ಕನ್ನಡ ಚಿತ್ರರಂಗದಲ್ಲಿ ಬೋರ್ಡು ಇರದ ಬಸ್ಸನ್ನ ಹತ್ತಿ ಬಂದು ಜನರ ಮನಸ್ಸನ್ನ ಗೆದ್ದಿದ್ದ ನಟಿ ಶೆಫಾಲಿ ಸಾವು ಸಿನಿ ಅಭಿಮಾನಿಗಳಿಗೆ ಶಾಕ್ ನೀಡಿದೆ. ಪವರ್ ಸ್ಟಾರ್ ಪುನೀತ್ ರಾಜುಕುಮಾರ್, ಶ್ರೀನಗರ ಕಿಟ್ಟಿ, ಹಾಗೂ ಲೂಸ್ ಮಾದ ಯೋಗಿ ಅಭಿನಯದ ಹುಡುಗರು ಸಿನಿಮಾದಲ್ಲಿ ಪಂಕಜಾ ಸಾಂಗ್‌ಗೆ ಸಖತ್ ಡಾನ್ಸ್ ಮಾಡಿ ಕನ್ನಡ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ರು.

ಆದ್ರೀಗ ಶೆಫಾಲಿ ಜರಿವಾಲಾರ ಸಾವು ಇಡಿ ಚಿತ್ರರಂಗವನ್ನೇ ಆಘಾತಕ್ಕೀಡು ಮಾಡಿದೆ. ಕೇವಲ ಕನ್ನಡ ಮಾತ್ರವಲ್ಲದೆ ಅನೇಕ ಭಾಷೆ ಚಿತ್ರರಂಗದಲ್ಲೂ ಅಭಿನಯಿಸಿ ಸೈ ಎನಿಸಿಕೋಡಿದ್ದರು. ಬರೀ 42 ವಯಸ್ಸಿನವರಾಗಿದ್ದ ಶೆಫಾಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂತಾ ಹೇಳಲಾಗ್ತಿದೆ.. ಆದರೆ, ಈಗ ಇವರ ಸಾವಿಗೆ ಹೊಸ ತಿರುವು ಸಿಕ್ಕಿದೆ.. ಇವರ ಸಾವಿಗೆ ಹೃದಯಾಘಾತ ಕಾರಣವಲ್ಲ ಅನ್ನೋ ಮಾಹಿತಿಯನ್ನ ಪೊಲೀಸರು ಬಿಚ್ಚಿಟ್ಟಿದ್ದಾರೆ.
ಹೌದು ಬಾಲಿವುಡ್‌ನಲ್ಲಿ ಸಲ್ಮಾನ್ ಖಾನ್‌ರಂತಹ ನಟರ ಜೊತೆ ನಟಿಸಿ ಸೈ ಎನಿಸಿಕೊಂಡಿದ್ದ ಇವರು, ಬಿಗ್ ಬಾಸ್ ಹಿಂದಿ ಸೇರಿ ಅನೇಕ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಆದರೆ ಬೆಳಗಿನಜಾವ 1 ಗಂಟೆ ಹೊತ್ತಿಗೆ ಶೆಫಾಲಿ ಸಾವಿನ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಮೃತದೇಹ ಕಳುಹಿಸಲಾಗಿದೆ. ಸಾವಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ ಅಂತಾ ಮುಂಬೈ ಪೊಲೀಸ್ ತಿಳಿಸಿದ್ದು, ಶಫಾಲಿ ಸಾವಿಗೆ ನಿಜವಾದ ಕಾರಣ ಏನು ಎಂಬುದು ತಿಳಿದುಬರಬೇಕಿದೆ.
