2025ನೇ ಸಾಲಿನ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10 ಮತ್ತು 12ನೇ ತರಗತಿಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಶೇಕಡಾ 91ರಷ್ಟು ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು, ಶೇಕಡಾ 88.39ರಷ್ಟು ಮಕ್ಕಳು ಪಾಸ್ ಆಗಿದ್ದಾರೆ.

ದೇಶಾದ್ಯಂತ ಕಳೆದ ಫೆಬ್ರವರಿ 15ರಿಂದ 4 ಏಪ್ರಿಲ್‌ವರೆಗೆ CBSE 12ನೇ ತರಗತಿ ಪರೀಕ್ಷೆ ನಡೆಸಲಾಗಿತ್ತು. ಇಂದು ಫಲಿತಾಂಶ ಪ್ರಕಟವಾಗಿದ್ದು, ವಿಜಯವಾಡ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಈ ಬಾರಿ CBSE 12ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99.60ರಷ್ಟು ಫಲಿತಾಂಶ ಪಡೆಯುವ ಮೂಲಕ ವಿಜಯವಾಡ ಇಡೀ ದೇಶದಲ್ಲೇ ನಂ.1 ಸ್ಥಾನ ಪಡೆದಿದೆ. ಶೇ.79.53ರಷ್ಟು ಫಲಿತಾಂಶ ಪಡೆದ ಪ್ರಯಾಗ್‌ರಾಜ್‌ ಕೊನೆಯ ಸ್ಥಾನದಲ್ಲಿದೆ. ನಮ್ಮ ಬೆಂಗಳೂರು ಶೇಕಡಾ 95.95ರಷ್ಟು ಫಲಿತಾಂಶ ಪಡೆಯೋ ಮೂಲಕ 4ನೇ ಸ್ಥಾನದಲ್ಲಿ ಗಮನ ಸೆಳೆದಿದೆ.

ಇನ್ನು, ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿಬಿಎಸ್‌ಇ 10ನೇ ತರಗತಿಯ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಶೇ. 93.66 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿ ಸಿಬಿಎಸ್‌ಇ ಮಂಡಳಿಯ 10ನೇ ತರಗತಿ ಪರೀಕ್ಷೆಗೆ ಸುಮಾರು 23 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 22 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಬಾಲಕಿಯರೇ ಮೇಲು ಗೈ ಸಾಧಿಸಿದ್ದಾರೆ.

Also Read: Virat Kohli Test Retirement : ಒತ್ತಡಕ್ಕೆ ಮಣಿದ ಕೊಹ್ಲಿ , ನಿವೃತ್ತಿ ಹಿಂದಿದ್ಯಾ ರಾಜಕೀಯ?

ಈ ಬಾರಿಯೂ ಸಹ ಸಿಬಿಎಸ್‌ಇ 10ನೇ ತರಗತಿಯ ಫಲಿತಾಂಶದಲ್ಲಿ ತಿರುವನಂತಪುರಂ, ವಿಜಯವಾಡ, ಬೆಂಗಳೂರು ಟಾಪ್ -3ನೇ ಸ್ಥಾನ ಪಡೆದಿದೆ. ದೆಹಲಿ 7 ನೇ ಸ್ಥಾನದಲ್ಲಿದ್ದು, ಗುವಾಹಟಿ ಕೊನೆಯ ಸ್ಥಾನದಲ್ಲಿದೆ.

Share.
Leave A Reply