Subscribe to Updates
Get the latest creative news from FooBar about art, design and business.
Author: Bosstv News Desk
ಮಡಿಕೇರಿ: ಮಗು ಸೇರಿದಂತೆ ನಾಲ್ವರನ್ನು ಕೊಚ್ಚಿ ಕೊಂದಿದ್ದ ಪಾಪಿಗೆ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿದೆ. ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯ ಮೇಲಿನ ಅನುಮಾನದಿಂದಾಗಿ ಹಾಗೂ ಕಾಫಿ ಬೆಳೆಯ ಆಸೆಯಿಂದಾಗಿ ಪಾಪಿಯು ಮಗು ಸೇರಿದಂತೆ ನಾಲ್ವರನ್ನು ಕೊಲೆ ಮಾಡಿರುವ ಆರೋಪ ಸಾಬೀತಾಗಿದೆ. ಈ ಪ್ರಕರಣದ ವಿಚಾರಣೆಯನ್ನು ಕೇವಲ 9 ತಿಂಗಳಲ್ಲಿ ಮುಗಿಸಿದ ನ್ಯಾಯಾಧೀಶರಾದ ಎಸ್. ನಟರಾಜ್, ಈ ಶಿಕ್ಷೆ ವಿಧಿಸಿದ್ದಾರೆ. ಕೇರಳ ಮೂಲದ ಮಾನಂದವಾಡಿ ಜಿಲ್ಲೆಯ ಅತ್ತಿಮಾಲಾ ನಿವಾಸಿ ಗಿರೀಶ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿ. ಮಾರ್ಚ್ 27ರಂದು ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲ್ಲೂಕಿನ ಬೇಗೂರು ಗ್ರಾಮದ ಬಾಳುಗೋಡಿನ ತೋಟದ ಮನೆಯಲ್ಲಿ ಈ ಘಟನೆ ನಡೆದಿತ್ತು. ಕರಿಯ(70), ಆತನ ಪತ್ನಿ ಗೌರಿ, ನಾಗಿ(30), ನಾಲ್ಕು ವರ್ಷದ ಕಾವೇರಿ ಕೊಲೆಯಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗಿರೀಶ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಘಟನೆ…
ಕಲಬುರಗಿ: ಸರಣಿ ಅಪಘಾತಕ್ಕೆ ಮೂವರು ಬಲಿಯಾಗಿರುವ ಘಟನೆ ನಡೆದಿದೆ. ಎರಡು ಸಾರಿಗೆ ಬಸ್ ಹಾಗೂ ಜೀಪ್ ಮಧ್ಯೆ ಸರಣಿ ಅಪಘಾತ ಸಂಭವಿಸಿದೆ. ಪರಿಣಾಮವಾಗಿ ಮೂವರು ಬಲಿಯಾಗಿದ್ದಾರೆ. ಈ ಘಟನೆ ಕಲಬುರಗಿಯ ಸಂಚಾರಿ ಠಾಣೆ 1ರ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆಯಲ್ಲಿ ಪತಿ, ಪತ್ನಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಸುಲೋಚನಾ(70), ಚಂದ್ರಕಾಂತ್ (82) ಮತ್ತು ಚಾಲಕ ಮಿಟ್ಟೆಸಾಬ್(35) ಸಾವನ್ನಪ್ಪಿದ ದುರ್ದೈವಿಗಳು. ಅಲ್ಲದೇ, ಮೂವರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ತೆರಳುತ್ತಿರುವ ಮುನ್ನ ಸವಾರರು ಎಚ್ಚರಿಕೆಯಿಂದ ಇರಬೇಕಾಗಿದೆ. ಏಕೆಂದರೆ ಇಂತಹ ರಸ್ತೆಗಳಲ್ಲಿ ಕ್ರೈಮ್ ರೇಟ್ ಹೆಚ್ಚಾಗುತ್ತಿದೆ. ಕಾರು, ಬೈಕ್ ಗಳಲ್ಲಿ ಹೋಗುವಾಗ ಜನರು ಜನ ವಸತಿ ಇಲ್ಲದ ಕಡೆಗಳಲ್ಲಿ ನಿಲ್ಲಿಸುವುದು ಅಪಾಯಕ್ಕೆ ದಾರಿ ಮಾಡಿಕೊಂಡಂತಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ದರೋಡೆ, ಸುಲಿಗೆಕೋರರ ಹಾವಳಿ ಹೆಚ್ಚಾಗಿದ್ದು, ಬರೋಬ್ಬರಿ 403 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. 2023 ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 81 ಸುಲಿಗೆ ಪ್ರಕರಣಗಳು ಹಾಗೂ 23 ದರೋಡೆ ಪ್ರಕರಣಗಳು ವರದಿಯಾಗಿವೆ. 2024 ರಲ್ಲಿ 66 ಸುಳಿಗೆ ಹಾಗೂ 16 ದರೋಡೆ ಪ್ರಕರಣಗಳು ನಡೆದಿವೆ. 2025ರ ನವೆಂಬರ್ 15ರ ವರೆಗಿನ ಮಾಹಿತಿಯ ಪ್ರಕಾರ 51 ಸುಳಿಗೆ ಮತ್ತು 14 ದರೋಡೆ ಪ್ರಕರಣ ವರದಿಯಾಗಿವೆ. ರಾಜ್ಯ ಹೆದ್ದಾರಿಯಲ್ಲಿ 2023 ರಲ್ಲಿ 39 ಸುಲಿಗೆ, 17 ದರೋಡೆ ನಡೆದರೆ 2024 ರಲ್ಲಿ 35 ಸುಳಿಗೆ, 22 ದರೋಡೆಗಳು ನಡೆದಿವೆ. 2025 ರಲ್ಲಿ 20 ಸುಳಿಗೆ ಪ್ರಕರಣ ಮತ್ತು 19 ದರೋಡೆ ಪ್ರಕರಣಗಳು…
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಧ್ಯೆ ಮಹತ್ವದ ಚರ್ಚೆ ನಡೆದಿದೆ. ಈ ಚರ್ಚೆಯಲ್ಲಿ 88 ನಿಮಿಷಗಳ ಕಾಲ ಮಾತುಕತೆ ನಡೆದಿದೆ ಎನ್ನಲಾಗಿದೆ. ಮೂವರು ನಾಯಕರು ಮುಖ್ಯ ಮಾಹಿತಿ ಆಯುಕ್ತರು ಹಾಗೂ ಮಾಹಿತಿ ಆಯುಕ್ತರ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಆದರೆ, ಪ್ರಧಾನಿ ನಿರ್ಧಾರಕ್ಕೆ ರಾಹುಲ್ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸಭೆಯು ಬುಧವಾರ ನಡೆದಿದೆ ಎನ್ನಲಾಗಿದೆ. ಚರ್ಚೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಎಲ್ಲ ನೇಮಕಾತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಲಿಖಿತವಾಗಿಯೂ ತಮ್ಮ ವಿರೋಧ ತೋರಿಸಿದ್ದಾರೆ ಎನ್ನಲಾಗಿದೆ. ಖರ್ಗೆ ಕೂಡ ಲಿಖಿತ ಆರೋಪ ಮಾಡಿದ್ದರು ಎನ್ನಲಾಗಿದೆ. ಭಾರತದ ಜನಸಂಖ್ಯೆಯ ಸುಮಾರು ಶೇ. 90ರಷ್ಟು ಜನಸಂಖ್ಯೆಯನ್ನು ಹೊಂದಿರುವ ಸಮುದಾಯಗಳು ಹುದ್ದೆಗಳ ಪ್ರಸ್ತಾವಿತ ಪಟ್ಟಿಯಿಂದ ಪ್ರಾಯೋಗಿಕವಾಗಿ ಕಾಣೆಯಾಗಿವೆ ಎಂದು ರಾಹುಲ್ ವಿರೋಧಿಸಿದ್ದಾರೆ. ದಲಿತ, ಆದಿವಾಸಿ, ಒಬಿಸಿ/ಇಬಿಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭ್ಯರ್ಥಿಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ರಾಹುಲ್…
ಬೆಂಗಳೂರು : ಮೊಬೈಲ್ ಗೆ ಎಲ್ಲರ ಬದುಕಿನ ಅವಿಭಾಜ್ಯ ಅಂಗ ಆಗಿ ಬಿಟ್ಟಿದೆ. ಮೊಬೈಲ್ ಇಲ್ಲದೆ ಬದುಕು ಇಲ್ಲ ಎನ್ನುವಂತಾಗಿದೆ. ಇದರ ಮಧ್ಯೆ ಮೊಬೈಲ್ ನ ಹಣ ದುಬ್ಬರ ಜನರಿಗೆ ಇಕ್ಕಟ್ಟು ತರುತ್ತಿದೆ. ಇತ್ತೀಚೆಗಷ್ಟೇ ಜಿಯೋ ಹೊರತು ಪಡಿಸಿ ಕೆಲವು ಕಂಪನಿಗಳು ದರ ಏರಿಕೆ ಮಾಡಿದ್ದವು. ಈಗ ಮತ್ತೊಮ್ಮೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದೇ ತಿಂಗಳ ಅಂತ್ಯದಲ್ಲಿ ಬಿಎಸ್ಸೆನ್ನೆಲ್, ಜಿಯೋ, ಏರ್ ಟೆಲ್ ಸೇರಿದಂತೆ ಇನ್ನಿತರ ಕಂಪನಿಗಳು ಸುಂಕ ಹೆಚ್ಚಿಸಲಿವೆ. ಈ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳಲಿದೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕಂಪನಿಗಳ ಆದಾಯ ಕುಸಿಯುತ್ತಿದೆ. ಹೀಗಾಗಿ ಆದಾಯದ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರ ಮೇಲೆ ಹೊರೆ ಹೇರಲು ಮುಂದಾಗಿವೆ ಎಂದು ವರದಿಯಾಗುತ್ತಿವೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 10 ಕ್ಕೆ ಇಳಿದಿದೆ, ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಇದು ಶೇ. 14-16 ರಷ್ಟಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಆದಾಯವು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಹೀಗಾಗಿ ದರ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.ಕಳೆದ…
ಮೆಕ್ಸಿಕೋಸಿಟಿ: ಇತ್ತೀಚೆಗಷ್ಟೇ ಅಮೆರಿಕದಲ್ಲಿ ಭಾರತೀಯ ವಸ್ತುಗಳಿಗೆ ಹೆಚ್ಚಿನ ಸುಂಕ ವಿಧಿಸಲಾಗಿತ್ತು. ಇದು ಮಾಸುವ ಮುನ್ನವೇ ಅಮೆರಿಕದ ಹಾದಿಯಲ್ಲಿ ಮೆಕ್ಸಿಕೋ ನಡೆಯಲು ಆರಂಭಿಸಿದೆ. ಸುಂಕ ಸಮರದ (Tariff War) ಬೆನ್ನಲ್ಲೇ ಈಗ ಮೆಕ್ಸಿಕೋ (Mexico) ಭಾರತದ ವಸ್ತುಗಳಿಗೆ ಶೇ. 50ರಷ್ಟು ಸುಂಕ ವಿಧಿಸಿದೆ. ಈ ನಿರ್ಧಾರ 2026ರಿಂದ ಜಾರಿಗೆ ಬರಲಿದೆ ಎನ್ನಲಾಗಿದೆ. ಭಾರತವಷ್ಟೇ ಅಲ್ಲದೇ, ಚೀನಾ (China) ಸೇರಿದಂತೆ ಏಷ್ಯ ದೇಶಗಳಿಂದ ಬರುವ ಎಲ್ಲ ಉತ್ಪನ್ನಗಳಿಗೆ ಶೇ. 50ರಷ್ಟು ಸುಂಕ ವಿಧಿಸುವ ಮಸೂದೆಗೆ ಅಲ್ಲಿನ ಮೇಲ್ಮನೆ ಒಪ್ಪಿಗೆ ನೀಡಿದೆ. ಅಲ್ಲಿನ ಬಹುತೇಕ ಸದಸ್ಯರು ಈ ಮಸೂದೆ ಒಪ್ಪಿದ್ದಾರೆ ಎನ್ನಲಾಗಿದೆ. ಡೊನಾಲ್ಡ್ ಟ್ರಂಪ್ ಅವರ ‘ಅಮೇರಿಕಾ ಫಸ್ಟ್’ ಕಾರ್ಯಸೂಚಿಯಂತೆಯೇ ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ (Claudia Sheinbaum) ಸ್ಥಳೀಯ ಉದ್ಯಮಕ್ಕೆ ಆದ್ಯತೆ ನೀಡುವುದಕ್ಕಾಗಿ ಏಷ್ಯನ್ ಆಮದುಗಳ ಮೇಲೆ ಹೊಸ ಸುಂಕ ವಿಧಿಸಿದ್ದಾರೆ. ಮೆಕ್ಸಿಕೋಗೆ ಭಾರತದಿಂದಲೂ ಹಲವಾರು ವಸ್ತುಗಳು ರಫ್ತಾಗುತ್ತವೆ. ಕಳೆದ ವರ್ಷ ಭಾರತ ಒಟ್ಟು 1.3 ಬಿಲಿಯನ್ ಡಾಲರ್ ಮೌಲ್ಯದ ಆಟೋಮೊಬೈಲ್‌ಗಳು, 242 ಮಿಲಿಯನ್…
ಚಿಕ್ಕಬಳ್ಳಾಪುರ: ಕಾರೊಂದು ಸಾರಿಗೆ ಬಸ್(KSRTC Bus) ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆಯೊಂದು ನಡೆದಿದೆ. ಈ ಘಟನೆ ದೇವನಹಳ್ಳಿಯ (Devanahalli) ರಾಣಿ ಕ್ರಾಸ್ ಹತ್ತಿರ ನಡೆದಿದೆ. ಕಾರು ಡಿವೈಡರ್ ಗೆ ಹಾರಿ ಎದುರು ಬರುತ್ತಿದ್ದ ಸಾರಿಗೆ ಬಸ್ ಗೆ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇವನಹಳ್ಳಿಯ ಸಾದಹಳ್ಳಿ ಗ್ರಾಮದ ಸುಮನ್ (25), ಸಾಗರ್ (26), ಮೋಹನ್ (33) ಸಾವನ್ನಪ್ಪಿದ ದುರ್ದೈವಿಗಳು ಎನ್ನಲಾಗಿದೆ. ಕಾರಿನಲ್ಲಿದ್ದ ಮೂವರೂ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು ಎನ್ನಲಾಗಿದೆ. ಆದರೆ, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ರಾಣಿ ಕ್ರಾಸ್ ಬಳಿ ಡಿವೈಡರ್ ಹಾರಿ ಸಾರಿಗೆ ಬಸ್ ಗೆ ಡಿಕ್ಕಿಯಾಗಿದೆ. ಪರಿಣಾಮ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಿಂದಾಗಿ ಸಾರಿಗೆ ಬಸ್ ನಲ್ಲಿದ್ದ ಕೆಲವರು ಕೂಡ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ದೇವನಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ತನ್ನ ದಾಖಲೆಯನ್ನು ತಾನೇ ಮುರಿಯುತ್ತ ಸಾಗುತ್ತಿರುವ ಚಿನ್ನಾಭರಣ ಬೆಲೆ ಇಂದು ಕೂಡ ಏರಿಕೆಯ ಹಾದಿ ಹಿಡಿದಿದೆ. ಇಂದು ಬೆಳ್ಳಿ ದಾಖಲೆಯ ಬೆಲೆಯನ್ನು ಕಂಡಿದೆ. ಇಂದು ಬೆಳ್ಳಿಯು ಸರ್ವಕಾಲಿಕ ದಾಖಲೆಯನ್ನು ಬರೆದಿದೆ. ಬುಧವಾರ 199 ರೂ. ನಷ್ಟು ಏರಿಕೆ ಕಂಡಿದ್ದ ಬೆಳ್ಳಿ ಇಂದು ಮತ್ತೆ 2 ರೂ. ಹೆಚ್ಚಳವಾಗಿದೆ. ಅಂದರೆ 201 ರೂ. ಗೆ ಹೆಚ್ಚಳವಾಗಿದೆ. ಅಲ್ಲದೇ ಹಲವೆಡೆ 209 ರೂ.ಗೂ ಹೆಚ್ಚು ಏರಿಕೆ ಕಂಡಿದೆ. ಅಲ್ಲದೇ, ಚಿನ್ನದ ಬೆಲೆಯಲ್ಲಿ ಕೂಡ ಏರಿಕೆಯಾಗಿದೆ. ಇಂದು ಚಿನ್ನದ ಬೆಲೆ ಗ್ರಾಂಗೆ 10 ರೂ. ಕಡಿಮೆಯಾಗಿದೆ. ದೇಶದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ 1,19,450 ರೂ. ಆಗಿದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,031 ರೂ. ಇದೆ. 10 ಗ್ರಾಂ ಬೆಳ್ಳಿ ಬೆಳೆ 19,900 ರೂ. ಆಗಿದೆ. ಭಾರತದಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,020 ರೂ22 ಕ್ಯಾರಟ್ನ 1 ಗ್ರಾಂ…
ದಕ್ಷಿಣ ಕನ್ನಡ: ಧರ್ಮಸ್ಥಳ ಬುರುಡೆ ಕೇಸ್ ಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದೆ. ವರದಿಯಲ್ಲಿ ಬುರುಡೆ ಗ್ಯಾಂಗ್ ನ ಷಡ್ಯಂತ್ರ ಬಟಾಬಯಲಾಗಿದೆ. ಧರ್ಮಸ್ಥಳದ ಸುತ್ತಮುತ್ತ ‘ನೂರಾರು ಮಹಿಳೆಯರ ಶವಗಳನ್ನು ಹೂಳಲಾಗಿದೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ನಡೆಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ತನ್ನ ಪ್ರಾಥಮಿಕ ವರದಿ ಸಲ್ಲಿಸಿದೆ. SIT ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ಧರ್ಮಸ್ಥಳದ ವ್ಯವಸ್ಥಾಪಕರಿಗೆ ಹಾಗೂ ಮೇಲ್ವಿಚಾರಕರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಅಲ್ಲದೇ, ಧರ್ಮಸ್ಥಳದಲ್ಲಿ ಅಂತಹ ಯಾವುದೇ ಕೃತ್ಯಗಳು ನಡೆದಿಲ್ಲ ಎಂದು ಕೂಡ ಎಸ್ ಐಟಿ ತನ್ನ ವರದಿಯಲ್ಲಿ ಹೇಳಿದೆ. ಇದೆಲ್ಲ ಆರೋಪಿಗಳ ಒಳಸಂಚು ಎಂಬುವುದನ್ನು ಎಸ್ ಐಟಿ ಹೇಳಿದೆ. ಹೀಗಾಗಿ ಚಿನ್ನಯ್ಯ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ವಿಠ್ಠಲ ಗೌಡ, ಟಿ ಜಯಂತ್ ಮತ್ತು ಸುಜಾತಾ ಭಟ್ ಅಪರಾಧ ಕೃತ್ಯದಲ್ಲಿ ನೇರವಾಗಿ ಶಾಮೀಲಾಗಿದ್ದಾರೆ ಎಂದು SIT ತನಿಖೆಯಲ್ಲಿ ದೃಢಪಟ್ಟಿದೆ. ಚಿನ್ನಯ್ಯನಿಗೆ ಹಣದ ಆಮಿಷ ತೋರಿಸಿ, ಆತನಿಂದ ‘ಅಪರಿಚಿತ ಶವಗಳನ್ನು…
ನವದೆಹಲಿ: ನಿಮ್ಮ ಹಣ ನಿಮ್ಮ ಹಕ್ಕು ಎನ್ನುವ ಅಭಿಯಾನ ನಡೆಯುತ್ತಿದ್ದು, ಹಕ್ಕುದಾರರಿಗೆ ಅವರ ಹಣ ಮರಳಿಸಲು ಪ್ರಧಾನಿ ನರೇಂದ್ರ ಮೋದಿ ಪಣ ತೊಟ್ಟಿದ್ದಾರೆ. ದೇಶದಲ್ಲಿನ ಬ್ಯಾಂಕ್ ಗಳು, ಇನ್ಷೂರೆನ್ಸ್ ಕಂಪನಿಗಳು, ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಜನರ ಹಣ ಹಲವಾರು ಕಾರಣಗಳಿಂದ ಕ್ಲೇಮ್ ಆಗದೇ (Unlcaimed Money) ಹಾಗೆ ಇದ್ದು, ಅದನ್ನು ಮತ್ತೆ ಮರಳಿಸುವುದಕ್ಕಾಗಿ ಸರ್ಕಾರವು ನಿಮ್ಮ ಹಣ ನಿಮ್ಮ ಹಕ್ಕು (Your Money, Your Right) ಎಂಬ ಅಭಿಯಾನವನ್ನು ಆರಂಭಿಸಿದೆ. ಈ ರೀತಿ ಇರುವ ಹಣ ಲಕ್ಷ ಕೋಟಿ ಮೀರಿದೆ. ಎನ್ನಲಾಗಿದೆ. ಹೀಗಾಗಿ ಈ ಅಭಿಯಾನದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಕೂಡ ಭಾಗಿಯಾಗಿದ್ದು, ನಿಮ್ಮ ಹಣವನ್ನು ಮರಳಿ ಪಡೆಯಿರಿ ಎಂದು ಸಂದೇಶ ಸಾರಿದ್ದಾರೆ. ಈ ಕುರಿತು ಪೋಸ್ಟ್ ಕೂಡ ಮಾಡಿದ್ದಾರೆ. ಮರೆತು ಉಳಿದಿರುವ ಹಣಕಾಸು ಆಸ್ತಿಯನ್ನು ಹೊಸ ಅವಕಾಶವಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದ್ದಾರೆ. ಈ ರೀತಿ ಬ್ಯಾಂಕ್ ಗಳಲ್ಲಿ 78,000 ಕೋಟಿ ರೂ. ನಷ್ಟು ಹಣ ಕ್ಲೇಮ್ ಆಗದೆ…