ಈಗಿನ ಬ್ಯುಸಿ ಜೀವನದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ತುಂಬಾ ಕಷ್ಟ. ಆದ್ರೆ ಅಷ್ಟೇ ಮುಖ್ಯ. ಎಲ್ಲರೂ ಸಮಯ ಉಳಿಸಲು, ಹಣ ಉಳಿಸಲು ಹಾಕು ಎಫರ್ಟ್‌ಅನ್ನ ಆರೋಗ್ಯದ ಮೇಲೆ ಕೊಂಚವಾದ್ರೂ ಹಾಕಿದರೆ ಕಾಯಿಲೆಗಳು ದೂರ ಉಳಿಯುತ್ವೆ. ದಿನನಿತ್ಯದ ಜೀವನದಲ್ಲಿ ನಾವು ಮಾಡುವ ಚಿಕ್ಕಪುಟ್ಟ ತಪ್ಪುಗಳು ಎಷ್ಟೋ ಬಾರಿ ಅನಾರೋಗ್ಯದ ದೊಡ್ಡ ಕಾರಣವಾಗ್ಬಹುದು. ಹೀಗಾಗಿ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳಬೇಕು. ಅದರಲ್ಲೂ ಬೆಳಗ್ಗೆ ನಮ್ಮ ದಿನಚರಿ ಯಾವ ರೀತಿ ಇರುತ್ತದೆ ಅನ್ನೋದರ ಮೇಲೆ ನಮ್ಮ ಆರೋಗ್ಯ ನಿಂತಿದೆ. ಸಾಮಾನ್ಯವಾಗಿ ಬೆಳಗ್ಗೆ ಖಾಲಿ ಹೊಟ್ಟೆಗೆ ಟೀ ಕಾಫಿ ಕುಡಿಯುವ ಅಭ್ಯಾಸ ತುಂಬಾ ಜನರಿಗೆ ಇದೆ. ಈ ಅಭ್ಯಾಸ ಒಳ್ಳೇದಾ? ಕೆಟ್ಟದ್ದಾ? ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಏನ್‌ ಕುಡಿದ್ರೆ ನಾವು ದಿನವಿಡೀ ಎನರ್ಜೆಟಿಕ್‌ ಆಕ್ಟಿವ್‌ ಆಗಿರ್ತೀವಿ? ಹಾಗೆ ಯಾವ ಡ್ರಿಂಕ್‌ಗಳು ನಮ್ಮ ಪ್ರೊಡಕ್ಟಿವಿಟಿಯನ್ನ ಕಡಿಮೆ ಮಾಡುತ್ವೆ ಇವೆಲ್ಲವನ್ನ ತಿಳ್ಕೊಳೋಣ.

ಖಾಲಿ ಹೊಟ್ಟೆಯಲ್ಲಿ ಇವುಗಳನ್ನ ಕುಡಿದ್ರೆ ಡೇಂಜರ್!‌

ಚಹಾ/ಕಾಫಿ

ಆಗ್ಲೆ ಹೇಳಿರೋಹಾಗೆ ರಾತ್ರಿ ನೀವು ಏನನ್ನೂ ಸೇವಿಸದೇ ಇರೋದ್ರಿಂದ ಬಾಡಿ ಡಿಹೈಡ್ರೇಟ್‌ ಆಗಿರುತ್ತೆ. ಅಂದ್ರೆ ನಿಮ್ಮ ಹೊಟ್ಟೆಯಲ್ಲಿ ತೇವಾಂಶ ಕಡಿಮೆಯಾಗಿರುತ್ತೆ. ಚಹಾ ಅಥವಾ ಕಾಫಿಯಲ್ಲಿ ಅಸಿಡಿಕ್‌ ಅಂಶವಿದೆ. ಈ ಅಸಿಡಿಕ್‌ ಅಂಶ ನಿಮ್ಮ ಹೊಟ್ಟೆಯನ್ನ ಇನ್ನಷ್ಟು ಡ್ರೈ ಮಾಡುತ್ತೆ. ಇದ್ರಿಂದ ಅಸಿಡಿಟಿ, ಗ್ಯಾಸ್ಟ್ರಿಕ್‌ ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ. ಹಾಗೆ ಆಸಿಡ್‌ ರಿಫ್ಲೆಕ್ಸ್‌ಗೂ ಕಾರಣವಾಗುತ್ತೆ. ಇನ್ನೊಂದು ಆಘಾತಕಾರಿ ವಿಷ್ಯ ಅಂದ್ರೆ, ಟೀ ಕಾಫೀ ಸೇವನೆ ಕಾರ್ಟಿಸಾಲ್‌ ಲೆವೆಲ್‌ನ ಜಾಸ್ತಿ ಮಾಡುತ್ತೆ. ಕಾರ್ಟಿಸಾಲ್‌ ಅನ್ನೋದು ಒಂದು ಸ್ಟ್ರೆಸ್‌ ಹಾರ್ಮೋನ್‌. ಬೆಳಗ್ಗಿನ ಸಮಯದಲ್ಲಿ ಇದರ ಪ್ರಮಾಣ ದೇಹದಲ್ಲಿ ಹೆಚ್ಚಾಗಿರುತ್ತೆ. ಟೀ ಕಾಫಿ ಸೇವನೆ ಕಾರ್ಟಿಸಾಲ್‌ ಪ್ರಮಾಣವನ್ನ ಇನ್ನಷ್ಟು ಹೆಚ್ಚಿಸೋದ್ರಿಂದ ಆಂಕ್ಸೈಟಿ, ಒತ್ತಡ, ಕೆಲಸದಲ್ಲಿ ಕಿರಿಕಿರಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಬಹುದು. ಆಗ ನೀವೇನ್‌ ಮಾಡ್ತೀರಾ? ಮತ್ತೆ ಟೀ ಕಾಫಿ ಕುಡೀತೀರಾ.. ಇದ್ರಿಂದ ದೇಹದ ಓವರ್‌ಆಲ್‌ ಕ್ಯಾಲೊರಿ ಜಾಸ್ತಿ ಆಗುತ್ತೆ. ಸಕ್ಕರೆಯಂಶ ಹೆಚ್ಚಾಗುತ್ತೆ.. ಹಾಗೆ ದೇಹ ಇನ್ನಷ್ಟು ಡಿಹೈಡ್ರೇಟ್‌ ಆಗುತ್ತೆ. ಈ ಎಲ್ಲಾ ಕಾರಣಗಳಿಂದ ಖಾಲಿ ಹೊಟ್ಟೆಗೆ ಟೀ ಕಾಫಿ ಸೇವನೆ ಅವಾಯ್ಡ್‌ ಮಾಡಿ.

ಫ್ರೂಟ್‌ ಜ್ಯೂಸ್‌

ತುಂಬಾ ಜನ ಅನ್ಕೊಂಡಿದ್ದಾರೆ ಫ್ರೂಟ್‌ ಜ್ಯೂಸ್‌ಗಳನ್ನ ಕುಡಿಯೋದ್ರಿಂದ ಆರೋಗ್ಯ ಇಂಪ್ರೂವ್‌ ಆಗುತ್ತೆ ಅಂತಾ. ಅದಿಕ್ಕೆ ಆರೆಂಜ್‌ ಜ್ಯೂಸ್‌, ಕಲ್ಲಂಗಡಿ ಜ್ಯೂಸ್‌, ಇನ್ನೂ ಏನೇನೋ ಹಣ್ಣುಗಳನ್ನ ಬೆರೆಸಿ ಜ್ಯೂಸ್‌ ಮಾಡಿ ಕುಡೀತಾರೆ. ಆದ್ರೆ ಇದು ತಪ್ಪು. ಯಾಕಂದ್ರೆ ಜ್ಯೂಸ್‌ ತಯಾರಿಸುವಾಗ ನಾವು ಹಣ್ಣನ್ನ ರುಬ್ಬಿ ಅದರ ತಿರುಳನ್ನ ಬೇರ್ಪಡಿಸಿ ಕೇವಲ ಜ್ಯೂಸ್‌ಅನ್ನ ಸೇವಿಸ್ತೀವಿ. ಹಣ್ಣಿನ ರಸದಲ್ಲಿ ಸಕ್ಕರೆಯಂಶ, ಅಲ್ಪ ಪ್ರಮಾಣದಲ್ಲಿ ಕೆಲವೊಂದು ವಿಟಮಿನ್ಸ್‌ ಬಿಟ್ರೆ ಮತ್ತೇನೂ ಇರೋದಿಲ್ಲ. ಅದರ ಇಂಪಾರ್ಟೆಂಟ್‌ ಪಾರ್ಟ್‌ ಅಂದ್ರೆ ಆ ತಿರುಳಿನಲ್ಲಿರೋ ಫೈಬರ್‌ ಜ್ಯೂಸ್‌ಗಳಲ್ಲಿ ಇರೋದಿಲ್ಲ. ನೀವು ಇಡೀ ಹಣ್ಣನ್ನ ತಿನ್ನೋದ್ರಿಂದ ಅದ್ರಲ್ಲಿರುವ ಫೈಬರ್‌ನಿಂದಾಗಿ, ಅದು ನಿಧಾನವಾಗಿ ದೇಹದಲ್ಲಿ ಸಕ್ಕರೆಯನ್ನ ರಿಲೀಸ್‌ ಮಾಡುತ್ತೆ. ಇದ್ರಿಂದ ಇನ್ಸುಲಿನ್‌ ಸ್ಪೈಕ್‌ ಕೂಡ ನಿಧಾನವಾಗುತ್ತೆ. ಬಟ್‌ ಹಣ್ಣಿನ ಜ್ಯೂಸ್‌ ಇಮೀಡಿಯಟ್‌ಆಗಿ ಇನ್ಸುಲಿನ್‌ ಸ್ಪೈಕ್‌ಗೆ ಕಾರಣವಾಗುತ್ತೆ. ಪ್ರತಿದಿನ ಈ ರೀತಿ ಖಾಲಿ ಹೊಟ್ಟೆಗೆ ಹಣ್ಣಿನ ರಸ ಕುಡಿದ್ರೆ ಕಾಯಿಲೆ ಕಟ್ಟಿಟ್ಟ ಬುತ್ತಿ. ಇನ್ನು, ನೀವು ಡಯಾಬೆಟಿಕ್ಸ್‌ ಆಗಿದ್ರೆ ಡಾಕ್ಟ್ರು ಹಣ್ಣನ್ನ ಕಡಿಮೆ ತಿನ್ನಿ ಅಂತಾರೆ. ಆದ್ರೆ ಹಣ್ಣಿನ ರಸ ಅದ್ಕಿಂತ್ಲೂ ಡೇಂಜರ್‌. ಹೀಗಾಗಿ ಮಧುಮೇಹಿಗಳು ಹಣ್ಣನ್ನ ಸ್ವಲ್ಪ ತಿಂದ್ರೂ ಪರ್ವಾಗಿಲ್ಲ. ಹಣ್ಣಿನ ಜ್ಯೂಸ್‌ಗಳನ್ನ ಅವಾಯ್ಡ್‌ ಮಾಡಿ.

ತಂಪಾಗಿರುವ ಪಾನೀಯಗಳು

ನೀವು ಗಾಢ ನಿದ್ದೆಯಲ್ಲಿರ್ತೀರಾ. ಯಾರೋ ನಿಮ್ಮ ಮೇಲೆ ತಂಪಾದ ನೀರನ್ನ ಸುರೀತಾರೆ. ಆಗ ನೀವು ಸಡನ್‌ ಆಗಿ ದಿಗಿಲುಗೊಳ್ತೀರಾ ತಾನೇ. ಸೇಮ್‌ ಪರಿಸ್ಥಿತಿ ನಿಮ್ಮ ಹೊಟ್ಟೆಯೊಳಗೂ ಆಗುತ್ತೆ. ಪಾಪ ಹೊಟ್ಟೆ ಬೆಳ್‌ ಬೆಳ್ಗೆ ನೀವ್‌ ತಿನ್ನೋ ಆಹಾರವನ್ನ ಡೈಜೆಸ್ಟ್‌ ಮಾಡೋದಿಕ್ಕೆ ತನ್ನನ್ನ ತಾನು ರೆಡಿ ಮಾಡ್ಕೊತಿರುತ್ತೆ. ಆಗ ನೀವು, ಕೋಲ್ಡ್‌ ವಾಟರ್‌, ತಂಪಾದ ಪಾನೀಯವನ್ನ ಕುಡಿದ್ರೆ, ಇದ್ರಿಂದ ಡೈಜೆಷನ್‌ ವೀಕ್‌ ಆಗುತ್ತೆ. ಹಾಗೆ ಅಜೀರ್ಣದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ. ಇದು ಡಿಹೈಡ್ರೇಷನ್‌ಗೂ ಕಾರಣ ಆಗ್ಬಹುದು. ಸೋ ಈ ಮೂರು ಡ್ರಿಂಕ್‌ಗಳನ್ನ ಬೆಳಗ್ಗೆ ಖಾಲಿ ಹೊಟ್ಟೆಗೆ ಯಾವತ್ತೂ ಕುಡೀಬೇಡಿ.

ಯಾವ ಪಾನೀಯಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು?

ಪ್ಲೇನ್‌ ವಾಟರ್‌

ಸುಮಾರು 6ರಿಂದ 8 ಗಂಟೆಗಳ ಕಾಲ ನೀವು ನಿದ್ದೆ ಮಾಡ್ತೀರಾ ಅಂತಾದ್ರೆ ಅಷ್ಟೂ ಹೊತ್ತು ನೀವು ಏನನ್ನೂ ಕೂಡ ಸೇವಿಸಿರೋದಿಲ್ಲ. ಸೋ, ಸಹಜವಾಗಿ ಬೆಳಗ್ಗೆ ಡಿಹೈಡ್ರೇಷನ್‌ ಆಗಿರುತ್ತೆ. ಹೀಗಾಗಿ ಎದ್ದ ತಕ್ಷಣ ಒಂದು ಗ್ಲಾಸ್‌ ಪ್ಲೇನ್‌ ವಾಟರ್‌ ಕುಡಿಯೋದು ಬಹಳ ಮುಖ್ಯ. ಆಯುರ್ವೇದದಲ್ಲಿ ಉಷಾಪಾನಂ ಎಂಬ ಪದ್ಧತಿಯಿದೆ. ಅಂದ್ರೆ ಬೆಳಗ್ಗೆ ಹಲ್ಲು ಉಜ್ಜದೆಯೇ ನೀರನ್ನ ಕುಡಿಯೋದು. ಇದ್ರಿಂದ ಸಾಕಷ್ಟು ಹೆಲ್ತ್‌ ಬೆನಿಫಿಟ್ಸ್‌ ಕೂಡ ಇದೆ ಅಂತಾ ಹೇಳಲಾಗುತ್ತೆ. ಸಪೋಸ್‌ ಈ ರೀತಿ ಕುಡಿಯೋದು ನಿಮಗೆ ಇಷ್ಟ ಇಲ್ಲ ಅಂತಾದಲ್ಲಿ ನೀವು ಬ್ರಶ್‌ ಮಾಡಿ ತಕ್ಷಣ ನೀರು ಕುಡೀರಿ. ಯಾಕಂದ್ರೆ, ಆಮೇಲೆ ಅದೂ ಇದೂ ಕೆಲ್ಸ ಅಂತಾ ನೀವು ನೀರು ಕುಡಿಯೋದನ್ನ ಲೇಟ್‌ ಮಾಡ್ತೀರಾ… ಎಷ್ಟು ಲೇಟ್‌ ಮಾಡ್ತೀರೋ ಅಷ್ಟು ನಿಮ್ಮ ದೇಹಕ್ಕೆ ನೀರು ಕಡಿಮೆ ಹೋಗುತ್ತೆ. ಹೀಗಾಗಿ ಎದ್ದ ತಕ್ಷಣದಿಂದ್ಲೇ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡ್ರೆ ಡಿಹೈಡ್ರೇಷನ್‌ನಿಂದ ಆಗುವ ಅನೇಕ ಆರೋಗ್ಯ ಸಮಸ್ಯೆಗಳು ಅವಾಯ್ಡ್‌ ಆಗುತ್ವೆ. ಬೇಕಿದ್ರೆ ನೀರನ್ನ ಉಗುರು ಬೆಚ್ಚಗೆ ಮಾಡಿ ಕೂಡ ಕುಡಿಯಬಹುದು. ಅಥವಾ ರಾತ್ರಿ ತಾಮ್ರದ ಬಿಂದಿಗೆಯಲ್ಲಿ ನೀರನ್ನ ಸ್ಟೋರ್‌ ಮಾಡಿ ಅದನ್ನ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯೋದು ಬೆಸ್ಟ್‌ ಆಪ್ಷನ್‌. ಇದ್ರಿಂದ ಕಾಪರ್‌ ಡಿಫೀಷಿಯನ್ಸಿ ಉಂಟಾಗೋದಿಲ್ಲ. ಇದು ಪ್ರತಿಯೊಬ್ರು ಪಾಲಿಸಬೇಕಾಗಿರೋ ನಿಯಮ. ಇದ್ರ ಬಳಿಕ ನಿಮ್ಮ ಹೆಲ್ತ್‌ ಗೋಲ್‌ ಏನು ಅನ್ನೋದ್ರ ಮೇಲೆ ನೆಕ್ಸ್ಟ್‌ ಏನನ್ನ ಕುಡೀಬೇಕು ಅನ್ನೋದನ್ನ ಡಿಸೈಡ್‌ ಮಾಡಿ.

ಜೀರಿಗೆ ನೀರು

ಗ್ಯಾಸ್ಟ್ರಿಕ್‌, ಹೊಟ್ಟೆಯುಬ್ಬರ, ಇಂಡೈಜೇಷನ್‌, ಕಾನ್ಸ್ಟಿಪೇಷನ್‌ ಈ ಎಲ್ಲಾ ಸಮಸ್ಯೆಗಳಿಗೆ ರಾಮಬಾಣ ಜೀರಿಗೆ ನೀರು. ಜೀರಿಗೆ ಡೈಜೆಸ್ಟಿವ್‌ ಎನ್‌ಜೈಮ್‌ಗಳನ್ನ ಸ್ಟಿಮ್ಯುಲೇಟ್‌ ಮಾಡುತ್ತೆ. ಇದ್ರಿಂದ ಬ್ರೇಕ್‌ಫಾಸ್ಟ್‌ ತುಂಬಾ ಚೆನ್ನಾಗಿ ಜೀರ್ಣ ಆಗುತ್ತೆ. ಆಂಟಿಆಕ್ಸಿಡೆಂಟ್‌ಗಳಿಂದ ಜೀರಿಗೆ ಸಮೃದ್ಧವಾಗಿದ್ದು, ಗಟ್‌ ಹೆಲ್ತ್‌ಅನ್ನ ಕೂಡ ಇಂಪ್ರೂವ್‌ ಮಾಡುತ್ತೆ. ಜೀರಿಗೆ ನೀರನ್ನ ತಯಾರಿಸೋದು ತುಂಬಾ ಸಿಂಪಲ್‌. ರಾತ್ರಿ ಮಲಗೋದಕ್ಕೂ ಮುಂಚೆ ಒಂದು ಗ್ಲಾಸ್‌ ನೀರಿಗೆ ಒಂದು ಚಮಚ ಜೀರಿಗೆ ಹಾಕಿಡಿ. ಬೆಳಗ್ಗೆ ಜೀರಿಗೆಯನ್ನ ಶೋಧಿಸಿ ಬರೀ ನೀರನ್ನ ಮಾತ್ರ ಕುಡೀರಿ. ಉಳಿದ ಜೀರಿಗೆಯನ್ನ ವೇಸ್ಟ್‌ ಮಾಡೋ ಬದ್ಲು ಅದಿಕ್ಕೆ ಒಂದು ಗ್ಲಾಸ್‌ ನೀರು ಹಾಕಿ ಕುದಿಸಿ ಬ್ರೇಕ್‌ಫಾಸ್ಟ್‌ ಜೊತೆ ಸೇವನೆ ಮಾಡಿ.

ಅರಿಶಿನ ಹಾಗೂ ಕಾಳುಮೆಣಸಿನ ನೀರು

ನಿಮ್ಗೆ ಆಗಾಗ ನೆಗಡಿ, ಶೀತ, ಜ್ವರ ಬರ್ತಾ ಇದ್ರೆ ಆಗಾಗ ಕಾಯಿಲೆ ಬೀಳ್ತಾ ಇದ್ರೆ ನೀವು ಖಂಡಿತ ಈ ನೀರನ್ನ ಖಾಲಿ ಹೊಟ್ಟೆಯಲ್ಲಿ ಕುಡಿಲೇಬೇಕು. ಯಾಕಂದ್ರೆ ಅರಿಶಿನ ಇಮ್ಯುನಿಟಿಯನ್ನ ಸ್ಟ್ರಾಂಗ್‌ ಮಾಡುತ್ತೆ. ದೇಹದಲ್ಲಿ ಉರಿಯೂತವನ್ನ ಕಡಿಮೆ ಮಾಡುತ್ತೆ. ಲಿವರ್‌ ಡಿಟಾಕ್ಸಿಫಿಕೇಷನ್‌ಗೂ ಹೆಲ್ಪ್‌ ಮಾಡುತ್ತೆ. ನೀವು ಯಾವಾಗ್ಲೂ ಅಷ್ಟೇ ಅರಿಶಿಣವನ್ನ ಬಳಸೋವಾಗ ಅದರ ಜೊತೆ ಕಾಳುಮೆಣಸು ಅಥವಾ ಕಾಳುಮೆಣಸಿನ ಪುಡಿಯನ್ನ ಮಿಸ್‌ ಮಾಡದೇ ಯೂಸ್‌ ಮಾಡಿ. ಯಾಕಂದ್ರೆ ಅರಿಶಿಣದಲ್ಲಿ ಕರ್ಕ್ಯುಮಿನ್‌ ಎಂಬ ಅಂಶವಿದೆ. ಇದನ್ನ ನಮ್ಮ ದೇಹ ಸರಿಯಾಗಿ ಹೀರಿಕೊಳ್ಳೋದಿಕ್ಕೆ ಕಾಳುಮೆಣಸು ನೆರವಾಗುತ್ತೆ. ಈ ಡ್ರಿಂಕ್‌ಅನ್ನ ತಯಾರಿಸೋದಿಕ್ಕೆ ಒಂದು ಗ್ಲಾಸ್‌ ನೀರನ್ನ ಬಿಸಿ ಮಾಡಿ ಅದಿಕ್ಕೆ ಚಿಟಿಕೆ ಅರಿಶಿಣ ಹಾಗೂ ಚಿಟಿಕೆ ಕಾಳುಮೆಣಸಿನ ಪುಡಿ ಬೆರೆಸಿ ಕುಡಿಯಿರಿ.

ಕೊತ್ತಂಬರಿ ನೀರು

ಮಹಿಳೆಯರಿಗೆ ಎಸ್ಪೆಷಲಿ ಈ ಡ್ರಿಂಕ್‌ ತುಂಬಾ ಒಳ್ಳೇದು. ಬಿಳಿ ಸೆರಗು ಅಥವಾ ವೈಟ್‌ ಡಿಸ್‌ಚಾರ್ಜ್‌ ಸಮಸ್ಯೆ ಇದ್ದವರು ಇದನ್ನ ಪ್ರತಿದಿನ ಕುಡೀರಿ. ಇನ್ನು ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಹೊಟ್ಟೆನೋವು ಕೂಡ ಕಡಿಮೆಯಾಗುತ್ತೆ. ಒಂದ್ವೇಳೆ ನಿಮ್ಗೆ ದೃಷ್ಟಿ ಸಮಸ್ಯೆ ಇದ್ರೆ, ಕೊತ್ತಂಬರಿ ನೀರನ್ನ ಸೇವಿಸೋದ್ರಿಂದ ದೃಷ್ಟಿದೋಷ ಕಡಿಮೆಯಾಗುತ್ತೆ. ಇದನ್ನ ತಯಾರಿಸೋದಿಕ್ಕೆ ರಾತ್ರಿ ಒಂದು ಗ್ಲಾಸ್‌ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜ ಹಾಕಿ. ಬೆಳಗ್ಗೆ ಅದನ್ನ ಕುದಿಸಿ ಶೋಧಿಸಿ ಕುಡಿಯಿರಿ. ಹೆಲ್ತ್‌ ಇಂಪ್ರೂವ್‌ ಮಾಡ್ಕೊಳೋದಿಕ್ಕೆ ಈ ಚಿಕ್ಕ ಚಿಕ್ಕ ಸ್ಟೆಪ್‌ಗಳನ್ನ ಮೊದ್ಲು ಫಾಲೋ ಮಾಡಿ ಒಂದು ಶಿಸ್ತನ್ನ ಬೆಳೆಸಿಕೊಂಡ್ರೆ, ಸಮಸ್ಯೆ ಹೆಚ್ಚಾಗೋದಕ್ಕೂ ಮೊದ್ಲೇ ಎಚ್ಚೆತ್ತುಕೊಳ್ಬಹುದು.

Share.
Leave A Reply