Chocolate ಅಂದ್ರೆ ಯಾರಿಗ್ ಇಷ್ಟ ಇಲ್ಲ ಹೇಳಿ.. ಚಿಕ್ ಮಕ್ಳಿಂದ ಹಿಡಿದು ದೊಡ್ಡೋರವರೆಗೂ ಚಾಕ್ಲೆಟ್ ಎಲ್ಲರ ಫೇವರಿಟ್. ಅದ್ರಲ್ಲೂ ಮಕ್ಳು ಹೆಚ್ಚಾಗಿ ಚಾಕ್ಲೆಟ್ ತಿಂತಾರೆ. ಆದ್ರೆ ಫುಡ್ ಸೇಫ್ಟಿ ಡಿಪಾರ್ಟ್‌ಮೆಂಟ್ ಬಹಿರಂಗ ಪಡಿಸಿರುವ ಈ ಮಾಹಿತಿ ಇದೀಗ ಬೆಚ್ಚಿಬೀಳಿಸುವಂತಿದೆ. ಯಾಕಂದ್ರೆ ಚಾಕ್ಲೆಟ್‌ನಲ್ಲಿ ಆಲ್ಕೋಹಾಲ್ ಅಂಶ ಇರುವ ಬಗ್ಗೆ ಫುಡ್ ಸೇಫ್ಟಿ ಡಿಪಾರ್ಟ್‌ಮೆಂಟ್ ಸ್ಪಷ್ಟ ಮಾಹಿತಿ ನೀಡಿದೆ.
ವಿದೇಶದಿಂದ ಇಂಪೋರ್ಟ್ ಮಾಡಿಕೊಳ್ಳಲಾದ ಹಲವು chocolates ಆಲ್ಕೋಹಾಲ್ ಅಂಶ ಇರುವ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅವುಗಳ ಮಾದರಿಗಳನ್ನು ಸಂಗ್ರಹಿಸಲು ಆರಂಭಿಸಿದೆ. ರಾಷ್ಟ್ರೀಯ ವಾರ್ಷಿಕ ಕಣ್ಗಾಗಲು ಯೋಜನೆಯ ಭಾಗವಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಈ ಅಭಿಯಾನ ಆರಂಭಿಸಿದೆ.
Also Read: BJP Congress Politics : ಬೆಂಗಳೂರನ್ನು ಬಿಜೆಪಿ ಅವರು ಲೂಟಿ ಮಾಡಿ ಬಿಟ್ಟು ಹೋಗಿದ್ದಾರೆ ಎಂದ ಡಿ.ಕೆ ಸುರೇಶ್
ಈ ಅಭಿಯಾನದಲ್ಲಿ ಗುಣಮಟ್ಟ ಸುರಕ್ಷತೆ ಮತ್ತು ಲೇಬಲಿಂಗ್, ಜಾಹೀರಾತು ನಿಯಮಗಳ ಕುರಿತು ಪರೀಕ್ಷಿಸಲಾಗುತ್ತೆ. ಸಂಗ್ರಹಿಸಲಾದ ಡೇಟಾವನ್ನು ಕೇಂದ್ರ ಆಹಾರ ಸುರಕ್ಷತಾ ಅನುಸರಣಾ ವ್ಯವಸ್ಥೆಗೆ ಅಪ್ಲೋಡ್ ಮಾಡಲಾಗುತ್ತೆ. ಇದುವರೆಗೆ 23 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇವುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ ವಿಶೇಷವಾಗಿ ಮಕ್ಕಳಿಗೆ ಚಾಕೋಲೆಟ್ ಗಳಲ್ಲಿ ಇರುವ ಆಲ್ಕೋಹಾಲ್ ಅಂಶದ ಬಗ್ಗೆ ಎಚ್ಚರಿಕೆ ನೀಡಿಲ್ಲವೆಂದು ಹೇಳಲಾಗಿದೆ.
ಒಂದ್ವೇಳೆ ಆಲ್ಕೋಹಾಲ್ ಅಂಶ ಇರುವುದು ಖಚಿತವಾದಲ್ಲಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಲಾಗಿದೆ.