Subscribe to Updates
Get the latest creative news from FooBar about art, design and business.
Author: Bosstv News Desk
ಜೈಪುರ: ಜೈಲಲ್ಲಿ ಇಬ್ಬರು ಕೊಲೆ ಆರೋಪಿಗಳ ಮಧ್ಯೆ (Murder Convicts) ಪ್ರೀತಿ ಅಂಕುರಿಸಿ ಮದುವೆಗಾಗಿ 15 ದಿನಗಳ ಪೆರೋಲ್ ಪಡೆದು ಜೈಲಿನಿಂದ ಆಚೆ ಬಂದಿದ್ದಾರೆ. ಜೈಲಿನಲ್ಲಿ ಇದ್ದಾಗಲೇ ಇಬ್ಬರ ಮಧ್ಯೆ ಪ್ರೀತಿ ಅಂಕುರಿಸಿದೆಯಂತೆ. ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾದ ವ್ಯಕ್ತಿ ಹತ್ಯೆ ಮಾಡಿರುವ ಮಹಿಳೆ ಹಾಗೂ ಐವರನ್ನು ಹತ್ಯೆ ಮಾಡಿದ್ದ ಆರೋಪಿ ಈಗ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ರಾಜಸ್ಥಾನದ ಅಲ್ವಾರ್ನಲ್ಲಿ ಮದುವೆಗೆ ತಯಾರಿ ನಡೆದಿದೆ. ಇವರಿಬ್ಬರ ಮಧ್ಯೆ 6 ತಿಂಗಳಿಂದ ಪ್ರೀತಿ ಹುಟ್ಟಿತ್ತು ಎನ್ನಲಾಗಿದೆ.ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಆಕೆಯ ನಿಶ್ಚಿತ ವರ ಹನುಮಾನ್ ಪ್ರಸಾದ್, ಅಲ್ವಾರ್ನ ಬರೋಡಮೇವ್ನಲ್ಲಿ ತಮ್ಮ ವಿವಾಹಕ್ಕಾಗಿ ರಾಜಸ್ಥಾನ ಹೈಕೋರ್ಟ್ನಿಂದ 15 ದಿನಗಳ ತುರ್ತು ಪೆರೋಲ್ಗಳನ್ನು ಪಡೆದಿದ್ದಾರೆ. ಪ್ರಿಯಾ ಸೇಠ್, ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವಕ ದುಶ್ಯಂತ್ ಶರ್ಮಾ ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಇವರಿಬ್ಬರೂ ಸಂಗನೇರ್ ಓಪನ್ ಜೈಲಿನಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.ತನಗಿಂತ 10 ವರ್ಷ ದೊಡ್ಡವಳಾದ ತನ್ನ ಗೆಳತಿಯ…
ಬೆಂಗಳೂರು: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ (Sidlaghatta Municipal Commissioner) ಫ್ಲೆಕ್ಸ್ ವಿಚಾರದಲ್ಲಿ ನಿಂದಿಸಿದ್ದ ಕಾಂಗ್ರೆಸ್ ನಾಯಕ ರಾಜೀವ್ ಗೌಡಗೆ ಅಮಾನತು ಶಿಕ್ಷೆ ಸಿಕ್ಕಿದೆ. ರಾಜೀವ್ ಗೌಡರನ್ನು (Rajeev Gowda) ಕೆಪಿಸಿಸಿಯಿಂದ (KPCC) ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ನೀಡಿರುವ ವರದಿಯಂತೆ ಕೆಪಿಸಿಸಿ ಅಮಾನತು ಮಾಡಿ ಆದೇಶ ಹೊರಡಿಸಿದೆ. ಪೌರಾಯುಕ್ತೆಗೆ ಬೆದರಿಕೆ ಕರೆ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ತನ್ನ ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡು ರಾಜೀವ್ ಗೌಡ ನಾಪತ್ತೆಯಾಗಿದ್ದಾರೆ. ಪೊಲೀಸರು ಅವರಿಗೆ ಹುಡುಕಾಟ ನಡೆಸಿದ್ದಾರೆ. ಸಚಿವ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ್ದರು. ಆ ಪ್ರಕರಣ ರಾಜ್ಯ ಮಟ್ಟದಲ್ಲಿ ದೊಡ್ಡ ಸದ್ದು ಮಾಡಿತ್ತು. ಜನರು ಛೀಮಾರಿ ಹಾಕಿದ್ದರು. ಹೀಗಾಗಿ ರಾಜೀವ್ ಗೌಡಗೆ ಕೆಪಿಸಿಸಿ ನೋಟಿಸ್ ಜಾರಿ ಮಾಡಿತ್ತು. ಘಟನೆಯ ಬಗ್ಗೆ ಕಾರಣ ಕೇಳಿ ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್ ನೋಟಿಸ್ ನೀಡಿದ್ದರು. 7 ದಿನಗಳ ಒಳಗೆ ನೋಟಿಸ್ಗೆ ಉತ್ತರ…
ರಾಯಚೂರು: ಸಾರಿಗೆ ಬಸ್ ಹರಿದ ಪರಿಣಾಮ ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ತಾಲೂಕಿನ ಮದರಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೆಕೆಆರ್ಟಿಸಿ ಬಸ್ (KKRTC Bus) ಹರಿದಿದ್ದರಿಂದಾಗಿ ನಾಲ್ಕು ವರ್ಷದ (Child) ವಿದ್ಯಾಶ್ರೀ (4) ಸಾವನ್ನಪ್ಪಿದ್ದಾಳೆ. ವಿದ್ಯಾಶ್ರೀ ಗಬ್ಬೂರು ಗ್ರಾಮದವಳು ಎನ್ನಲಾಗಿದೆ. ಸಾರಿಗೆ ಬಸ್ ಗೂಗಲ್‌ನಿಂದ ದೇವದುರ್ಗಕ್ಕೆ ತೆರಳುತ್ತಿತ್ತು. ಮಗು ಅಚಾನಕ್ಕಾಗಿ ಅಡ್ಡ ಬಂದ ಪರಿಣಾಮ ಮಗುವಿನ ಮೇಲೆ ಬಸ್ ಹರಿದಿದೆ. ಬಸ್ಸಿನ ಚಕ್ರದಡಿಗೆ ಸಿಲುಕಿ ಮಗು ಮೃತಪಟ್ಟಿದೆ. ಈ ಕುರಿತು ಗಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ನವವಿವಾಹಿತೆಯೊಬ್ಬರು ಮದುವೆಯಾದ ಎರಡೇ ತಿಂಗಳಲ್ಲಿ ನಾನು ಹಳ್ಳಿಯಲ್ಲಿ ಇರಲ್ಲ, ಸಿಟಿಯಲ್ಲಿ ಇರಬೇಕು ಅಂತಾ ಜಗಳ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಕಲಬುರಗಿ (Kalaburagi) ನಗರದ ಆಜಾದಪುರ್ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಅನಸೂಯಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಅನಸೂಯಾ ತಮ್ಮ ಅತ್ತೆ ಮಗ ಅವಿನಾಶ್ ನನ್ನು ಪ್ರೀತಿಸಿ ವಿವಾಹವಾಗಿದ್ದರು. ಆದರೆ, ಅನಸೂಯಾ ಮೂವರು ಸಹೋದರಿಯರು ಬೆಂಗಳೂರು ಹಾಗೂ ಮುಂಬೈನಲ್ಲಿ ವಾಸಿಸುತ್ತಿದ್ದರು. ಹೀಗಾಗಿ ನಾನು ಸಿಟಿಯಲ್ಲಿರಬೇಕು ಎಂದು ಮನೆಯಲ್ಲಿ ಜಗಳವಾಡುತ್ತಿದ್ದರು ಎನ್ನಲಾಗಿದೆ. ಸಹೋದರಿಯರು ಸಿಟಿಯಲ್ಲಿ ವಾಸಿಸಬೇಕು. ನಾನು ಮಾತ್ರ ಹಳ್ಳಿಯಲ್ಲಿ ಇರಬೇಕಾ ಎಂದು ಆಗಾಗ ತವರು ಮನೆಗೆ ಹೋಗಿ ಕೂಡ ನೋವು ತೋಡಿಕೊಳ್ಳುತ್ತಿದ್ದಳು ಎನ್ನಲಾಗಿದೆ. ಪೋಷಕರು ಬುದ್ದಿಮಾತು ಹೇಳಿ ಕಳುಹಿಸಿದ್ದಾರೆ. ಆದರೆ, ಇದೇ ನೋವಿನಲ್ಲಿ ಅನಸೂಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮದುವೆಗೂ ಮುನ್ನ ಅನಸೂಯಾ ಸಹ ಬೆಂಗಳೂರಿನಲ್ಲಿ ಒಂದು ವರ್ಷ ಕೆಲಸ ಮಾಡಿಕೊಂಡು ಇಲ್ಲೇ ವಾಸವಿದ್ದರು. ಮದುವೆ ನಂತರ ಮತ್ತೆ ಕ್ಯಾಪಿಟಲ್ ಸಿಟಿಯಲ್ಲಿ ವಾಸ ಮಾಡಬೇಕು ಎಂಬ ಆಸೆ ಹೆಚ್ಚಾಗಿ…
ಚಿತ್ರದುರ್ಗ: ಪಾರಿವಾಳವೊಂದು ಬರೋಬ್ಬರಿ 900 ಕಿ.ಮೀ ದೂರಕ್ಕೆ ಒಯ್ದು ಬಿಟ್ಟರೂ ಮರಳಿ ಗೂಡು ಸೇರಿದೆ.ಶಬರಿಮಲೆಯಲ್ಲಿ (Sabarimala) ಹಾರಿಬಿಟ್ಟ ಪಾರಿವಾಳವೊಂದು (Pigeon) 900 ಕಿಲೋ ಮೀಟರ್ ಕ್ರಮಿಸಿ ಗೂಡು ಸೇರಿದೆ. ಇದು ಚಿತ್ರದುರ್ಗ (Chitradurga) ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತಳವಾರಹಟ್ಟಿಯಲ್ಲಿ (Thalavarahatti) ನಡೆದಿದೆ. ಗ್ರಾಮದ ರಾಜು ಎಂಬ ವ್ಯಕ್ತಿ ಸಾಕಿದ್ದ ‘ಮದಕರಿ’ ಎಂಬ ಪಾರಿವಾಳವನ್ನು ಶಬರಿಮಲೆಗೆ ತೆರಳುವ ಮಾಲಾಧಾರಿಗೆ ನೀಡಿದ್ದರು. ಶಬರಿಮಲೆಯಿಂದ ಪಾರಿವಾಳವನ್ನು ಹಾರಿಬಿಡಲು ಹೇಳಿದ್ದರು. ಹೀಗಾಗಿ ಮಾಲಾಧಾರಿ ಡಿ. 31ರಂದು ಶಬರಿಮಲೆಯಲ್ಲಿ ಹಾರಿ ಬಿಟ್ಟಿದ್ದರು. ಜ. 21ರಂದು ಪಾರಿವಾಳ ಮರಳಿ ತಳವಾರಹಟ್ಟಿಗೆ ಬಂದು ತನ್ನ ಗೂಡು ಸೇರಿದೆ. 900 ಕಿಲೋ ಮೀಟರ್ ಕ್ರಮಿಸಿರುವ ಪಾರಿವಾಳ 21 ದಿನಗಳ ನಂತರ ತನ್ನ ಗೂಡು ಸೇರಿದೆ. ಈಗ ಪಾರಿವಾಳದ ನೆನಪಿನ ಶಕ್ತಿ, ಬಳಿಕ ಮರಳಿ ಗೂಡು ಸೇರಿದೆ. ಹೀಗಾಗಿ ಪಾರಿವಾಳದ ದಿಕ್ಕು ಪತ್ತೆ ಹಾಗು ನೆನಪಿನ ಶಕ್ತಿ ಬಗ್ಗೆ ಗ್ರಾಮಸ್ಥರಲ್ಲಿ ಭಾರೀ ಅಚ್ಚರಿ ಮೂಡಿದೆ.
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣ ಬೇಧಿಸಿದ ತನಿಖಾ ತಂಡಕ್ಕೆ 25 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಪ್ರಜ್ವಲ್ ರೇವಣ್ಣ ವಿರುದ್ಧದ ಅಪರಾಧ ಸಾಬೀತು ಪಡಿಸಿದ ಹಿನ್ನೆಲೆಯಲ್ಲಿ ತನಿಖಾ ತಂಡದ 30 ಅಧಿಕಾರಿ, ಸಿಬ್ಬಂದಿಗೆ ನಗದು ಬಹುಮಾನ ಘೋಷಿಸಲಾಗಿದೆ. ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್, ಡಿಐಜಿ ಸೀಮಾ ಲಾಟ್ಕರ್, ಎಸ್ಪಿ ಸುಮನ್ ಡಿ ಪನ್ನೇಕರ್, ಎಸ್ಪಿ ಸಿಎ ಸೈಮನ್, ಎಸಿಪಿ ಸತ್ಯನಾರಾಯಣ ಸಿಂಗ್, ಇನ್ಸ್ಪೆಕ್ಟರ್‌ಗಳಾದ ರಾವ್ ಗಣೇಶ್ ಜನಾರ್ದನ್, ಶೋಭಾ ಜಿ, ಸುಮಾರಾಣಿ, ಹೇಮಂತ್ ಕುಮಾರ್ ಸೇರಿದಂತೆ 30 ಜನ ಅಧಿಕಾರಿಗಳಿಗೆ ಬಹುಮಾನ ಘೋಷಿಸಲಾಗಿದೆ. ಇದರೊಂದಿಗೆ ಇಲಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಇನ್ನಿತರ ಅಧಿಕಾರಿಗಳಿಗೂ ಬಹುಮಾನ ಘೋಷಿಸಲಾಗಿದೆ. ಒಟ್ಟಾರೆ 35 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.
ಹುಬ್ಬಳ್ಳಿ: ನಗರದ ಮರಾಠಗಲ್ಲಿಯಲ್ಲಿರುವ ಮೆಟ್ರೋ ಮಾಲ್‌ನಲ್ಲಿ(Metro Mall) ಬೆಂಕಿ ಕಾಣಿಸಿಕೊಂಡಿದ್ದು, 60ಕ್ಕೂ ಅಧಿಕ ಅಂಗಡಿಗಳು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಗುರುವಾರ ಮಧ್ಯರಾತ್ರಿ 12 ಗಂಟೆ ವೇಳೆಗೆ ಈ ಘಟನೆ ನಡೆದಿದೆ. ಕೆಲಸ ಮುಗಿಸಿ, ಮಾಲ್‌ಗೆ ಬೀಗ ಹಾಕಿ ಹೋಗಿದ್ದ ಸಂದರ್ಭದಲ್ಲಿ ನಾಲ್ಕನೇ ಫ್ಲೋರ್‌ನಲ್ಲಿರುವ ಲೈಫ್ ಸ್ಟೈಲ್ ಶಾಪ್‌ನಲ್ಲಿ ಮೊದಲಿಗೆ ಸಣ್ಣದಾಗಿ ಬೆಂಕಿ ಕಿಡಿ ಕಾಣಿಸಿಕೊಂಡಿದೆ. ನೋಡನೋಡುತ್ತಲೇ ಇಡೀ ಮಾಲ್‌ಗೆ ಬೆಂಕಿ ಆವರಿಸಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಆವರಿಸಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಹುಬ್ಬಳ್ಳಿ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ (Bike Taxi) ಸೇವೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್(Karnataka High Court) ಮಹತ್ವದ ತೀರ್ಪು ನೀಡಿದೆ. ಬೈಕ್ ಟ್ಯಾಕ್ಸಿಗಳಿಗೆ ಲೈಸೆನ್ಸ್ ನೀಡುವುದನ್ನು ಸರ್ಕಾರ ನಿರಾಕರಿಸುವಂತಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಬೈಕ್ ಟ್ಯಾಕ್ಸಿ ಅಗ್ರಿಗೇಟರ್‌ಗಳು ಅನುಮತಿ ಕೋರಿ ಅರ್ಜಿ ಸಲ್ಲಿಸಿದರೆ, ಆ ಅರ್ಜಿಗಳನ್ನು ಪರಿಗಣಿಸಿ ಪರವಾನಗಿ ನೀಡಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಬೈಕ್ ಟ್ಯಾಕ್ಸಿ ಸಂಸ್ಥೆಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಜೋಶಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ಬೈಕ್ ಟ್ಯಾಕ್ಸಿ ಸೇವೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಒಂದು ಭಾಗ. ಕಾನೂನು ಚೌಕಟ್ಟಿನೊಳಗೆ ಅವುಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಪೀಠ ಹೇಳಿದೆ. ಕೋರ್ಟ್ ತೀರ್ಪಿನಿಂದ ಸಾಮಾನ್ಯ ಜನರು ಹಾಗೂ ಬೈಕ್ ಟ್ಯಾಕ್ಸಿ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದವರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈ ಮೂಲಕ ಇನ್ನು ಮುಂದೆ ಪ್ರಯಾಣಿಕರಿಗೆ ಕಡಿಮೆ ವೆಚ್ಚದ ಹಾಗೂ ಸುಲಭ ಸಾರಿಗೆ ಸೌಲಭ್ಯ…
ನವದೆಹಲಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಮುಂಬರುವ ಬಜೆಟ್ (Union Budget) ನಲ್ಲೇ ಈ ಸಿಹಿ ಸುದ್ದಿ ಹೊರ ಬೀಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರವು ಪ್ರತಿ ಬಾರಿಯೂ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಮಹತ್ವ ನೀಡುತ್ತಲೇ ಬರುತ್ತಿದೆ. ಈ ಬಾರಿಯೂ ರೈತರು ಖುಷಿಯಾಗುವಂತಹ ಸುದ್ದಿ ಹೊರ ಬೀಳುವ ಸಾಧ್ಯತೆ ಇದೆ. 2013-14ರಲ್ಲಿ ಕೃಷಿ ಕ್ಷೇತ್ರಕ್ಕೆ 21,933 ಕೋಟಿ ರೂ ನೀಡಲಾಗಿತ್ತು. 2025-26ರ ಬಜೆಟ್ನಲ್ಲಿ 1.27 ಲಕ್ಷ ಕೋಟಿ ರೂಗಿಂತ ಹೆಚ್ಚಿನ ಮೊತ್ತವನ್ನು ಕೃಷಿಗೆ ವಿನಿಯೋಗಿಸಲಾಗಿದೆ. 2026-27ರ ಬಜೆಟ್ನಲ್ಲಿ ಇದು 1.50 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆ ಇದೆ. ಕೇಂದ್ರವು ಪಿಎಂ ಕಿಸಾನ್ ಯೋಜನೆಯಲ್ಲಿ ಇಲ್ಲಿಯವರೆಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ 6 ಸಾವಿರ ರೂ. ಹಣವನ್ನು ರೈತರಿಗೆ ನೀಡುತ್ತಿತ್ತು. ಇದಕ್ಕಾಗಿ ಪ್ರತಿ ಕಂತಿಗೆ ಸರ್ಕಾರವು ಸುಮಾರು 20 ಸಾವಿರ ಕೋಟಿ ರೂ. ವಿನಿಯೋಗಿಸುತ್ತಿತ್ತು. ಆದರೆ, ಈ ಬಾರಿ ಪಿಎಂ ಕಿಸಾನ್ ಯೋಜನೆಯ…
ಹಾಸನ: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿತ್ತು. ಆಗುಂತಕನೋರ್ವ ಬಾಲಕಿಯನ್ನು ಬೆನ್ನಟ್ಟಿ ಆಕೆಯ ಮನೆಯವರೆಗೂ ಹೋಗಿ, ವಾರ್ನ್ ಮಾಡಿದ್ದ. ಈ ವಿಡಿಯೋ ಕಂಡು ಜನರು ಬೆಚ್ಚಿ ಬಿದ್ದಿದ್ದರು. ಸದ್ಯ ಆ ಆಗುಂತಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಆತಂಕ ಸೃಷ್ಟಿಸಿದ್ದ ಅಪರಿಚಿತನನ್ನು ಕೋಲಾರ (Kolar) ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯು ಜ.17ರಂದು ಹಾಸನದ (Hassan) 80 ಅಡಿ ರಸ್ತೆಯಲ್ಲಿ ಬಾಲಕಿ ಬೆನ್ನಟ್ಟಿ ಅವಳ ಮನೆಯವರೆಗೂ ತೆರಳಿದ್ದ. ಗಮನಿಸಿದ್ದ ಬಾಲಕಿ ಗಾಬರಿಯಲ್ಲೇ ಓಡೋಡಿ ಮನೆ ಸೇರಿದ್ದಳು. ನಂತರ ಮನೆ ಬಳಿ ಬಂದ ಆರೋಪಿ ಗೇಟ್ ಹೊರಗೆ ನಿಂತು ಒಳಗೆ ಇಣುಕಿನೋಡಿ ಹೋಗಿದ್ದ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಗಾಬರಿಗೊಂಡಿದ್ದ ಪಾಲಕರು, ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಘಟನೆ ನಡೆದ ಮೂರು ದಿನಗಳ ನಂತರ ಆ ಆಗುಂತಕನನ್ನು ಪೊಲೀಸರು ಬಂಧಿಸಿದ್ದಾರೆ.