ತಿರುವಲ್ಲೂರು: ವಿಮಾ ಹಣ ಪಡೆಯುವುದಕ್ಕಾಗಿ ಮಕ್ಕಳೇ ತಂದೆಗೆ ಹಾವು(Snake) ಕಚ್ಚಿಸಿರುವ ಘಟನೆಯೊಂದು ನಡೆದಿದೆ.
ಈ ಘಟನೆ ತಮಿಳುನಾಡಿನ ತಿರುವಲ್ಲೂರು ಜಿಲ್ಲೆಯಲ್ಲಿ ನಡೆದಿದೆ. 3 ಕೋಟಿ ರೂ. ಮೌಲ್ಯದ ವಿಮಾ ಹಣ ಪಡೆಯಲು ಹಾವು ಕಚ್ಚಿಸಿ ಸರ್ಕಾರಿ ನೌಕರನ ಕೊಲೆಗೆ ಮಕ್ಕಳೇ ಸಂಚು ರೂಪಿಸಿರುವ ವಿಷಯ ಈಗ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಿಸಿದಂತೆ ವ್ಯಕ್ತಿಯ ಇಬ್ಬರು ಪುತ್ರರು ಸೇರಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಗಣೇಶ್ (56) ಸರ್ಕಾರಿ ಸಂಸ್ಥೆಯಲ್ಲಿ ಪ್ರಯೋಗಾಲಯ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಗಣೇಶ್ ನಿದ್ದೆ ಮಾಡುತ್ತಿದ್ದಾಗ ಕುತ್ತಿಗೆಗೆ ಹಾವು ಕಚ್ಚಿ ಸಾವನ್ನಪ್ಪಿದ್ದರು. ಆರಂಭದಲ್ಲಿ ಈ ಸಾವನ್ನು ಆಕಸ್ಮಿಕ ಎಂದು ಪರಿಗಣಿಸಲಾಗಿತ್ತು. ಆದರೆ ವಿಮಾ ಕಂಪನಿಗಳು ಪ್ರಕರಣ ದಾಖಲಿಸಿದ ನಂತರ ಅನುಮಾನ ಆರಂಭವಾಗಿತ್ತು.
ಗಣೇಶ್ ಸುಮಾರು 3 ಕೋಟಿ ರೂಪಾಯಿಗಳ ಒಟ್ಟು ವಿಮಾ ರಕ್ಷಣೆಯೊಂದಿಗೆ 11 ವಿಮಾ ಪಾಲಿಸಿಗಳನ್ನು ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ತನಿಖೆಯಲ್ಲಿ ದಾಖಲೆ, ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದಾಗ ಕೊಲೆಯಾಗಿರುವುದು ತಿಳಿದು ಬಂದಿದೆ. ತನಿಖೆಯಲ್ಲಿ ಆರೋಪಿಗಳು ಹಾವು ಕಚ್ಚಿದ್ದು ಆಕಸ್ಮಿಕ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.
