Author: Mahanthesha

ಬೆಂಗಳೂರು, ಜ.30: ಭಾರತದ ಮುಂಚೂಣಿ ಕಂಟೆಂಟ್ ಮತ್ತು ತಂತ್ರಜ್ಞಾನ ಪವರ್‌ಹೌಸ್ ಆಗಿರುವ ‘Z’, ಬಹು-ಸ್ಕ್ರೀನ್ ಎಂಗೇಜ್‌ಮೆಂಟ್ ಅನ್ನು ಪರಿಣಾಮಕಾರಿಯಾಗಿ ನಾವಿಗೇಟ್ ಮಾಡಲು ಹಾಗೂ ಕ್ರಿಯೇಟಿವ್ ಕಟ್-ಥ್ರೂ ಒದಗಿಸಲು ಬ್ರ್ಯಾಂಡ್‌ಗಳಿಗೆ ನೆರವಾಗುವ ಹೊಸ ಓಮ್ನಿಚಾನಲ್ ರೀಚ್ ಪರಿಹಾರ ‘Dilfluencer Moments’ ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಭಾರತದ ಜಾಹೀರಾತು ಕ್ಷೇತ್ರವು ವೇಗವಾಗಿ ರೂಪಾಂತರಗೊಳ್ಳುತ್ತಿದ್ದು, ಇಂದು ಯಾವುದೇ ಗಾತ್ರದ ಬ್ರ್ಯಾಂಡ್‌ಗಳಿಗೂ ಜಾಹೀರಾತು ಇನ್‌ವೆಂಟರಿಯನ್ನು ಸುಲಭವಾಗಿ ಖರೀದಿಸುವ ಅವಕಾಶ ದೊರಕಿದೆ. ಆದರೆ ಈ ಪ್ರಜಾಪ್ರಭುತ್ವೀಕರಣದ ವಿಸ್ತರಣೆ, ಅಪಾರ ಪ್ರಮಾಣದ ಜಾಹೀರಾತು ಸಂದೇಶಗಳ ನಡುವೆ ಬ್ರಾಂಡ್‌ಗಳು ಎದ್ದು ಕಾಣುವುದು ಹೇಗೆ ಎಂಬ ಹೊಸ ಸವಾಲನ್ನು ತಂದಿದೆ. ಜಾಹೀರಾತು ಗೊಂದಲ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಗ್ರಾಹಕರು ಕೇವಲ ನೋಡುವುದಲ್ಲದೆ ನೆನಪಿನಲ್ಲಿ ಉಳಿಸಿಕೊಳ್ಳುವಂತೆ ಮಾಡುವುದೇ ಮಾರ್ಕೆಟರ್‌ಗಳ ಪ್ರಮುಖ ಪ್ರಶ್ನೆಯಾಗಿದೆ. ಬ್ರ್ಯಾಂಡ್ ಅವೇರ್‌ನೆಸ್ ಮಾತ್ರವಲ್ಲದೆ, ಬ್ರಾಂಡ್ ಪ್ರೀತಿ ಮತ್ತು ಅರ್ಥಪೂರ್ಣ ಸಕ್ರಿಯತೆಯನ್ನು ಹೇಗೆ ನಿರ್ಮಿಸಬೇಕು ಎಂಬುದೇ ಸವಾಲಾಗಿ ಪರಿಣಮಿಸಿದೆ. ‘Dilfluencer Moments’ ಪರಿಚಯ: ಈ ಸವಾಲಿಗೆ ‘Z’ಯ ಉತ್ತರವೇ ‘Dilfluencer…

Read More

ಬೆಂಗಳೂರು, ಜ.28: ಮಹಾರಾಷ್ಟ್ರದ ಚತುರ… ಶಿವಾಜಿ ನಾಡಿನ ಪ್ರಭಾವಿ ನಾಯಕ ಎಂದೇ ಫೇಮಸ್‌ ಆಗಿದ್ದ ಅಜಿತ್‌ ಪವಾರ್‌ ಈಗ ದುರಂತ ಅಂತ್ಯ ಕಂಡಿದ್ದಾರೆ. ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಲ್ಯಾಂಡಿಂಗ್‌ ವೇಳೆ ಪತನಗೊಂಡಿದ್ದು, ಡಿಸಿಎಂ ಅಜಿತ್‌ ಪವಾರ್‌ ಸೇರಿ 5 ಜನರು ದುರ್ಮರಣ ಹೊಂದಿದ್ದಾರೆ. ಆದ್ರೆ, ಅವರ ರಾಜಕೀಯ ಬದುಕೇ ಒಂದು ರೋಚಕ ಪಯಣ.. ಅವರು ಕೈಗೊಂಡ ನಿರ್ಧಾರಗಳು ಈಗಲೂ ಚರ್ಚೆ ಹುಟ್ಟು ಹಾಕುತ್ತಿವೆ. ಹೌದು.. ಅಜಿತ್‌ ಪವಾರ್ ಬೇರೆ ಯಾರೂ ಅಲ್ಲ.. ಭಾರತೀಯ ರಾಜಕೀಯ ಚಾಣಕ್ಯ, ಮಹಾರಾಷ್ಟ್ರದಲ್ಲಿ ದೊಡ್ಡ ಹೆಸರು ಮಾಡಿರುವ ಎನ್‌ಸಿಪಿ ಸಂಸ್ಥಾಪಕ ಶರದ್‌ ಪವಾರ್‌ ಸಹೋದರನ ಮಗ.. 1959 ಜುಲೈ 22 ರಂದು ಮಹಾರಾಷ್ಟ್ರದ ಡಿಯೋಲಾಲಿ ಪ್ರವರ ಪ್ರದೇಶದಲ್ಲಿ ಜನಿಸಿದ್ದ ಅಜಿತ್‌ ಪವಾರ್‌, ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಅಖಾಡಕ್ಕೆ ಧುಮುಕ್ಕಿದ್ರು. 21ನೇ ವಯಸ್ಸಿನಲ್ಲೇ ರಾಜಕೀಯ ರುಚಿ ಕಂಡಿದ್ದ ಅಜಿತ್‌ ಪವಾರ್‌, 45 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯ ಅನುಭವಿಸಿದ್ದಾರೆ. ಮಹಾರಾಷ್ಟ್ರ ರಾಜಕೀಯದ ಇತಿಹಾಸದಲ್ಲಿ ಹಲವು ಬಾರಿ ಸಚಿವರಾಗಿದ್ದ ಅಜಿತ್‌…

Read More

ಬೆಂಗಳೂರು, ಜ.27: ಅಧ್ಯಕ್ಷ, ವಿಕ್ಟರಿ, ರನ್ನ, ಪೊಗರು, ತೀರ್ಥರೂಪ ತಂದೆಯವರಿಗೆ, ಅಣ್ಣ ಫ್ರಂ ಮೆಕ್ಸಿಕೋ ಸಿನಿಮಾಗಳಿಗೆ ಸಖತ್ತಾಗಿರೋ ಡೈಲಾಗ್‌ ಬರೆದು ಸೈ ಎನ್ನಿಸಿಕೊಂಡಿದ್ದ ರೈಟರ್‌ ಪ್ರಶಾಂತ್‌ ರಾಜಪ್ಪ ನಿರ್ದೇಶನದ ಚೊಚ್ಚಲ ಸಿನಿಮಾದ ಟೈಟಲ್‌ ರಿವಿಲ್‌ ಆಗಿದೆ. ಪ್ರಶಾಂತ್‌ ರಾಜಪ್ಪ ನಿರ್ದೇಶನದ ಮೊದಲ ಸಿನಿಮಾಗೆ ಅನಂತ ಪದ್ಮನಾಭ ಎಂದು ಹೆಸರಿಡಲಾಗಿದ್ದು, ಸಿನಿಮಾದಲ್ಲಿ ರಿಷಿ ಹಾಗೂ ಪ್ರಕಾಶ್‌ ಬೆಳವಾಡಿ ಲೀಡ್‌ ಆಗಿ ಕಾಣಿಸಿಕೊಳ್ತಿದ್ದಾರೆ…ಈಗಾಗಲೇ ಟೈಟಲ್‌ ಬಿಡುಗಡೆ ಮಾಡುವ ಮುನ್ನ ವಿಡಿಯೋ ಕಂಟೆಂಟ್‌ ಬಿಟ್ಟು ಸಿನಿಮಾ ಬಗ್ಗೆ ಕ್ಯೂರಿಯಾಸಿಟಿ ಮೂಡಿಸಿದ್ದ ಡೈರೆಕ್ಟರ್‌ ಸದ್ಯ ಡಿಫ್ರೆಂಟ್‌ ಆಗಿರೋ ಟೈಟಲ್‌ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರಿಷಿ ನಾಯಕನಾಗಿ ಅಭಿನಯ ಮಾಡ್ತಿರೋ ಅನಂತ ಪದ್ಮನಾಭ ಸಿನಿಮಾದಲ್ಲಿ ಪ್ರಕಾಶ್‌ ಬೆಳವಾಡಿ ಅವರದ್ದು ವಿಶೇಷ ಪಾತ್ರ ಇನ್ನು ನಾಯಕಿಯಾಗಿ ಅಂಜಲಿ ಅನೀಶ್‌ ಕಾಣಸಿಕೊಂಡಿದ್ದಾರೆ. ಎರಡು ಜನರೇಷನ್‌ ಬಗ್ಗೆ ಇರೋ ಈ ಕಥೆಯಲ್ಲಿ ಜೀವನದ ಮೌಲ್ಯಗಳ ಬಗ್ಗೆಯೂ ಹೇಳಿದ್ದಾರಂತೆ ನಿರ್ದೇಶಕರು ಕಾಮಿಡಿ ಡ್ರಾಮ ಇರೋ ಅನಂತ ಪದ್ಮನಾಭ ಸಿನಿಮಾವನ್ನ ಅಮ್ರೇಜ್‌ ಸೂರ್ಯವಂಶಿ ನಿರ್ಮಾಣ…

Read More

ಬೆಂಗಳೂರು, ಜ.27: ಕೇಂದ್ರ ಸರ್ಕಾರ ದುರುದ್ದೇಶದಿಂದ ವಿಬಿ ಜಿ ರಾಮ್ ಜಿ ಎಂಬ ಯೋಜನೆ ಜಾರಿ ಮಾಡಿದೆ. ಈ ಯೋಜನೆಯಲ್ಲಿ ರಾಮ ಎಂಬುದು ಕೇವಲ ಹೆಸರಷ್ಟೇ, ಬಡವರ ಹಿತದ ಬಗ್ಗೆ ಯಾವುದೇ ಚಿಂತನೆ ಇಲ್ಲ. ದಶರಥ ರಾಮ, ಕೌಸಲ್ಯ ರಾಮ ಅಥವಾ ಸೀತಾರಾಮ ಯಾರೂ ಈ ಕಾಯ್ದೆಯಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಬಿ ಜಿ ರಾಮ್ ಜಿ ಕಾಯ್ದೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕಾಯ್ದೆ ಜಾರಿಗೊಂಡಿತ್ತು‌. ಬಡವರು, ದಲಿತರು, ಅಲ್ಪಸಂಖ್ಯಾತರು, ರೈತರ ಬಗ್ಗೆ ಕಾಂಗ್ರೆಸ್ ಮಾತ್ರ ಚಿಂತನೆ ಮಾಡುತ್ತದೆ. ಬಿಜೆಪಿ ಎಲ್ಲಾ ಕಾರ್ಯಕ್ರಮ ನಾಶ ಮಾಡಿ ಉದ್ಯೋಗ ಸಿಗದಂತೆ ಮಾಡಿದ್ದಾರೆ. ಬಡವರಿಗೆ ಹಣಕಾಸು ಸಿಗಬಾರದು, ಅವರು ಸೇವಕರಾಗಿ ಇರಬೇಕು ಎಂಬ ಉದ್ದೇಶದಿಂದ ಆರ್‌ಎಸ್ಎಸ್ ಮಾರ್ಗದರ್ಶನ ಮಾಡಿ ಕಾಯ್ದೆ ರದ್ದು ಮಾಡಲಾಗಿದೆ‌ ಎಂದು ವಾಗ್ದಾಳಿ ನಡೆಸಿದ್ದಾರೆ. ಮನರೇಗಾದಲ್ಲಿ ಉದ್ಯೋಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ತೀರ್ಮಾನ ಆಗುತ್ತಿತ್ತು. ಆದರೆ,…

Read More

ಬೆಂಗಳೂರು, ಜ.24: ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿರುವ ಬಹು ನಿರೀಕ್ಷಿತ ಚಿತ್ರ ‘ವೀರ ಕಂಬಳ’. ಕಂಬಳ ಎಂಬುದು ತುಳುನಾಡಿನ ನೆಲಮೂಲದ ಸಂಸ್ಕೃತಿಯ ಸೆಲೆಯಂಥಾ ಕ್ರೀಡೆ. ಅದಕ್ಕೆ ಎಂಟುನೂರು ವರ್ಷಗಳಿಗೂ ಹೆಚ್ಚಿನ ಸಮೃದ್ಧವಾದ ಇತಿಹಾಸವಿದೆ. ಕಾಲ ಕಳೆದಂತೆ ಒಂದಷ್ಟು ಕಾನೂನು ತೊಡಕುಗಳೆದುರಾಗುವ ಮೂಲಕ ಕಂಬಳ ಒಂದಷ್ಟು ರೂಪಾಂತರಗಳನ್ನು ಹೊಂದಿದೆ. ಅದರ ನಿಖರ ಇತಿಹಾಸದ ಜಾಡಿನಲ್ಲಿ ಹೆಜ್ಜೆಯಿಡುವ ಮೂಲಕ ರಾಜೇಂದ್ರ ಸಿಂಗ್ ಬಾಬು, ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಈ ಚಿತ್ರವನ್ನು ರೂಪಿಸಿದ್ದಾರೆ. ಆರಂಭದಿಂದಲೂ ಸುದ್ದಿ ಕೇಂದ್ರದಲ್ಲಿರುವ ವೀರ ಕಂಬಳ ಚಿತ್ರವನ್ನು ಇದೇ ಫೆಬ್ರವರಿ ತಿಂಗಳಿನಲ್ಲಿ ತೆರೆಗಾಣಿಸಲು ಚಿತ್ರತಂಡ ನಿರ್ಧರಿಸಿದೆ. ಕಂಬಳವನ್ನು ಕೇಂದ್ರವಾಗಿಟ್ಟುಕೊಂಡು ಈ ಕಥೆ, ಚಿತ್ರಕಥೆ ಸಿದ್ಧಪಡಿಸಲು ನಿರ್ದೇಶಕರು ಎರಡು ವರ್ಷಗಳ ಕಾಲ ಶ್ರಮ ವಹಿಸಿದ್ದಾರೆ. ತುಳು ರಂಗಭೂಮಿಯ ಪ್ರಸಿದ್ಧ ನಿರ್ದೇಶಕ ವಿಜಯ್ ಕೊಡಿಯಾಲ್ ಬೈಲ್ ಚಿತ್ರಕಥೆ ಮತ್ತು ಸಂಭಾಷಣೆಯ ಮೂಲಕ ಈ ಚಿತ್ರಕ್ಕೆ ಜೊತೆಯಾಗಿದ್ದಾರೆ. ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ನಾಯಕನಾಗಿ ಸವಾಲಿನ ಪಾತ್ರಕ್ಕೆ ಜೀವ…

Read More

ಬೆಂಗಳೂರು, ಜ.24: ಶ್ರೀ ರಾಘವೇಂದ್ರ ಮಹಾತ್ಮೆ ಧಾರಾವಾಹಿಯಲ್ಲಿ ವೆಂಕಟನಾಥ-ಸರಸ್ವತಿಯ ವಿವಾಹ ವೈಭವವು ಮಹಾಸಂಚಿಕೆಯ ರೂಪದಲ್ಲಿ ಪ್ರಸಾರಗೊಳ್ಳಲಿದೆ. ಶನಿವಾರ ಮತ್ತು ಭಾನುವಾರ (ಇಂದು ಮತ್ತು ನಾಳೆ) ಸಂಜೆ 5.30 ರಿಂದ 7 ಗಂಟೆಯ ವರೆಗೆ ಜೀ ಕನ್ನಡದಲ್ಲಿ ರಾಯರ ಪೂರ್ವಾಶ್ರಮದ ಬದುಕಿನ ಸಂಭ್ರಮವನ್ನು ಕಣ್ತುಂಬಿಕೊಳ್ಳಬಹುದು. ಶ್ರೀ ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು ವೆಂಕಟನಾಥ ಎಂಬುದಾಗಿತ್ತು. ವಿಜಯೀಂದ್ರ ತೀರ್ಥರ ಅನುಗ್ರಹದಂತೆ ಅಧ್ಯಾಪನ ವೃತ್ತಿ ನಡೆಸುತ್ತಿದ್ದ ವೆಂಕಟನಾಥ ಸರಸ್ವತಿ ಎಂಬ ವಧುವನ್ನು ವಿವಾಹವಾದ. ರಾಯರ ಬದುಕಿನ ಪುಣ್ಯಕಥೆ ಶ್ರೀ ರಾಘವೇಂದ್ರ ಮಹಾತ್ಮೆಯು ಪ್ರಸ್ತುತ ವಿವಾಹದ ಘಟ್ಟದಲ್ಲಿದೆ. ವೆಂಕಟನಾಥ-ಸರಸ್ವತಿಯ ಮದುವೆಯನ್ನು ಮಾಧ್ವ ಸಂಪ್ರದಾಯದ ಅನುಸಾರ,‌ ಹಳೆಯ ಕಾಲದ ರೀತಿ ರಿವಾಜುಗಳಂತೆ ಚಿತ್ರಿಸಲಾಗಿದೆ. ನಾಂದಿ ಶಾಸ್ತ್ರ, ತುಳಸಿ ಪೂಜೆ, ಚಪ್ಪರ ಶಾಸ್ತ್ರ ಮತ್ತಿತರ ಶಾಸ್ತ್ರಗಳಿಂದ ವೆಂಕಟನಾಥನ‌ ಮದುವೆಯು ಅದ್ಧೂರಿಯಾಗಿ ನಡೆಯಲಿದೆ. ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆ, ರಾಯರ ಮೇಲಿನ ಭಕ್ತಿ, ಪ್ರೀತಿ ಇವುಗಳ ಕಾರಣದಿಂದ ಧಾರಾವಾಹಿಯು ಜನಮನ್ನಣೆ ಪಡೆದಿದೆ.

Read More

ಬೆಂಗಳೂರು, ಜ.24: ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ‘ಕಲರ್ಸ್‌ ಕನ್ನಡ’, ತನ್ನ 12ನೇ ವರ್ಷದ ‘ಅನುಬಂಧ ಅವಾರ್ಡ್ಸ್‌’ ಸಂಭ್ರಮಕ್ಕೆ ಸಜ್ಜಾಗಿದೆ. ಜನವರಿ 24, 25 ಮತ್ತು 26ರಂದು ಸತತ ಮೂರು ದಿನಗಳ ಕಾಲ ಸಂಜೆ 7ಕ್ಕೆ ಈ ಅದ್ಧೂರಿ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮನರಂಜನೆಯ ಮಹಾಪೂರವೇ ಹರಿಯಲಿದೆ. ಈ ಬಾರಿಯ ಅವಾರ್ಡ್ಸ್‌ನಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಅನುಬಂಧ ಅವಾರ್ಡ್ಸ್‌ ಕೇವಲ ಒಂದು ಪ್ರಶಸ್ತಿ ಪ್ರದಾನ ಸಮಾರಂಭವಲ್ಲ, ಬದಲಿಗೆ ಕಲರ್ಸ್‌ ಕನ್ನಡ ಮತ್ತು ಅದರ ಕೋಟ್ಯಂತರ ವೀಕ್ಷಕರ ನಡುವಿನ ಅವಿನಾಭಾವ ಸಂಬಂಧದ ಸಂಭ್ರಮ. ನಮ್ಮ ಕಥೆಗಳನ್ನು ತಮ್ಮದೇ ಕಥೆಗಳಂತೆ ಸ್ವೀಕರಿಸಿ ಅಪ್ಪಿಕೊಂಡಿರುವ ಪ್ರೇಕ್ಷಕರು ಮತ್ತು ನಮ್ಮ ನಡುವಿನ ಅಳಿಸಲಾಗದ ಬಂಧಕ್ಕೆ ಸಲ್ಲುವ ಗೌರವವೇ ಈ ‘ಅನುಬಂಧ ಅವಾರ್ಡ್ಸ್‌’. ಕನ್ನಡ ಮನರಂಜನಾ ಲೋಕದ ಅತ್ಯುತ್ತಮ ಪ್ರತಿಭೆಗಳನ್ನು ಗೌರವಿಸುವುದರ ಜೊತೆಗೆ, ಈ ವರ್ಷದ ಕಾರ್ಯಕ್ರಮವು ಮತ್ತಷ್ಟು ಶ್ರೀಮಂತವಾಗಿ ಹಾಗೂ ಅದ್ಧೂರಿಯಾಗಿ ಮೂಡಿಬಂದಿದೆ. ಕರುನಾಡಿನ ಪ್ರತಿಯೊಬ್ಬ ವೀಕ್ಷಕರ ಮನದಲ್ಲಿ ಈ ಸಂಭ್ರಮವು ಸದಾ ಹಸಿರಾಗಿ…

Read More

ಬೆಂಗಳೂರು, ಜ.21 : ಕನ್ನಡ ಕಿರುತೆರೆ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ಼ ಕನ್ನಡ ವಾಹಿನಿಯು ಬರೀ ಧಾರಾವಾಹಿಗಳಿಂದ ಮಾತ್ರವಲ್ಲದೇ, ರಿಯಾಲಿಟಿ ಶೋಗಳು, ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳಿಂದ ಪ್ರೇಕ್ಷಕರ ಮನಗೆದ್ದು ನಂ.1 ಪಟ್ಟದಲ್ಲಿದೆ. ಅಷ್ಟೇ ಅಲ್ಲದೇ ಈಗ ಜೀ಼ ಕನ್ನಡ ವಾಹಿನಿಯು ಪ್ರೇಕ್ಷಕರಿಗೆ ಮತ್ತೊಂದು ಗುಡ್ ನ್ಯೂಸ್ ಕೊಡಲು ಮುಂದಾಗಿದೆ. ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಸಕ್ಸಸ್ ಪಡೆದ ʼಕಾಂತಾರ: ಚಾಪ್ಟರ್ 1ʼ ಇದೇ ಜನವರಿ 24 ರಂದು ಸಂಜೆ 7 ಗಂಟೆಗೆ ಜೀ಼ ಕನ್ನಡದಲ್ಲಿ ಪ್ರಸಾರ ಆಗಲಿದೆ. ‘ಕಾಂತಾರ: ಚಾಪ್ಟರ್ 1’ ಕಥೆಯು 4ನೇ ಶತಮಾನದ ಕದಂಬ ರಾಜವಂಶದ ಕಾಲದ ಒಂದು ಇತಿಹಾಸ ಕಥೆಯಾಗಿದ್ದು ಕಾಂತಾರ ಎಂಬ ಪ್ರದೇಶದ ನಾಯಕ ಬೇರ್ಮೆ ಮತ್ತು ಬಾಂಗ್ರಾ ರಾಜ ಮನೆತನದ ನಡುವಿನ ಸಂಘರ್ಷವನ್ನು ತೋರಿಸುತ್ತದೆ. ಅಷ್ಟೇ ಅಲ್ಲದೇ ಕಾಂತಾರ ಎನ್ನುವ ಅದ್ಭುತ ಅರಣ್ಯಭೂಮಿಯ ಹುಟ್ಟಿನ ಕಥೆಯನ್ನು ಹೇಳುತ್ತದೆ. ಈ ನೆಲವನ್ನು ರೂಪಿಸಿದ ಆಳವಾದ ಸಂಪ್ರದಾಯಗಳು, ನಂಬಿಕೆ ಮತ್ತು ಜನಪದ ಕಥೆಗಳನ್ನೂ…

Read More

ಬೆಂಗಳೂರು, ಜ.19: ಹತ್ತು ನಿಮಿಷದಲ್ಲಿ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ವಿಷಯ ಇತ್ತೀಚೆಗೆ ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಈ ಹತ್ತು ನಿಮಿಷದ ಡೆಲಿವರಿಯನ್ನು ಕ್ವಿಕ್‌ ಕಾಮರ್ಸ್‌ ವಲಯದ ಕಂಪನಿಗಳು ಇದೀಗ ಕೈ ಬಿಟ್ಟಿವೆ. ರಸ್ತೆ ಸುರಕ್ಷತೆಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಗಿಗ್‌ ಕಾರ್ಮಿಕರ ಆರೋಗ್ಯ ಮತ್ತು ಭದ್ರತೆಗೆ ಇದೀಗ ಸ್ಪಂದನೆ ಸಿಕ್ಕಿದೆ. ಈ ನಿರ್ಧಾರಕ್ಕೇನೋ ಕೇಂದ್ರ ಸರ್ಕಾರ ಈಗ ಬಂದಿದೆ, ಆದರೆ ಈ ಚರ್ಚೆಯನ್ನು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು, ಸಾಕಷ್ಟು ದಿನಗಳ ಹಿಂದೆಯೇ ಹುಟ್ಟು ಹಾಕಿದ್ದರು ಎಂಬುದು ಗಮನಾರ್ಹ. ಗಿಗ್‌ ಕಾರ್ಮಿಕರ ಸುರಕ್ಷತೆಯನ್ನು ಆದ್ಯತೆಯಾಗಿ ಪರಿಗಣಿಸಿ ಹತ್ತು ನಿಮಿಷದ ವಿತರಣೆಯನ್ನು ರದ್ದು ಮಾಡುವ ಬಗ್ಗೆ ಇ ಕಾಮರ್ಸ್‌ ಕಂಪನಿಗಳೊಂದಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬ್ಲಿಂಕಿಟ್‌, ಸ್ವಿಗ್ಗಿ ಮತ್ತು ಜೆಫ್ಟೊ ಕಂಪನಿಗಳು ಈ ಹತ್ತು ನಿಮಿಷದ ಸೇವೆಯನ್ನು ರದ್ದು ಮಾಡಿವೆ. ಗಿಗ್‌ ಕಾರ್ಮಿಕರ ಸುರಕ್ಷತೆಯ ಬಗ್ಗೆ…

Read More

ಬೆಂಗಳೂರು, ಜ.19: ಬಿಗ್‌ ಬಾಸ್‌ ಸೀಸನ್‌ 12 ಕಾರ್ಯಕ್ರಮ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ. 37 ಕೋಟಿಗೂ ಅಧಿಕ ಮತಗಳನ್ನ ಪಡೆದು ಗಿಲ್ಲಿ ನಟ ಅವರು ಬಿಗ್‌ ಬಾಸ್‌ ಕಪ್‌ ಗೆದ್ದಿದ್ದಾರೆ. ಕಾವ್ಯಾ ಜೊತೆ ಜಂಟಿಯಾಗಿ ದೊಡ್ಮನೆಗೆ ಕಾಲಿಟ್ಟ ಗಿಲ್ಲಿ ಇವತ್ತು ಒಂಟಿಯಾಗಿ ಕಪ್‌ ಗೆಲ್ಲೋದು ಮಾತ್ರವಲ್ಲದೇ ಕೋಟ್ಯಂತರ ಕನ್ನಡಿಗರ ಮನ ಗೆದ್ದಿದ್ದಾರೆ. ಇದೀಗ ಎಲ್ಲರನ್ನೂ ಕಾಡ್ತಾ ಇರುವ ಪ್ರಶ್ನೆ ಏನಂದ್ರೆ ಗಿಲ್ಲಿ ನಟನಿಗೆ ಎಷ್ಟು ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ ಅನ್ನೋದು. ಕೇವಲ ಬಿಗ್‌ ಬಾಸ್‌ ಕಡೆಯಿಂದ ಮಾತ್ರವಲ್ಲ ಗಿಲ್ಲಿ ಅವರಿಗೆ ಕಿಚ್ಚ ಸುದೀಪ್‌ ಕೂಡ ಬಹುಮಾನ ನೀಡಿದ್ದಾರೆ. ಹಾಸ್ಯ ಮಾತ್ರವಲ್ಲದೇ ತನ್ನದೇ ವಿಶಿಷ್ಟ ಮ್ಯಾನರಿಸಂ ಮೂಲಕ ಗಿಲ್ಲಿ ಆಟ ಆಡಿದ್ರು. ಟಾಸ್ಕ್‌ಗಳನ್ನ ಅಷ್ಟಾಗಿ ಆಡದೇ ಇದ್ರೂ ಆಟದ ದಿಕ್ಕನ್ನ ಬದಲಾಯಿಸುವಷ್ಟು ಕೇಪೇಬಲ್‌ ಆಗಿದ್ರು. ಬಿಗ್‌ ಬಾಸ್‌ ಆಟವನ್ನ ಹೀಗೂ ಆಡ್ಬಹುದು ಅಂತಾ ತೋರಿಸಿಕೊಟ್ಟವರು ಗಿಲ್ಲಿನಟ. ಚಿಕ್ಕ ಮಕ್ಳಿಂದ ಹಿಡಿದು ಹಿರಿಯರವರೆಗೂ ಎಲ್ಲರ ಮನಸ್ಸನ್ನ ಗೆದ್ರು. ಹೀಗಾಗಿ ಇವತ್ತು ಗಲ್ಲಿ ಗಲ್ಲಿಯಲ್ಲೂ ಗಿಲ್ಲಿಯದ್ದೇ…

Read More