

ಬಿಗ್ಬಾಸ್ ಫೈನಲ್ ಯಾರು ಇನ್? ಯಾರು ಔಟ್!
ಬಿಗ್ ಬಾಸ್ ಕನ್ನಡ ಸೀಸನ್ 11(Bigg Boss Kannada Season 11) ರೋಚಕ ಘಟ್ಟವನ್ನು ತಲುಪಿದೆ. ಈ ವಾರ ಟಿಕೆಟ್ ಟು ಫಿನಾಲೆಗಾಗಿ ಜಿದ್ದಾಜಿದ್ದಿಯ ಹೋರಾಟ ಬಿಗ್ ಬಾಸ್ ಮನೆಯಲ್ಲಿ ಜೋರಾಗಿದ್ದು, ಇರುವ ಒಂಬತ್ತು ಜನರ ಪೈಕಿ ಈಗಾಗಲೇ ಹನುಮಂತು ಫಿನಾಲೆಗೆ ಕಾಲ್ಟಿದ್ದಾರೆ. ಹೀಗಾಗಿ ಬಿಗ್ ಬಾಸ್ ಮನೆಯೊಳಗೆ ಟಾಸ್ಕ್ ಕಾವು ಹೆಚ್ಚಾಗಿದ್ದು, ದೊಡ್ಮನೆ ಫೈನಲ್ ಆಟಕ್ಕೆ ಯಾರು ಇನ್? ಯಾರು ಔಟ್!, ಅನ್ನೋ ಕುತೂಹಲದ ಪ್ರಶ್ನೆ ಮೂಡಿದೆ.
ಅಂದ್ಹಾಗೆ ಈ ವಾರ ನಡೆದ ಟಿಕೆಟ್ ಟು ಫಿನಾಲೆ ಫೈಟ್ನಲ್ಲಿ ಗೆದ್ದು, ಫಿನಾಲೆಗೆ ಹನುಮಂತ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಬಿಗ್ಬಾಸ್ ಮತ್ತಷ್ಟು ರಂಗು ಪಡೆದುಕೊಂಡಿದೆ. ಇದರ ಮಧ್ಯೆ ವೀಕೆಂಡ್ ಬಂದಿದ್ದು, ವೀಕ್ಷಕರು ಕಿಚ್ಚನ ಪಂಚಾಯ್ತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ.ನೂರು ದಿನಗಳ ಕಾಲ ನಡೆದ ರೋಚಕ ಆಟ, ಕಾದಾಟಗಳಿಗೆ ಟ್ವಿಸ್ಟ್ ಸಿಗುತ್ತಿದೆ. ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು ಐವರು ನಾಮಿನೇಟ್ ಆಗಿದ್ದಾರೆ. ಭವ್ಯಗೌಡ, ತ್ರಿವಿಕ್ರಮ್, ಧನರಾಜ್, ಮೋಕ್ಷಿತಾ, ಚೈತ್ರಾ ಕುಂದಾಪುರ ಅವರು ಮನೆಯಿಂದ ಹೋಗಲು ನಾಮಿನೇಟ್ ಆಗಿದ್ದಾರೆ. ಯಾರಿಗೆ ಗೇಟ್ಪಾಸ್ ಸಿಗಲಿದೆ ಅನ್ನೋದು ಕಿಚ್ಚನ ಪಂಚಾಯ್ತಿಯಲ್ಲಿ ಗೊತ್ತಾಗಲಿದೆ.

ಅಲ್ಲದೇ ಇಂದಿನ ಕಿಚ್ಚನ(Kiccha) ಎಪಿಸೋಡ್ನಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇಡೀ ವಾರ ಟಿಕೆಟ್ ಟು ಫಿನಾಲೆ ಟಾಸ್ಕ್ ನಡೆದಿದೆ. ಈ ವೇಳೆ ನಡೆದ ಸರಿ ತಪ್ಪುಗಳು ಮತ್ತು ಫಿನಾಲೆಗೆ ಎಂಟ್ರಿ ನೀಡಲು ಸ್ಪರ್ಧಿಗಳನ್ನು ಮತ್ತಷ್ಟು ಹುರಿದುಂಬಿಸುವ ಕೆಲಸವನ್ನು ಮಾಡಲಿದ್ದಾರೆ.ಆದೇನೆ ಆಗಲಿ… ಬಿಗ್ಬಾಸ್ ಆಟ ದಿನದಿಂದ ದಿನಕ್ಕೆ ರೋಚಕ ಹಂತಕ್ಕೆ ತಲಪುತ್ತಿದ್ದು, ಬಿಗ್ಬಾಸ್ ಯಾರು ಗೆಲ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.