಾಗಬೇಕು ಎಂಬುದನ್ನು ಆಡಿಯೆನ್ಸ್ ತೀರ್ಮಾನ ಮಾಡಿ ಕಳುಹಿಸಿದ್ದಾರೆ. ಸ್ಪರ್ಧಿಗಳು ಒಂಟಿಗಳಾಗಿ, 5 ಸ್ಪರ್ಧಿಗಳು ಜಂಟಿಗಳಾಗಿ ಹಾಗೂ 3 ಸ್ಪರ್ಧಿಗಳು ಅತಂತ್ರರಾಗಿ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದರು. ರಕ್ಷಿತಾ ಶೆಟ್ಟಿ, ಮಾಳು ನಿಪನಾಳ, ಸ್ಪಂದನಾ ಅವರು ಅತಂತ್ರ ಸ್ಥಿತಿಯಲ್ಲಿ ಇದ್ದರು. ಆ ಮೂವರಲ್ಲಿ ಇಬ್ಬರನ್ನು ಉಳಿಸಬೇಕು, ಒಬ್ಬರನ್ನು ಹೊರಗೆ ಕಳಿಸಬೇಕು ಎಂಬ ಪರಿಸ್ಥಿತಿ ನಿರ್ಮಾಣ ಆಯಿತು. ಈ ನಿರ್ಧಾರವನ್ನು ತೆಗೆದುಕೊಳ್ಳುವ ಅಧಿಕಾರವನ್ನು 6 ಒಂಟಿಗಳಿಗೆ ನೀಡಲಾಯಿತು.. 6 ಒಂಟಿಗಳ ಎದುರು ನಿಂತು ರಕ್ಷಿತಾ ಶೆಟ್ಟಿ, ಮಾಳು ನಿಪನಾಳ ಹಾಗೂ ಸ್ಪಂದನಾ ಅವರು ತಮ್ಮ ಸಾಮರ್ಥ್ಯದ ಬಗ್ಗೆ ಮನವೊಲಿಸಲು ಪ್ರಯತ್ನಿಸಿದರು. ‘ನಾನು ಮಿಡ್ಲ್ ಕ್ಲಾಸ್ ಹುಡುಗ. 2-3 ದಿನ ಆದರೂ ಈ ಮನೆಯಲ್ಲಿ ಇರಬೇಕು ಎಂಬ ಆಸೆ ಇದೆ. ಉಳಿಸೋದು ಬಿಡೋದು ನಿಮ್ಮ ಕೈಯಲ್ಲಿದೆ’ ಎಂದು ಮಾಳು ನಿಪನಾಳ ಹೇಳಿದರು.
ಮತ್ತೊಂದೆಡೆ, ಸ್ಪಂದನಾ ಕೂಡ ಬಲವಾದ ಮಾಡಿದರು. ಸ್ಟಾಂಗ್ ಮನಸ್ಥಿತಿಯ ಹುಡುಗಿ ನಾನು. ಈ ಜರ್ನಿ ನನಗೆ ಬಹಳ ಮುಖ್ಯ. ನನನ್ನು ಸೆಲೆಕ್ಟ್ ಮಾಡಿ, ಉಳಿಸಿಕೊಳ್ಳಿ’ ಎಂದು ಸ್ಪಂದನಾ ಅವರು ಮನವಿ ಮಾಡಿದರು. ಮತ್ತೊಂದೆಡೆ ರಕ್ಷಿತಾ ಶೆಟ್ಟಿ ಕೂಡ ಪಟ್ಟು ಹಿಡಿದರು.. ಈಗ ನನಗೆ ಅವಕಾಶ ಸಿಕ್ಕಿದೆ. ತುಳುನಾಡಲ್ಲಿ ನಾನು ಸ್ವಲ್ಪ ಜನರಿಗೆ ಗೊತ್ತು. ಬಿಗ್ ಬಾಸ್ ಅವಕಾಶ ಸಿಕ್ಕರೆ ಹೆಚ್ಚಿನ ಜನರಿಗೆ ಕನೆಕ್ಟ್ ಆಗಬಹುದು. ಬೆಳೆದಿದ್ದು ತುಳು ವಾತಾವರಣದಲ್ಲಿ ಹಾಗೂ ಮುಂಬೈನಲ್ಲಿ. ಇಲ್ಲಿ ಇದ್ದರೆ ಕನ್ನಡ ಕಲಿಯುತ್ತೇನೆ’ ಎಂದು ರಕ್ಷಿತಾ ಶೆಟ್ಟಿ ಹೇಳಿದರು.

ಮತ್ತೊಂದ್ಕಡೆ, ಒಂಟಿಗಳು ತಮ್ಮ ಅಭಿಪ್ರಾಯ ಮಂಡಿಸಿದರು. ಮಾಳು ಮತ್ತು ಸ್ಪಂದನಾ ಇರಬೇಕು. ರಕ್ಷಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ತಪ್ಪು ತಪ್ಪು ಕನ್ನಡ ಮಾತನಾಡಿ ಫೇಮಸ್ ಆಗಿದ್ದಾಳೆ. ಅವಳಿಗೆ ಬೇರೆ ಕೆಲಸ ಇದೆ’ ಎಂದು ಅಭಿಪ್ರಾಯ ಒಂಟಿಗಳಿಂದ ಕೇಳಿಬಂತು. ಅಂತಿಮವಾಗಿ ಅಶ್ವಿನಿ ಗೌಡ ಅವರು ಎಲ್ಲರ ಪರವಾಗಿ ನಿರ್ಧಾರ ಘೋಷಿಸಿದರು. ಮಾಳು ನಿಪನಾಳ ಮತ್ತು ಸ್ಪಂದನಾ ಅವರನ್ನು ಉಳಿಸಿಕೊಂಡು ರಕ್ಷಿತಾ ಶೆಟ್ಟಿಗೆ ಗೇಪ್ ಪಾಸ್ ನೀಡಲಾಯಿತು. ಹೆಚ್ಚೇನೂ ಎಮೋಷನಲ್ ಆಗದೇ ರಕ್ಷಿತಾ ಶೆಟ್ಟಿ ಅವರು ಮುಖ್ಯದ್ವಾರದಿಂದ ಹೊರನಡೆದರು.
Read Also : ಊಟಕ್ಕಿಂತ ಮುಂಚೆ ಇದನ್ನ ತಿಂದ್ರೆ 99% ಕಾಯಿಲೆಗಳು ದೂರ
