Subscribe to Updates
Get the latest creative news from FooBar about art, design and business.
Author: Bosstv News Desk
ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದೇಶೀಯ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದು, ಅಭಿಮಾನಿಗಳಿಗೆ ಖುಷಿ ತಂದಿತ್ತು. ಆದರೆ, ಈಗ ಫ್ಯಾನ್ಸ್ ಗೆ ಶಾಕ್ ಎದುರಾಗಿದೆ. ದೆಹಲಿ (Delhi) ಮತ್ತು ಆಂಧ್ರಪ್ರದೇಶ (Andhra Pradesh) ಮಧ್ಯೆ ವಿಜಯ್ ಹಜಾರೆ (Vijay Hazare) ಟೂರ್ನಿಯ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಯುತ್ತಿದೆ. ಆದರೆ ಪ್ರೇಕ್ಷಕರಿಗೆ ಮಾತ್ರ ಅವಕಾಶ ಇಲ್ಲ ಎನ್ನಲಾಗಿದೆ. ಡಿ.24ಕ್ಕೆ ದೆಹಲಿ ಮತ್ತು ಆಂಧ್ರಪ್ರದೇಶದ ಮಧ್ಯೆ ಮೊದಲ ಪಂದ್ಯ ನಿಗದಿಯಾಗಿದೆ. ವಿರಾಟ್ ಕೊಹ್ಲಿ (Virat Kohli) ದೆಹಲಿ ಪರ ಕಣಕ್ಕೆ ಇಳಿಯಲಿದ್ದಾರೆ. ಭದ್ರತೆ, ಸುರಕ್ಷತೆ ವಿಚಾರವಾಗಿ ಪ್ರೇಕ್ಷಕರಿಗೆ ಸ್ಟೇಡಿಯಂ ಒಳಗೂ ಹೊರಗೂ ನಿರ್ಬಂಧ ವಿಧಿಸುವ ಸಾಧ್ಯತೆಯಿದೆ. ಪ್ರೇಕ್ಷಕರಿಲ್ಲದೆ ಪಂದ್ಯ ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಮುಖ್ಯಸ್ಥ ವೆಂಕಟೇಶ್ ಪ್ರಸಾದ್ ಈಗಾಗಲೇ ಗೃಹ ಸಚಿವ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದಾರೆ. ಸರ್ಕಾರ ಇಲ್ಲಿಯವರೆಗೆ ಅನುಮತಿ ನೀಡಿಲ್ಲ. ಸದ್ಯದಲ್ಲೇ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆ ಇದೆ. ಜುಲೈನಲ್ಲಿ ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ…
ಮಹಿಳಾ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಶತಕ ಬಾರಿಸುವುದರ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಟಗಾರ್ತಿ ಜಮಿಮಾ ರಾಡ್ರಿಗಸ್ ಈಗ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಹಿಳಾ ಪ್ರೀಮಿಯರ್ ಲೀಗ್ ನ ನಾಲ್ಕನೇ ಸೀಸನ್ ಗೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ತಂಡದ ನಾಯಕತ್ವ ಬದಲಾಯಿಸಲು ಮುಂದಾಗಿದೆ. ಮೆಗ್ ಲ್ಯಾನಿಂಗ್ ಕಳೆದ ಎರಡು ಸೀಸನ್ ಗಳಿಂದ ನಾಯಕಿಯಾಗಿದ್ದರು. ಆದರೆ, ಈಗ ಭಾರತೀಯ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಗೆ ವಹಿಸುತ್ತಿದೆ. ಈ ಕುರಿತು ಡಿ. 23ರಂದು ಅಧಿಕೃತ ಮಾಹಿತಿ ಹೊರ ಬರಲಿದೆ. 2 ಆವೃತ್ತಿಗಳಲ್ಲಿ ತಂಡವನ್ನು ಫೈನಲ್ಗೆ ಮುನ್ನಡೆಸಿದ್ದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಹರಾಜಿಗೂ ಮುನ್ನ ತಂಡದಿಂದ ಬಿಡುಗಡೆ ಮಾಡಲಾಗಿದೆ. ಇದಾದ ನಂತರ ಜಮಿಮಾರನ್ನು ನಾಯಕಿಯಾಗಿ ಆಯ್ಕೆ ಮಾಡಿ ಘೋಷಿಸಲಾಗುವುದು ಎನ್ನಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ WPL 2026 ಆಟಗಾರರ ಹರಾಜಿನ ಸಂದರ್ಭದಲ್ಲಿ, DC ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು…
ಹುಬ್ಬಳ್ಳಿ: ತಾಲ್ಲೂಕಿನ ಇನಾಂ ವಿರಾಪುರದಲ್ಲಿ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅನ್ಯ ಜಾತಿ ಹುಡುಗನನ್ನು ಪ್ರೀತಿಸಿ ಮನೆಬಿಟ್ಟು ಹೋಗಿ ಮದುವೆಯಾಗಿದ್ದಕ್ಕೆ ತಂದೆ ಮಗಳನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ. ಗರ್ಭಿಣಿಯಾಗಿದ್ದಾಗಲೇ ಕೊಲೆ ಮಾಡಿದ್ದಾನೆ. ಹೀಗಾಗಿ ಈ ಘಟನೆ ಮನಕಲಕುತ್ತಿದೆ. ಇನಾಂ ವೀರಾಪುರದ ಹುಡುಗನ ಮನೆ ಮುಂದೆ ರಕ್ತದೋಕುಳಿಯೇ ಹರಿದಿದೆ. ಅನ್ಯ ಜಾತಿಯ ಮಾನ್ಯಾ ಪಾಟೀಲ್ ದಲಿತ ಹುಡುಗ ವಿವೇಕಾನಂದ ದೊಡ್ಡಮನಿ ಎಂಬ ಹುಡುಗನನ್ನು ಪ್ರೀತಿಸಿ ಮದುವೆಯಾಗಿದ್ದಳು. ಏಳು ತಿಂಗಳ ಗರ್ಭಿಣಿ ಕೂಡ ಆಗಿದ್ದಳು. ಬಿಇ ಓದಿಸಿ ವಿದೇಶಕ್ಕೆ ಕಳುಹಿಸಬೇಕೆಂದು ತಂದೆ-ತಾಯಿ, ಕುಟುಂಬಸ್ಥರು ಕನಸು ಕಂಡಿದ್ದರು. ಆದರೆ, ಯುವತಿ ಮಾತ್ರ ಪ್ರೀತಿಯಲ್ಲಿ ಬಿದ್ದು ಅನ್ಯ ಜಾತಿಯ ಯುವಕನ ಮದುವೆಯಾಗಿದ್ದಾಳೆ. ಇದರಿಂದಾಗಿ ತಂದೆ-ತಾಯಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿದೆ. ಕನಸು ನುಚ್ಚು ನೂರಾಗಿದ್ದು ಒಂದೆಡೆಯಾದರೆ, ಮಗಳು ಅನ್ಯ ಜಾತಿಯ ಯುವಕನನ್ನು ಕೈ ಹಿಡಿದಿದ್ದು ಅವರಿಗೆ ಸಾಕಷ್ಟು ನೋವುಂಟು ಮಾಡಿದೆ. ಇದರಿಂದಾಗಿ ತಂದೆ…
ಕೊಪ್ಪಳ: ಪೇಪರ್ ಪಾರಿವಾಳ ತೂರಿ ಹಿಡಿಯಲು ಹೋಗಿ ಐದು ವರ್ಷದ ಬಾಲಕ (Child) ಮನೆಯ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದು (Fall) ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ಘಟನೆ ನಗರದ ಹಮಾಲರ ಕಾಲೋನಿಯಲ್ಲಿ ನಡೆದಿದೆ. ಆದರೆ, ಘಟನೆಯಲ್ಲಿ ಪವಾಡ ಎಂಬಂತೆ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಲಕನನ್ನು ಮಹಮ್ಮದ್ ಹ್ಯಾರಿಸ್ ಎನ್ನಲಾಗಿದೆ. ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬಾಲಕ ಚಿಕಿತ್ಸೆ ಪಡೆಯುತ್ತಿದ್ದಾನೆ. ಮಹಮ್ಮದ್ ಹ್ಯಾರಿಸ್ ತಲೆಯಲ್ಲಿ ಬಿರುಕು ಕಂಡು ಬಂದಿರುವುದಾಗಿ ತಿಳಿದು ಬಂದಿದೆ. ಮಹಮ್ಮದ್ ಹ್ಯಾರಿಸ್ ನಿನ್ನೆ ಮಧ್ಯಾಹ್ನ ಮೊದಲನೇ ಮಹಡಿಯಲ್ಲಿ ಪೇಪರ್ನಿಂದ ಪಾರಿವಾಳ ಮಾಡಿ ಅದನ್ನು ತೂರಿ ಹಿಡಿಯಲು ಹೋಗಿ ಬಿದ್ದಿದ್ದಾನೆ. ಮನೆಯ ಕೆಳಗೆ ಹ್ಯಾರಿಸ್ ಸಹೋದರಿ ಕೂಡ ಆಟವಾಡುತ್ತಿದ್ದು, ಮಹಮ್ಮದ್ ಬಿದ್ದ ತಕ್ಷಣ ಮೇಲೆ ಎತ್ತಿದ್ದಾಳೆ. ಒಳಗಡೆಯಿಂದ ಪೋಷಕರು ಕಿರುಚುತ್ತಾ ಓಡೋಡಿ ಬಂದಿದ್ದಾರೆ. ಕೆಳಗಡೆ ಬಿದ್ದ ಮಗುವನ್ನ ಕೂಡಲೇ ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಕೂಡ 2 ಗಂಟೆ ಒಳಗೆ ಆಪರೇಷನ್ ಮಾಡಿದ್ದಾರೆ. ಪರಿಣಾಮ ಮಗು ಪ್ರಾಣಾಪಾಯದಿಂದ…
ಬಳ್ಳಾರಿ: ಮಹಿಳೆಯೋರ್ವರು ಪ್ರಿಯಕರ ಕೈ ಕೊಟ್ಟಿದ್ದಕ್ಕೆ ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಬಳ್ಳಾರಿಯ (Ballari) ಹುಸೇನ್ ನಗರದಲ್ಲಿ ಈ ಘಟನೆ ನಡೆದಿದೆ. 23 ವರ್ಷದ ಮಹಿಳೆಯೊಬ್ಬಳು ವಿಡಿಯೋ ಮಾಡುತ್ತಲೇ ಆತ್ಮಹತ್ಯೆ (Live Suicide) ಮಾಡಿಕೊಂಡಿದ್ದಾರೆ. ಮುನ್ನಿ (23) ಲೈವ್ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಆತ್ಮಹತ್ಯೆಗೊಳಗಾದ ಮುನ್ನಿಗೆ ಕೂಡ ಮದುವೆಯಾಗಿತ್ತು. ಎರಡು ಮಕ್ಕಳನ್ನು ಕೂಡ ಹೊಂದಿದ್ದಳು. ಆದರೆ, ಕಳೆದ 6 ತಿಂಗಳಿಂದ ಪತಿಯಿಂದ ದೂರವಾಗಿದ್ದಳು ಎನ್ನಲಾಗಿದೆ. ಪತಿಯಿಂದ ದೂರವಾದ ನಂತರ ಇತ್ತೀಚೆಗೆ ವಿವಾಹಿತ ಮೊಹಮ್ಮದ್ ಶೇಕ್ ಎಂಬಾತನೊಂದಿಗೆ ಪ್ರೀತಿ(Love)ಯಲ್ಲಿ ಬಿದ್ದಿದ್ದಳು ಎಂದು ತಿಳಿದು ಬಂದಿದೆ. ಮುನ್ನಿಗೆ ಶೇಖ್ ಸಂಬಂಧದಲ್ಲಿ ಅಣ್ಣ ಆಗಿದ್ದರೂ ಇಬ್ಬರು ಪ್ರೀತಿಸುತ್ತಿದ್ದರು. ಪ್ರೀತಿಯ ನಂತರ ನನ್ನನ್ನು ಮದುವೆಯಾಗು ಎಂದು ಮುನ್ನಿ ಒತ್ತಾಯ ಮಾಡುತ್ತಿದ್ದಳು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುನ್ನಿ ಹಾಗೂ ಶೇಕ್ ಮಧ್ಯೆ ಗಲಟೆ ನಡೆದಿದೆ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಲೈವ್ ಸೂಸೈಡ್ ವಿಡಿಯೋದಲ್ಲಿ ನನಗೆ ತೊಂದರೆ ನೀಡಿದವರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದು,…
ಟೆಸ್ಟ್ ನಲ್ಲಿ ಭಾರತೀಯ ಕ್ರಿಕೆಟ್ ತಂಡ ಕಳಪೆ ಪ್ರದರ್ಶನ ನೀಡುತ್ತಿದ್ದು, ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡಿದೆ. 2025-27ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (WTC Final 2025-27) ತಲುಪಬೇಕಾದರೆ ಭಾರತ ತಂಡ (Team India) ಹೆಚ್ಚು ಪ್ರಯಾಸಪಡಬೇಕಾಗುತ್ತಿದೆ. ವೆಸ್ಟ್ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿರುವ ನ್ಯೂಜಿಲೆಂಡ್ ಅಂಕ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಎರಡು ಟೆಸ್ಟ್ ಪಂದ್ಯಗಳಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸುವ ಮೂಲಕ ಅಗ್ರ-ಎರಡನೇ ಸ್ಥಾನಕ್ಕೆ ಜಿಗಿದಿದೆ. ಆಸ್ಟ್ರೇಲಿಯಾ ಆರು ಪಂದ್ಯಗಳನ್ನಾಡಿ ಎಲ್ಲ ಪಂದ್ಯಗಳಲ್ಲಿ ಗೆದ್ದು ಅಗ್ರ ಸ್ಥಾನ ಅಲಂಕರಿಸಿದೆ. ಭಾರತದ ವಿರುದ್ಧ ಸರಣಿ ಗೆದ್ದಿರುವ ದಕ್ಷಿಣ ಆಫ್ರಿಕಾ ಕೂಡ ಮೂರನೇ ಸ್ಥಾನದಲ್ಲಿದೆ. ಭಾರತ ತಂಡ 9 ಟೆಸ್ಟ್ ಪಂದ್ಯಗಳನ್ನಾಡಿ ಕೇವಲ ನಾಲ್ಕರಲ್ಲಿ ಜಯ ಸಾಧಿಸಿ, ನಾಲ್ಕರಲ್ಲಿ ಹೀನಾಯ ಸೋಲು ಕಂಡಿದೆ. ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ ಪಾಯಿಂಟ್‌ಗಳ ಪಟ್ಟಿಯಲ್ಲಿ 57 ಅಂಕಗಳನ್ನು ಮತ್ತು 48.15 ರ ಗೆಲುವಿನ ಶೇಕಡಾವಾರು ಹೊಂದಿದೆ. ಹೀಗಾಗಿ ಫೈನಲ್ ತಲುಪಬೇಕಾದರೆ ಭಾರತ ಇನ್ನುಳಿದ…
ಆನೇಕಲ್: ಆನೇಕಲ್ (Anekal) ಬಳಿ ಕಂಟೇನರ್ ನಿಂದಾಗಿ ಸರಣಿ ಅಪಘಾತ ಸಂಭವಿಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದೆ. ಭೀಕರ ಸರಣಿ ಅಪಘಾತ (Serial Accident)ದಿಂದಾಗಿ 10ಕ್ಕೂ ಅಧಿಕ ವಾಹನಗಳು ಹಾನಿಯಾಗಿ, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಇಬ್ಬರು ಸಾವನ್ನಪ್ಪಿರುವ ಶಂಕೆ ಇದೆ. ಪೊಲೀಸರಿಂದ (Surya City Police) 14 ಕಿಮೀ ತಪ್ಪಿಸಿಕೊಂಡು ಹೋಗಿದ್ದ ಲಾರಿ ಚಾಲಕನನ್ನ ಸಾರ್ವನಿಕರೇ ಹಿಡಿದು, ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದರಿಂದಾಗಿ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಬೆಸ್ತಮಾನಹಳ್ಳಿಯಿಂದ ಚಂದಾಪುರದ ಕಡೆಗೆ ಹೊರಟಿದ್ದ ಚಾಲಕ ರಸ್ತೆ ಅಕ್ಕಪಕ್ಕ ಸಿಕ್ಕಸಿಕ್ಕ ವಾಹನಗಳನ್ನೆಲ್ಲ ಗುದ್ದಿಕೊಂಡು ಹೋಗಿದ್ದಾನೆ. ಪೊಲೀಸರು ವಾಹನ ಚೇಸ್ ಮಾಡಿದರೂ ಸಿಕ್ಕಿಲ್ಲ. ಕೊನೆಗೆ ಹೊಸೂರು ಹೆದ್ದಾರಿಯ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲು ತೂರಿ ಲಾರಿ ನಿಲ್ಲಿಸಿದ್ದಾರೆ. ಲಾರಿ ನಿಲ್ಲಿಸುತ್ತಿದ್ದಂತೆ ಚಾಲಕನನ್ನ ಹಿಗ್ಗಾಮುಗ್ಗಾ ಥಳಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಸೂರ್ಯ ಸಿಟಿ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಗೆ ನಿಖರ ಕಾರಣ…
ತಿರುವನಂತಪುರಂ: ಕಳ್ಳತನದ ಶಂಕೆ ವ್ಯಕ್ತಪಿಡಸಿ ಕಾರ್ಮಿಕನನ್ನು ಕೊಲೆ ಮಾಡಿರುವ ಘಟನೆಯೊಂದು ನಡೆದಿದೆ. ಕೇರಳದ ಪಾಲಕ್ಕಾಡ್ ಜಿಲ್ಲೆಯ ವಲಯಾರ್ ಹತ್ತಿರ ಈ ಘಟನೆ ನಡೆದಿದೆ. ಸ್ಥಳೀಯರ ಗುಂಪೊಂದು 31 ವರ್ಷದ ವಲಸೆ ಕಾರ್ಮಿಕನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ. ಹತ್ಯೆಯಾಗಿರುವ ಕಾರ್ಮಿಕನನ್ನು ಛತ್ತೀಸ್ ಗಢದ ಬಿಲಾಸ್ ಪುರ ಮೂಲದ ರಾಮನಾರಾಯಣ್ ಭಯಾರ್ (31) ಎಂದು ಗುರುತಿಸಲಾಗಿದೆ. ಹತ್ಯೆಯಾಗಿರುವ ವ್ಯಕ್ತಿ ಕಾಂಜಿಕೋಡ್ನಲ್ಲಿ ವಾಸಿಸುತ್ತಿದ್ದ. ಕೂಡಲೇ ಕಾರ್ಮಿಕನನ್ನು ಪಾಲಕ್ಕಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣದ ಕುರಿತು ಎಫ್ ಐಆರ್ ದಾಖಲಾಗಿದ್ದು,, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಭಯಾರ್ ನಾಲ್ಕು ದಿನಗಳ ಹಿಂದೆ ಕೆಲಸ ಹುಡುಕಿಕೊಂಡು ಕೇರಳಕ್ಕೆ ಬಂದಿದ್ದ. ಉದ್ಯೋಗ ಸಿಗದ ಹಿನ್ನೆಲೆಯಲ್ಲಿ ಮರಳಿ ಹೋಗಲು ಮುಂದಾಗಿದ್ದ. ಆತ ತಾನು ಬಂದಿದ್ದ ಸ್ಥಳಕ್ಕೆ ಹೊಸಬನಾಗಿದ್ದರಿಂದಾಗಿ ಸರಿಯಾಗಿ ದಾರಿಗೊತ್ತಿರಲಿಲ್ಲ. ಆತನ ವಿರುದ್ಧ ಆತ ಭೇಟಿ ನೀಡಿದ್ದ ಪ್ರದೇಶಕ್ಕೆ ಹೊಸಬ. ಸ್ಥಳಗಳ…
ರಾಜ್ಯದ ಕೆಲವೆಡೆ ಚಳಿಯ ಅನುಭವ ಹೆಚ್ಚಾಗುತ್ತಿದ್ದು, ಜನ ಗಡಗಡ ನಡಗುತ್ತಿದ್ದಾರೆ. ಅದರಲ್ಲೂ ಉತ್ತರ ಒಳನಾಡಿನ ಕೆಲವೆಡೆ ಭಾರೀ ಚಳಿಯ ಅನುಭವವಾಗುತ್ತಿದ್ದು, ಜನ ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾನುವಾರದಿಂದ ಎರಡು ದಿನಗಳ ಕಾಲ ರಾಜ್ಯದ ಹಲವೆಡೆ ಶೀತಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 5 ಜಿಲ್ಲೆಗಳ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಭಾನುವಾರದಂದು ಬೀದರ್ ನಲ್ಲಿ ದಾಖಲೆಯ 5 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ದಾಖಲಾಗಿತ್ತು. ಸೋಮವಾರದಿಂದ ಎರಡು ದಿನಗಳ ಕಾಲ ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಕೊಪ್ಪಳ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ದಾವಣಗೆರೆ, ಮೈಸೂರು, ಮಂಡ್ಯ, ತುಮಕೂರು, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ ಶೀತಗಾಳಿ ಬೀಸಲಿದೆ. ಡಿ. 22 ರಂದು ಉತ್ತರ ಒಳನಾಡಿನ ಯಾದಗಿರಿ, ರಾಯಚೂರು, ಕಲಬುರಗಿ, ವಿಜಯಪುರ, ಬೀದರ್ ನಲ್ಲಿ…
ಇತ್ತೀಚಿನ ದಿನಗಳಲ್ಲಿ ಬಾಂಗ್ಲಾದೇಶ ಅಕ್ಷರಶಃ ಜ್ವಾಲಾಮುಖಿಯಂತಾಗಿ ಬಿಟ್ಟಿದೆ. ಶೇಖ್ ಹಸೀನಾ ಭಾರತಕ್ಕೆ ಪಲಾಯನವಾದ ನಂತರ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳು ಭೀಕರವಾಗುತ್ತಿವೆ. ಹಾದಿ ಹತ್ಯೆಯ ಆಕ್ರೋಶ ಈಗ ಅಲ್ಲಿ ಎಲ್ಲೆಲ್ಲೋ ಬೆಂಕಿ ಎನ್ನುವಂತಾಗಿ ಬಿಟ್ಟಿದೆ. ಆ ಕುರಿತಾದ ಒಂದು ಸ್ಟೋರಿ ಈಗ ನಿಮ್ಮ ಮುಂದೆ. ರಾಜಕೀಯವೇ ಇರಲಿ, ಬೇಡಿಕೆಯ ಪ್ರತಿಭಟನೆಯೇ ಇರಲಿ ಬಾಂಗ್ಲಾದಲ್ಲಿ ಹಿಂಸಾಚಾರದ ಹಾದಿ ಹಿಡಿಯುತ್ತಿವೆ. ಬಾಂಗ್ಲಾದೇಶದ ದಂಗೆಯ ನಾಯಕ ಷರೀಫ್ ಒಸ್ಮಾನ್ ಹಾದಿ ಹತ್ಯೆಯ ನಂತರ ಆರಂಭವಾದ ಹಿಂಸಾಚಾರ ಮಿತಿಮೀರುತ್ತಿದೆ. ಯಾವುದೇ ಹಿಂಸಾಚಾರ ನಡೆಯಲಿ ಹಿಂದೂಗಳನ್ನು ಟಾರ್ಗೆಟ್ ಮಾಡುವ ಉಗ್ರ ಮನಸ್ಥಿತಿಯೂ ಅಲ್ಲಿ ಹೊರ ಬರುತ್ತಿದೆ. ಪ್ರವಾದಿ ನಿಂದನೆಯ ಸುಳ್ಳು ಆರೋಪ ಹೊರಿಸಿ 30 ವರ್ಷದ ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕನನ್ನು ಅತ್ಯಂತ ಕ್ರೂರವಾಗಿ ಕೊಲ್ಲಲಾಗಿದೆ. ಅಷ್ಟಕ್ಕೇ ನಿಲ್ಲದ ಉದ್ರಿಕ್ತರ ಗುಂಪು ಆತನ ಶವವನ್ನೇ ಸುಟ್ಟು ಹಾಕಿ ವಿಕೃತಿ ಮೆರೆದಿತ್ತು. ಹಿಂದು ಯುವಕ ದೀಪು ಚಂದ್ರಾ ದಾಸ್ ಭೀಕರ ಹತ್ಯೆಗೆ ಇಡೀ ವಿಶ್ವವೇ ಆಕ್ರೋಶ…