ಬಿಗ್‌ಬಾಸ್ ಕನ್ನಡ ಸೀಸನ್ 12 ಎರಡು ವಾರ ಮುಗಿಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಎರಡನೇ ವಾರದಲ್ಲಿ ಸ್ವಲ್ಪ ಅಡೆತಡೆ ಉಂಟಾದ್ರೂ ಈಗ ಬಿಗ್‌ಬಾಸ್ ಮತ್ತೆ ಹಳೇ ಟ್ರ್ಯಾಕ್‌ಗೆ ಬಂದಿದೆ. ಆದ್ರೀಗ ಬಿಗ್‌ಬಾಸ್ ಮತ್ತೊಂದು ರೋಚಕ ತಿರುವು ನೀಡಲು ಸಜ್ಜಾಗಿದೆ. ಅದೇನಂದ್ರೆ ಮಿಡ್ ಸೀಸನ್ ಫಿನಾಲೆ.. ಹೌದು.. ಎಕ್ಸ್‌ಪೆಕ್ಟ್ ದಿ ಅನ್‌ಎಕ್ಸ್‌ಪೆಕ್ಟೆಡ್ ಅನ್ನೋ ಥೀಮ್‌ನಲ್ಲಿ ಶುರುವಾಗಿರುವ ಬಿಗ್‌ಬಾಸ್ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿದ್ದು, ಸ್ಪರ್ಧಿಗಳಿಗೆ ದಿಗಿಲು ಬಡಿದಂತಾಗಿದೆ.
ಬಿಗ್‌ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಮೂರನೇ ವಾರಕ್ಕೆ ಫಿನಾಲೆ ನಡೆಯುತ್ತಿದ್ದು, ಸ್ಪರ್ಧಿಗಳಿಗೆ ನಡುಕ ಶುರುವಾಗಿದೆ. ಯಾಕಂದ್ರೆ, ಈ ಫಿನಾಲೆಯಲ್ಲಿ ಹಲವು ಸ್ಪರ್ಧಿಗಳಿಗೆ ಗೇಟ್‌ಪಾಸ್ ನೀಡಲಾಗುತ್ತೆ ಎನ್ನಲಾಗುತ್ತಿದೆ. ಅಶ್ವಿನಿಗೌಡ, ಗಿಲ್ಲಿ ನಟ, ಕಾವ್ಯ ಶೈವ, ಜಾಹ್ನವಿ, ಮಲ್ಲಮ್ಮ, ಕಾಕ್ರೋಚ್ ಸುಧಿ, ಮಾಳು ನಿಪನಾಳ್ ಹಾಗೂ ಸ್ಪಂದನಾ ಸೇರಿ ಕೆಲವರ ಸ್ಥಾನ ಸದ್ಯಕ್ಕೆ ಭದ್ರವಾಗಿದೆ ಎನ್ನಲಾಗ್ತಿದೆ. ಆದ್ರೆ, ಉಳಿದ ಬಹುತೇಕರು ಡೇಂಜರ್ ಝೋನ್‌ನಲ್ಲಿ ಇದ್ದಾರೆ. ಹೀಗಾಗಿ, ಇವರಿಗೆಲ್ಲಾ ಬಿಗ್‌ಬಾಸ್ ಎಲಿಮಿನೇಷನ್ ಶಾಕ್ ನೀಡ್ತಾರಾ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ. ಮತ್ತೊಂದ್ಕಡೆ, ಮಿಡ್ ಸೀಸನ್ ಫಿನಾಲೆಯಲ್ಲಿ ಹಲವು ಸ್ಪರ್ಧಿಗಳು ಎಲಿಮಿನೇಟ್ ಆಗಬಹುದು ಎನ್ನಲಾಗ್ತಿದ್ದು, ವೈಲ್ಡ್ ಕಾರ್ಡ್ ಮೂಲಕ ಕೆಲವು ಸ್ಪರ್ಧಿಗಳು ಅಖಾಡಕ್ಕೆ ಎಂಟ್ರಿ ಕೊಡುವ ನಿರೀಕ್ಷೆ ಇದೆ.
ಇನ್ನು ಅಕ್ಟೋಬರ್ 18 ಹಾಗೂ 19ರಂದು ಮಿಡ್ ಸೀಸನ್ ಫಿನಾಲೆ ನಡೆಯಲಿದ್ದು, 2 ದಿನ ಒಟ್ಟು 6 ಗಂಟೆಗಳ ಕಾಲ ಪ್ರೇಕ್ಷಕರನ್ನು ಬಿಗ್‌ಬಾಸ್ ರಂಜಿಸಲಿದೆ. ಈ ಬಾರಿ ಮಿಡ್ ಸೀಸನ್ ವಿನ್ನರ್ ಯಾರು ಅಂತಲೂ ಘೋಷಣೆ ಮಾಡಲಾಗುತ್ತದೆ.. ಅವರಿಗೆ ಬಹುಮಾನವನ್ನೂ ನೀಡಲಾಗುತ್ತದೆ. ಈಗಾಗ್ಲೇ ಕಾಕ್ರೋಚ್ ಸುಧಿ, ಅಶ್ವಿನಿಗೌಡ, ಮಾಳು ನಿಪನಾಳ್ ಹಾಗೂ ಸ್ಪಂದನಾ 3ನೇ ವಾರಕ್ಕೆ ಫೈನಲಿಸ್ಟ್‌ಗಳಾಗಿ ಆಯ್ಕೆ ಆಗಿದ್ದಾರೆ. ಉಳಿದವರೆಲ್ಲಾ ಈ ವಾರ ನಾಮಿನೇಟ್ ಆಗಿದ್ದಾರೆ.