Author: chandrakant

21 ಡಿಸೆಂಬರ್ 2024, ಭಾರತೀಯ ಸಮಯ ಸಂಜೆ 8.00 ಗಂಟೆಗೆ ಅನೇಕ ಮಿಲಿಯನ್ ಜನರು, “ವರ್ಲ್ಡ್ ಮೆಡಿಟೇಟ್ಸ್ ವಿತ್ ಗುರುದೇವ್” ನಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು, ಡಿಸೆಂಬರ್ 18, 2024: ಜಾಗತಿಕ ಆಧ್ಯಾತ್ಮಿಕ ಗುರುಗಳಾದ, ಮಾನವತಾವಾದಿಗಳಾದ ಗುರುದೇವ್ ಶ್ರೀ ಶ್ರೀ ರವಿಶಂಕರರು (Sri Sri Ravi Shankar) ಡಿಸೆಂಬರ್ 21, ಶನಿವಾರ ಜಾಗತಿಕ ಧ್ಯಾನವನ್ನು ನಡೆಸಿಕೊಡಲಿದ್ದಾರೆ. ಇದು ನೇರ ಪ್ರಸಾರವಾಗಲಿದೆ. ಇದರ ನಂತರ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ, ಡಿಸೆಂಬರ್ 21 ರಂದು “ವಿಶ್ವ ಧ್ಯಾನ ದಿನ”ವನ್ನು (World Meditation Day) ಘೋಷಿಸಿ, ಇದನ್ನು ಸರ್ವಾನುಮತದಿಂದ ಅನುಮೋದಿಸಲಾಗುವುದು. ಈ ಐತಿಹಾಸಿಕ ಘಟನೆಯು, ಇನ್ನು ಮುಂದೆ ಪ್ರತಿ ವರ್ಷದ ನಡೆಯಲಿರುವ ಜಾಗತಿಕ ಧ್ಯಾನದ ಆಚರಣೆಯ ಉತ್ಸವಕ್ಕೆ ನಾಂದಿಯಾಗಲಿದೆ. ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಪರಿವರ್ತನಕಾರಕವಾದ ಲಾಭಗಳನ್ನು ಬೀರುವ ಮತ್ತು ಶಾಂತಿ ಹಾಗೂ ಐಕ್ಯತೆಯನ್ನು ಪೋಷಿಸುವ ಧ್ಯಾನದದಿಂದ ಆಗುವ ಪ್ರಯೋಜನಗಳನ್ನು ಗುರುತಿಸಿದಂತಾಗುತ್ತದೆ. ನ್ಯೂಯಾರ್ಕ್ ನ (New York) ವಿಶ್ವ ಸಂಸ್ಥೆಯ ‘ಪರ್ಮನೆಂಟ್ ಮಿಷನ್ ಆಫ್…

Read More

2024ರಲ್ಲಿ ಡಿವೋರ್ಸ್‌ ಪಡೆದ ಸೆಲೆಬ್ರಿಟಿಗಳು ಯಾರು..?2024 ಇನ್ನೇನು ಕೊನೆಯ ಕ್ಷಣದಲ್ಲಿದೆ.. 2025 ಹೊಸ ವರ್ಷದ(New year) ಆಗಮನಕ್ಕೆ ಕೌಂಟ್‌ಡೌನ್‌ ಶುರುವಾಗಿದೆ.. ಮುಂಬರುವ ಹೊಸ ವರ್ಷ ಹೇಗಿರುತ್ತೋ ಗೊತ್ತಿಲ್ಲ.. ಆದ್ರೆ, ಕಳೆದು ಹೋಗುತ್ತಿರುವ 2024 ಹಲವು ಸಿಹಿ ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ.. ಅದ್ರಲ್ಲೂ ಕೆಲವು ಸೆಲೆಬ್ರಿಟಿಗಳ ಬಾಳಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.. ಹತ್ತಾರು ವರ್ಷಗಳ ಸುಖವಾಗಿ ಸಂಸಾರ ಮಾಡಿದ್ದ ಜೋಡಿಗಳು ಇದೀಗ ನಾನೊಂದು ತೀರ.. ನೀನೊಂದು ತೀರ ಆಗಿದ್ದಾರೆ.. ಹಾಗಾದ್ರೆ, ಆ ಜೋಡಿಗಳು ಯಾರ್ಯಾರು..? ಯಾವ ಕಾರಣಕ್ಕೆ ಬೇರೆ ಬೇರೆ ಆದ್ರು ಅನ್ನೋದನ್ನು ಹೇಳ್ತೀವಿ ಅದಕ್ಕೂ ಮೊದಲು ಬಾಸ್‌ ಟಿವಿ ಕನ್ನಡ (boss tv kannada)ಚಾನೆಲ್‌ನ್ನ ಸಬ್‌ಸ್ಕ್ರೈಬ್‌ ಮಾಡಿ.. ದಾಂಪತ್ಯಕ್ಕೆ ʼಬಿಗ್‌ʼ ಬ್ರೇಕ್‌ ಹಾಕಿದ ಚಂದನ್-ನಿವೇದಿತಾ!ಕನ್ನಡದ ಸೆಲೆಬ್ರಿಟಿ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, 2020ರ ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಿಗ್‌ಬಾಸ್‌ (bigg boss)ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ್ದ ಈ ಜೋಡಿ, ನಂತರ ಪ್ರೀತಿಸಿ ಮದುವೆಯಾಗಿದ್ದರು. 4 ವರ್ಷಗಳ ಕಾಲ…

Read More

ಬ್ರಹ್ಮಗಂಟು (Brahmagantu) ಸೀರಿಯಲ್‌ ನಟಿ ಶೋಭಿತಾ ಶಿವಣ್ಣ (Shobitha Shivanna) ತಮ್ಮ ಗಂಡನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆದ್ರೆ, ಶೋಭಿತಾ ಶಿವಣ್ಣ ಸಾವಿನ ನಂತರ ಒಂದೊಂದೇ ರಹಸ್ಯಗಳು ಹೊರಬರುತ್ತಿವೆ.. ಮತ್ತೆ ನಟನೆಗೆ ಮರಳಬೇಕು.. ನಟಿಸಿ ಸಾಧಿಸಬೇಕು ಅಂತಾ ಹಾತೊರೆಯುತ್ತಿದ್ರು.. ಆದ್ರೆ, ಇದ್ದಕ್ಕಿದ್ದಂತೆ ನಟಿಗೆ ಏನಾಯ್ತು..? ಬ್ರಹ್ಮಗಂಟು ಸೀರಿಯಲ್‌ನಲ್ಲಿ ವಿಲನ್‌ ಆಗಿದ್ದ ಶೋಭಿತಾಗೆ ವಿಲನ್‌ ಆಯ್ತಾ ಅದೊಂದು ಸಮಸ್ಯೆ… ಹಾಗಾದ್ರೆ, ಆ ಸಮಸ್ಯೆ ಏನು.? 2023ರ ಮೇ 22ರಂದು ಶೋಭಿತಾ ಶಿವಣ್ಣ ಹೈದರಾಬಾದ್‌ನ (Hyderabad) ಸಾಫ್ಟ್‌ವೇರ್ ಕಂಪನಿ ಉದ್ಯೋಗಿ ಸುಧೀರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು. ಶೋಭಿತಾ ಅರೇಂಜ್‌ ಮ್ಯಾರೇಜ್‌ ಆಗಿದ್ದು, ಅಕ್ಕನ ಗಂಡನ ಸಂಬಂಧಿಕರನ್ನೇ ಶೋಭಿತಾ ಶಿವಣ್ಣ ಮದುವೆಯಾಗಿದ್ದರು.. ಮದುವೆ ಆದ ಮೇಲೆ ಹೈದಾರಾಬಾದ್‌ನಲ್ಲೇ ಗಂಡನ ಜೊತೆಯಲ್ಲಿ ಸೆಟಲ್‌ ಆಗಿದ್ರು.. ಕಿರುತೆರೆ, ಬೆಳ್ಳಿತೆರೆಯಿಂದಲೂ ದೂರವಾಗಿದ್ದರು. ಆದರೆ, ಗಂಡ ಮನೆಯಲ್ಲಿದ್ದಾಗಲೇ ಶೋಭಿತಾ ನೇಣಿಗೆ ಕೊರಳೊಡಿದ್ದಾರೆ.. ಹೀಗಾಗಿ, ಸಾವಿನ ಹಿಂದೆ ಹತ್ತು ಹಲವು ಅನುಮಾನಗಳು ಸುಳಿದಾಡುತ್ತಿವೆ.. ಶೋಭಿತಾ ಶಿವಣ್ಣಗೆ ಕಾಡಿದ್ದ ಆ ಕಾಯಿಲೆ ಯಾವುದು..?…

Read More

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾದ ಫೆಂಗಲ್ ಚಂಡಮಾರುತ ರಾಜ್ಯಕ್ಕೂ ಕಾಲಿಟ್ಟಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದೆ. ಚೆನ್ನೈ (Chennai), ಪುದುಚೇರಿ (Puducherry) ಅಕ್ಷರಶಃ ನಲುಗಿಹೋಗಿದೆ. ರಾಜ್ಯದಲ್ಲಿ ಇನ್ನೂ ಮುರ್ನಾಲ್ಕು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆಂಗಲ್‌ ಚಂಡಮಾರುತದ (Fengal Cyclone)ಅಬ್ಬರ ಜೋರಾಗಿದ್ದು, ಗಂಟೆಗೆ 90 ಕಿಲೋ ಮೀಟರ್‌ ವೇಗದಲ್ಲಿ ಬೀಸುತ್ತಿದೆ.. ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯನ್ನು ಸುರಿಸಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಶಾಲಾ-ಕಾಲೇಜ್‌ಗಳಿಗೆ ರಜೆ ಘೋಷಣೆ ಮಾಡಿದೆ….. ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು (Mysuru) ಜಿಲ್ಲೆಗಳಲ್ಲಿ ಶಾಲಾ-ಕಾಲೇಜ್‌ಗೆ ರಜೆ ಘೋಷಣೆ ಮಾಡಲಾಗಿದೆ. ಮಳೆ ಜತೆ ವಿಪರೀತ ಚಳಿಯೂ ಇದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಮುಂಜಾಗೃತೆಯಾಗಿ ಶಾಲೆಗಳಿಗೆ ರಜೆ ನೀಡಲಾಗಿದೆ. ಕಳೆದ ಎರಡು ದಿನದಿಂದ ಬೆಂಗಳೂರಲ್ಲಿ (Bengaluru) ಕೊರೆಯುವ ಚಳಿ ಜೊತೆಗೆ ಜಿಟಿ ಜಿಟಿ ಮಳೆ ಬೀಳುತ್ತಿದೆ. ಬೆಳಗ್ಗೆಯಿಂದಲೂ ಮೋಡ ಕವಿದ…

Read More

ಸ್ಯಾಂಡಲ್‌ವುಡ್‌ (Sandalwood) ಮೋಹಕತಾರೆ ರಮ್ಯಾ ಹೆಸರು ಕೇಳಿದ್ರೆ ಈಗಲೂ ಅದೆಷ್ಟೋ ಜನರ ಎದೆಯಲ್ಲಿ ರೋಮಾಂಚನ.. ಆ ಕ್ಯೂಟ್‌ನೆಸ್ಸು, ಬೋಲ್ಡ್‌ ಲುಕ್‌, ಚಂದದ ಮೈಮಾಟ ಎಲ್ಲವೂ ಫಿದಾ ಮಾಡಿ ಬಿಡುತ್ತೆ.. ಸ್ಯಾಂಡಲ್‌ವುಡ್‌ ಕ್ವೀನ್‌ ಅಂತಲೇ ಫೇಮಸ್‌ ಆಗಿರುವ ರಮ್ಯಾ, ಹಲವು ಹಿಟ್‌ ಚಿತ್ರಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಆದ್ರೆ, ರಮ್ಯಾ (Ramya‌) ನಟನೆ, ಸಿನಿಮಾಗಳಿಗಿಂತ ಹೆಚ್ಚು ಸುದ್ದಿ ಆಗ್ತಿರೋದು ಅವರ ಮದುವೆ ವಿಷಯ. ರಮ್ಯಾ ವಯಸ್ಸು 42 ಆದ್ರೂ ಇನ್ನೂ ಮದುವೆ ಆಗಿಲ್ಲ.. ರಮ್ಯಾ ಯಾವಾಗ ಮದುವೆ ಆಗ್ತಾರೆ..? ಮುದುಕಿ ಆಗುವ ವಯಸ್ಸಾಯ್ತು? ಹುಡುಗ ಸಿಗ್ತಾನಾ..? ರಮ್ಯಾಗೆ ಮದುವೆ ಆಗೋ ಮನಸ್ಸು ಇಲ್ವಾ ಅಂತಿದ್ದ ಅಭಿಮಾನಿಗಳಿಗೆ ಈಗ ಗುಡ್‌ನ್ಯೂಸ್‌ ಸಿಕ್ಕಿದೆ. ಹುಟ್ಟು ಹಬ್ಬದ ಆ ಫೋಟೋ ಬಾಳ ಸಂಗಾತಿಯ ಸುಳಿವು ಕೊಟ್ಟಿದೆ.. ಇಷ್ಟು ದಿನ ರಮ್ಯಾ ಮದುವೆ ಯಾವಾಗ ಅಂತಾ ಹೋದಲ್ಲಿ ಬಂದಲ್ಲಿ ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಈಗ ಗುಡ್‌ನ್ಯೂಸ್‌ ಸಿಕ್ಕಿದೆ.. ನಿನ್ನೆಯಷ್ಟೇ ಬರ್ತ್‌ ಡೇ ಆಚರಿಸಿಕೊಂಡಿರುವ ರಮ್ಯಾ ತಮ್ಮ ಮದುವೆಯ ಹಿಂಟ್‌ ಕೊಟ್ಟಿದ್ದಾರೆ..…

Read More