ಸೆಪ್ಟೆಂಬರ್ 7ರಂದು ಭಾದ್ರಪದ ಪೂರ್ಣಿಮೆ. ಹಾಗೆ ಚಂದ್ರಗ್ರಹಣವೂ ಸಂಭವಿಸಲಿದೆ. ವಿಶೇಷ ಅಂದ್ರೆ ಈ ಬಾರಿ ಭಾರತದಲ್ಲಿ ಗ್ರಹಣ ಗೋಚರಿಸಲಿದೆ. ಈ ಶುಭ ಸಂದರ್ಭವನ್ನ ಯಾವ ರೀತಿ ಆಚರಣೆ ಮಾಡ್ಬೇಕು, ಈ ಸಮಯದಲ್ಲಿ ಯಾವ ರಾಶಿಯವರು ಎಚ್ಚರಿಕೆಯಿಂದ ಇರ್ಬೇಕು? ಆ ಎಲ್ಲಾ ಡಿಟೇಲ್ಸ್ ಈ ವಿಡಿಯೋದಲ್ಲಿದೆ. ಭಾನುವಾರ ಭಾದ್ರಪದ ಹುಣ್ಣಿಮೆಯ ಚಂದ್ರಗ್ರಹಣ ಸಂಭವಿಸಲಿದ್ದು, ಈ ದಿನ ಸ್ನಾನ ಮತ್ತು ಧ್ಯಾನ ಮಾಡಿದ ನಂತರ ಲಕ್ಷ್ಮಿ ನಾರಾಯಣ ಸ್ವಾಮಿಯನ್ನು ಪೂಜಿಸಲಾಗುತ್ತದೆ.
ಪೂರ್ಣಿಮೆ ಉಪವಾಸವನ್ನು ಸಹ ಆಚರಿಸಲಾಗುತ್ತದೆ. ಇನ್ನು, ಈ ಶುಭ ದಿನದಂದು, ಚಂದ್ರನು ಕುಂಭ ರಾಶಿಯಲ್ಲಿರುತ್ತಾನೆ. ಹಾಗೆ, ಹಿಂದಿನಿಂದಲೂ ರಾಹು ಕುಂಭ ರಾಶಿಯಲ್ಲಿದ್ದಾನೆ. ಆದ್ದರಿಂದ, ಚಂದ್ರ ಮತ್ತು ರಾಹುವಿನ ಸಂಯೋಗವು ಕುಂಭ ರಾಶಿಯವರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದ್ರಿಂದ, ಮಾನಸಿಕ ಒತ್ತಡದ ಸಮಸ್ಯೆ, ವಿವಾದ, ಮನಸ್ಸಿನ ಚಂಚಲತೆ ಉಂಟಾಗುತ್ತೆ. ಹೀಗಾಗಿ ಈ ದಿನದಂದು ಶಿವ ನಾಮ ಜಪಿಸುವುದು ಸೂಕ್ತ. ಇದಲ್ಲದೇ ನೀವು ಮಹಾಮೃತ್ಯುಂಜಯ ಮಂತ್ರವನ್ನು ಸಹ ಜಪಿಸಬಹುದು.
ಈ ರಾಶಿಯ ಜೊತೆಗೆ, ಕರ್ಕಾಟಕ ರಾಶಿಯ ಜನರಿಗೆ ಚಂದ್ರಗ್ರಹಣವು ಅಶುಭ. ವ್ಯವಹಾರಕ್ಕೆ ಸಂಬಂಧಿಸಿದ ಜನರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಯಾವುದೇ ಕಾರಣವಿಲ್ಲದೆ ಮನಸ್ಸಿನಲ್ಲಿ ಚಡಪಡಿಕೆ ಇರುತ್ತದೆ. ಶುಭ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ಹೀಗಾಗಿ ಚಂದ್ರ ದೇವರ ಆಶೀರ್ವಾದ ಪಡೆಯಲು ಶಿವ ಪಂಚಾಕ್ಷರಿ ಮಂತ್ರ ಪಠಣೆಯ ಮೂಲಕ ರಕ್ಷಣೆ ಪಡೆಯಬಹುದು.
