Author: Bosstv News Desk

ನವದೆಹಲಿ: ಬಾಂಗ್ಲಾದೇಶದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿರುವ ಮಧ್ಯೆ ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಪಾಕ್ ಮುಂದಾಗಿದೆ ಎಂದು ತಿಳಿದು ಬಂದಿದೆ. ಬಾಂಗ್ಲಾದೇಶದ ಮಾರ್ಗವಾಗಿ ಪಾಕಿಸ್ತಾನದ ಭಯೋತ್ಪಾದನಾ ಗುಂಪುಗಳು ಭಾರತದ ಒಳಗೆ ನುಗ್ಗಲು ಪ್ರಯತ್ನಿಸುತ್ತಿವೆ ಎಂಬ ಗುಪ್ತಚರ ಮಾಹಿತಿ ಲಭ್ಯವಾಗಿ. ಹೀಗಾಗಿ ಭಾರತೀಯ ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿವೆ. ಢಾಕಾದಲ್ಲಿ ಹೆಚ್ಚಾದ ಅಶಾಂತಿಯ ನಡುವೆ ಬಾಂಗ್ಲಾದೇಶ ಕಾರಿಡಾರ್ ಮೂಲಕ ಭಾರತಕ್ಕೆ ಭಯೋತ್ಪಾದಕರನ್ನು ನುಸುಳಿಸಲು ಐಎಸ್ಐ ಯೋಜಿಸುತ್ತಿದೆ ಎಂದು ಗುಪ್ತಚರ ವರದಿ ಹೇಳಿವೆ. ಬಾಂಗ್ಲಾ ಹಿಂಸಾಚಾರ ಲಾಭ ಮಾಡಿಕೊಳ್ಳಲು ಮುಂದಾಗಿರುವ ಪಾಕ್ ತನ್ನ ಕುತಂತ್ರ ಬುದ್ಧಿ ತೋರಿಸಲು ಮುಂದಾಗಿದೆ. ಅಸ್ಸಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಮೂಲಕ ಭಾರತಕ್ಕೆ ನುಸುಳಲು ಹಲವಾರು ಭಯೋತ್ಪಾದಕರು ಪಾಕಿಸ್ತಾನಿ ಏಜೆನ್ಸಿಗಳಿಂದ ತರಬೇತಿ ಪಡೆದಿದ್ದಾರೆ ಎನ್ನಲಾಗಿದೆ. ಬಡ ಸಮುದಾಯಗಳು ಮತ್ತು ರೋಹಿಂಗ್ಯಾ ನಿರಾಶ್ರಿತರು ಸೇರಿದಂತೆ ಬಾಂಗ್ಲಾದೇಶದ ದುರ್ಬಲ ಜನರಿಗೆ ಜಿಹಾದ್‌ನಲ್ಲಿ ಭಾಗವಹಿಸಲು ಮತ್ತು ಭಾರತಕ್ಕೆ ಪ್ರವೇಶಿಸಲು ಹಣದ ಆಮಿಷವೊಡ್ಡಲಾಗುತ್ತಿದೆ ಎಂದು ವರದಿಯಾಗುತ್ತಿದೆ. ಎಲ್‌ಇಟಿ ಮತ್ತು ಜೆಇಎಂಗೆ ಸಂಬಂಧಿಸಿದ ಹಲವಾರು ಉಗ್ರರು ಇತ್ತೀಚೆಗೆ ಬಾಂಗ್ಲಾದೇಶದಲ್ಲಿ…

Read More

ಚಿತ್ರದುರ್ಗ: ಕೌಟುಂಬಿಕ ಕಲಹಕ್ಕೆ ಬೇಸತ್ತು 2 ತಿಂಗಳ ಗರ್ಭಿಣಿ (Pregnant Woman) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಚಿತ್ರದುರ್ಗ (Chitradurga) ತಾಲೂಕಿನ ಕಾಟಿಹಳ್ಳಿ (Katihalli) ಗ್ರಾಮದಲ್ಲಿ ನಡೆದಿದೆ. ಪುಷ್ಪ (25) ಆತ್ಮಹತ್ಯೆ ಮಾಡಿಕೊಂಡಿರುವ ಗರ್ಭಿಣಿ. ಕಾಟಿಹಳ್ಳಿ ಗ್ರಾಮದ ಹರೀಶ್ ನಗರದ ಖಾಸಗಿ ಗಾರ್ಮೆಂಟ್ಸ್ ಕಾರ್ಮಿಕನಾಗಿದ್ದ. ಆತ್ಮಹತ್ಯೆ ಮಾಡಿಕೊಂಡಿರುವ ಪುಷ್ಪ ಕೂಡ ಗಾರ್ಮೆಂಟ್ಸ್ ಗೆ ತೆರಳುತ್ತಿದ್ದರು. ಈ ಮಧ್ಯೆ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿದೆ. ಅನ್ಯಜಾತಿ ಎಂಬ ಕಾರಣಕ್ಕೆ ಹರೀಶ್ ಹಾಗೂ ಪುಷ್ಪ ಪೋಷಕರು ಮದುವೆಗೆ ವಿರೋಧಿಸಿದ್ದರು. ಪೋಷಕರ ವಿರೋಧದ ಮಧ್ಯೆಯೂ ಇಬ್ಬರೂ ಮದುವೆಯಾಗಿದ್ದರು. ಪುಷ್ಪ ಹಾಗೂ ಹರೀಶ್‌ಗೆ ಒಂದೂವರೆ ವರ್ಷದ ಒಂದು ಮದ್ದಾದ ಗಂಡು ಮಗುವಿದೆ. ಆದರೆ, ಈ ಮಧ್ಯೆ ಇಬ್ಬರ ಮಧ್ಯೆ ಸಣ್ಣಪುಟ್ಟ ಜಗಳವಾಗುತ್ತಿದ್ದು, ಎರಡು ದಿನಗಳ ಹಿಂದೆಯಷ್ಟೇ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ರಾಜಿಸಂಧಾನದೊಂದಿಗೆ ಮನೆಗೆ ತೆರಳಿದ್ದ ಪುಷ್ಪ ನೇಣಿಗೆ ಶರಣಾಗಿದ್ದಾಳೆ. ಅಸ್ವಸ್ಥಳಾಗಿದ್ದ ಪುಷ್ಪಾರನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಹರೀಶನೇ ಈ ಕೃತ್ಯವೆಸಗಿ…

Read More

ಮಹಿಳಾ ಕ್ರಿಕೆಟ್ ನ ಟಿ20 ಶ್ರೇಯಾಂಕ್ ಬಿಡುಗಡೆಯಾಗಿದ್ದು, ಭಾರತೀಯ ಪ್ರತಿಭಾನ್ವಿತ ಆಟಗಾರ್ತಿ ಸ್ಮೃತಿ ಮಂಧಾನ ಮೊದಲ ಸ್ಥಾನ ಕಳೆದುಕೊಂಡಿದ್ದಾರೆ. ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ. ದೀಪ್ತಿ ಶರ್ಮಾ ಇದೇ ಮೊದಲ ಬಾರಿಗೆ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ ಒನ್ ಬೌಲರ್ ಪಟ್ಟ ಅಲಂಕರಿಸಿದ್ದಾರೆ. ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ ಕೇವಲ 20 ರನ್‌ ನೀಡಿ 1 ವಿಕೆಟ್ ಪಡೆದಿದ್ದ ದೀಪ್ತಿ, ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕಿ ಲಾರಾ ವೋಲ್ವಾರ್ಡ್ಟ್ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಐರ್ಲೆಂಡ್ ವಿರುದ್ಧದ ತವರು ಏಕದಿನ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಶತಕ ಬಾರಿಸುವುದರ ಮೊಲಕ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಶ್ರೀಲಂಕಾ ವಿರುದ್ಧದ ಅಜೇಯ ಅರ್ಧಶತಕ ಬಾರಿಸಿದ್ದ ಜೆಮಿಮಾ ರೊಡ್ರಿಗಸ್ ಟಿ20 ಬ್ಯಾಟರ್ಗಳ ಶ್ರೇಯಾಂಕದಲ್ಲಿ ಐದು ಸ್ಥಾನಗಳ ಜಿಗಿತದೊಂದಿಗೆ ಅಗ್ರ 10 ರಲ್ಲಿ…

Read More

ಬೆಂಗಳೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಎಐಸಿಸಿ ನಾಯಕ ರಾಹುಲ್ ಗಾಂಧಿ (Rahul Gandhi) ಅವರ ಭೇಟಿಗೆ ಮನವಿ ಮಾಡುವುದು ಸೇರಿದಂತೆ ಕೆಲವು ವಿಷಯಗಳನ್ನು ಪ್ರಸ್ತಾಪಿಸಿ ಪತ್ರ ಬರೆದಿದ್ದಾರೆ. ಇದು ಕಾಂಗ್ರೆಸ್ ರಾಜಕಾರಣದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ರಾಹುಲ್ ಗಾಂಧಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಈ ಪತ್ರದ ಮೂಲಕ ರಾಹುಲ್ ಭೇಟಿಗೆ ಅವಕಾಶ ಕೇಳಿದ್ದಾರೆ. ತಪ್ಪು ಮಾಡದ ನನ್ನನ್ನು ಸಚಿವ ಸ್ಥಾನದಿಂದ ಕೆಳಗೆ ಇಳಿಸಿದ್ದಾರೆ. ನಾನು ಯಾವುದೇ ಭ್ರಷ್ಟಾಚಾರ ಮಾಡದೇ ಎರಡು ವರ್ಷ ಸಚಿವ‌ನಾಗಿ ಕೆಲಸ ಮಾಡಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತಂದಿದ್ದೇನೆ ಎಸ್ಸಿ-ಎಸ್ಟಿ ಮಹಿಳಾ ಮೀಸಲಾತಿ ತಂದಿದ್ದೇನೆ. ಇದರಿಂದ ರಾಜ್ಯಾದ್ಯಂತ ಒಂದು ಲಕ್ಷ ಕಾರ್ಯಕರ್ತರಿಗೆ ಅನುಕೂಲವಾಗಿದೆ. ಹಾಸನ ಉಸ್ತುವಾರಿಯಾಗಿ ಹಳೇ ಮೈಸೂರು ಭಾಗದಲ್ಲಿ ಹಾಸನ ಗೆಲ್ಲುವಂತೆ ಕೆಲಸ ಮಾಡಿದ್ದೇನೆ. ನಾನು ನೆಹರೂ ಫ್ಯಾಮಿಲಿಗೆ ನಿಷ್ಠೆಯಿಂದ ಇದ್ದೇನೆ. ನಾನು ಈ ಪತ್ರ ಬರೆದ ಉದ್ದೇಶ ಇಷ್ಟೇ. ನನ್ನ ವಿರುದ್ಧ ತಮಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಆಗಬೇಕು.…

Read More

ಹಾಸನ: ಬಸ್ ಚಾಲಕನ ದೌರ್ಜನ್ಯದಿಂದಾಗಿ 10ನೇ ತರಗತಿ ವಿದ್ಯಾರ್ಥಿನಿ (SSLC Student) ಮಗುವಿಗೆ ಜನ್ಮ ನೀಡಿರುವ ಆಘಾತಕಾರಿ ಘಟನೆ ನಡೆದಿದೆ. ಜಿಲ್ಲೆಯ (Hassan) ಚನ್ನರಾಯಪಟ್ಟಣ (Channarayapatna) ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೇಲೆ ಆಕೆ ಪ್ರತಿ ದಿನ ಶಾಲೆಗೆ ಹೋಗುತ್ತಿದ್ದ ಬಸ್ ನ ಚಾಲಕ ಲೈಂಕಿಗ ದೌರ್ಜನ್ಯ ಎಸಗಿದ್ದಾನೆಂದು ತಿಳಿದು ಬಂದಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಾಲಾ ಬಸ್ ಚಾಲಕ ತಲೆಮರಿಸಿಕೊಂಡಿದ್ದಾನೆ. ಬಸ್ನಲ್ಲಿರುವ ವಿದ್ಯಾರ್ಥಿನಿಗೆ ಚಾಕೋಲೆಟ್ ನೀಡಿ ಪುಸಲಾಯಿಸಿ ಆಕೆಯನ್ನು ಲೈಂಗಿಕವಾಗಿ ಬಳಿಸಿಕೊಂಡಿದ್ದಾನೆ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಮಗುವಿಗೆ ಜನ್ಮ ನೀಡಿದ್ದಾಳೆ ಎನ್ನಲಾಗಿದೆ.. ವಾಹನ ಚಾಲಕನಾಗಿದ್ದ ಚನ್ನರಾಯಪಟ್ಟಣ ತಾಲ್ಲೂಕಿನ ಬರಗೂರು ಗ್ರಾಮದ ರಂಜನ್ ಆರೋಪಿ ಎನ್ನಲಾಗಿದ್ದು, ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಶ್ರವಣಬೆಳಗೊಳಕ್ಕೆ ಕರೆದೊಯ್ದು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಬಾಲಕಿ ಮತ್ತು ಮಗುವನ್ನು ಕೆಲ ದಿನಗಳ ಕಾಲ ಆರೈಕೆ ಬಳಿಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಶೀಘ್ರ…

Read More

ಬೆಂಗಳೂರು: ಬಿಕ್ಲು ಶಿವ (Biklu Shiva) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜ್ (Byrati Basavaraj) ನಿರೀಕ್ಷಣಾ ಜಾಮೀನು ಕೋರಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಈ ಪ್ರಕರಣ ದಾಖಲಾಗಿ 5 ತಿಂಗಳು ಕಳೆದು ಹೋಗಿವೆ. 18 ಆರೋಪಿಗಳ ವಿರುದ್ಧ ಚಾರ್ಜ ಶೀಟ್ ಸಲ್ಲಿಕೆಯಾಗಿದೆ. ಏಳರಿಂದ ಎಂಟು ಆರೋಪಿಗಳು ಕೊಲೆ ಸಂದರ್ಭದಲ್ಲಿ ಅಪರಿಚಿತರರು ಇದ್ದಾರೆ. ಆದರೆ, ಬೈರತಿ ಬಸವರಾಜ್‌ರನ್ನ ಎ-5 ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖ ಮಾಡಿದ್ದಾರೆ. ಪೊಲೀಸರು ಅನುಮಾನದ ಮೇರೆಗೆ ಎಫ್‌ಐಆರ್‌ನಲ್ಲಿ ಹೆಸರು ಸೇರಿಸಿದ್ದಾರೆ. ಸಿಐಡಿಗೆ ಪ್ರಕರಣ ವರ್ಗಾವಣೆ ಆದ ನಂತರ ನಿನ್ನೆಯವರೆಗೂ ಸಿಐಡಿ ನೋಟಿಸ್ ನೀಡಿಲ್ಲ. ಸಮನ್ಸ್ ಕೊಟ್ಟಿಲ್ಲ. ಹೇಗೆ ವಿಚಾರಣೆಗೆ ಹಾಜರಾಗುವುದು? ಎಫ್‌ಐಆರ್‌ನಲ್ಲಿ ಹೆಸರು ಸೇರಿಸುವುದು ಬಿಟ್ಟು ಬೇರೆ ಏನ್ ಮಾಡಿದ್ದಾರೆ? ಎಫ್‌ಐಆರ್ ದಾಖಲಾದ ನಂತರ ಕೋಕಾ ಕಾಯ್ದೆ ಜಾರಿ ಮಾಡುತ್ತಾರೆ. ಬೈರತಿ ಬಸವರಾಜ್ ಯಾವುದೇ ತನಿಖೆಗೂ ಸಿದ್ಧ, ಯಾವತ್ತು ಕರೆದರೂ ತನಿಖೆಗೆ ಬರುತ್ತಾರೆ ಎಂದು ವಕೀಲರು ವಾದಿಸಿದರು. ಎ1 ರಿಂದ ಎ5…

Read More

ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಗೆ ಕೌಂಟ್ ಡೌನ್ ಶುರುವಾಗಿದ್ದು, ಟಫ್ ರೂಲ್ಸ್ ಗೆ ಸಿದ್ಧತೆ ನಡೆದಿದೆ. ಲಕ್ಷಾಂತರ ಮಂದಿ ಸೇರುವ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಟ್ಟೆಚ್ಚರ ವಹಿಸಿರುವ ನಗರ ಪೊಲೀಸರು, ಎಂ.ಜಿ. ರಸ್ತೆ ಸುತ್ತಮುತ್ತಲ ಪ್ರದೇಶಗಳಲ್ಲಿ 22 ಪರಿವೀಕ್ಷಣಾ ಗೋಪುರ (ವಾಚ್‌ ಟವರ್‌)ಗಳನ್ನು ನಿರ್ಮಿಸಲಿದ್ದಾರೆ. ಹೆಚ್ಚು ಜನ ಸೇರುವ ಸೂಕ್ಷ್ಮ ಪ್ರದೇಶವೂ ಆಗಿರುವ ಬ್ರಿಗೇಡ್‌ ರಸ್ತೆ ಹಾಗೂ ಎಂ.ಜಿ ರಸ್ತೆಯಲ್ಲಿ ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಪಶ್ಚಿಮ ವಿಭಾಗದ ಜಂಟಿ ಪೊಲೀಸ್‌ ಆಯುಕ್ತ ಸಿ. ವಂಶಿಕೃಷ್ಣ, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್‌ ಎಂ. ಹಾಕೆ ಅವರು ವಿಭಾಗದ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. 22 ವಾಚ್‌ ಟವರ್‌ಗಳನ್ನು ನಿರ್ಮಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಚರ್ಚ್ ಸ್ಟ್ರೀಟ್‌ನ ಸ್ಟಾರ್‌ಬಕ್ಸ್‌ ಮುಂಭಾಗ, ಪಿಎಚ್‌ಪಿ ರಸ್ತೆ, ಎಂ.ಜಿ ರಸ್ತೆ, ಕುಮಾರಯ್ಯ ರಸ್ತೆ ಜಂಕ್ಷನ್‌, ಗರುಡಾ ಮಾಲ್‌ ಜಂಕ್ಷನ್‌, ಬ್ರಿಗೇಡ್‌ ರಸ್ತೆ, ಒಪೆರಾ ಸರ್ಕಲ್‌ ಬಿಸಿಡಿ ಕನ್ಸ್‌ಟ್ರಕ್ಷನ್‌, ವಾರ್‌ ಮೆಮೋರಿಯಲ್‌,…

Read More

ಮಂಡ್ಯ: ಯುವಕನೋರ್ವ ಕಾವೇರಿಯಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ನಡೆದಿದೆ. ಈ ಘಟನೆ ಜಿಲ್ಲೆಯ (Mandya) ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಜರುಗಿದೆ. ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದ ನಿವಾಸಿ ಪ್ರಹ್ಲಾದ್ (21) ಸಾವನ್ನಪ್ಪಿರುವ ದುರ್ದೈವಿ. ಕಾವೇರಿ ನದಿಯಲ್ಲಿ (Cauvery River) ಈಜಾಡುತ್ತಿದ್ದ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಯುವಕ (Youth) ಸಾವನ್ನಪ್ಪಿದ್ದಾನೆ. ಪ್ರಹ್ಲಾದ್ ತನ್ನ ಸ್ನೇಹಿತರೊಂದಿಗೆ ಮುತ್ತತ್ತಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಪ್ರವಾಸ ಬಂದಿದ್ದ. ಕಾವೇರಿ ನದಿಯಲ್ಲಿ ಈಜಲು ಹೋದಾಗ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾನೆ ಎನ್ನಲಾಗಿದೆ. ಸದ್ಯ ಯುವಕನ ಮೃತದೇಹ ಹೊರ ತೆಗೆಯಲಾಗಿದೆ. ಈ ಕುರಿತು ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಇಸ್ಲಾಮಾಬಾದ್‌: ಕೊನೆಗೂ ಪಾಕ್, ಭಾರತದ ಏಟನ್ನು ಒಪ್ಪಿಕೊಂಡಿದೆ. ಭಾರತದ ಆಪರೇಷನ್ ಸಿಂಧೂರ (Operation Sindoor) ದಾಳಿಯ ಸಂದರ್ಭದಲ್ಲಿ ನಾವು `ದೇವರ ದಯೆ’ ಯಿಂದ ಬದುಕುಳಿದಿದ್ದೇವೆ ಎಂದು ಹೇಳಿದೆ. ಈ ಹೇಳಿಕೆಯನ್ನು ಸ್ವತಃ ಪಾಕಿಸ್ತಾನದ ರಕ್ಷಣಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್(Asim Munir) ಹೇಳಿದ್ದಾನೆ. ಇಸ್ಲಾಮಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮಾವೇಶದಲ್ಲಿ ಮಾತನಾಡಿ, ಮೇ ತಿಂಗಳಲ್ಲಿ ನಡೆದ 4 ದಿನಗಳ ಮೇ ಸಂಘರ್ಷದ ಸಂದರ್ಭದಲ್ಲಿ ಪಾಕ್ ಸಶಸ್ತ್ರ ಪಡೆಗಳಿಗೆ ದೇವರ ನೆರವು ಸಿಕ್ಕಿತು ಎಂದಿದ್ದಾನೆ. 26 ನಾಗರಿಕರನ್ನು ಹತ್ಯೆಗೈದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ ನಡೆಸಿತ್ತು. ಮೇ 7 ರಂದು ಪಾಕಿಸ್ತಾನದ ಸೇನಾ ನೆಲೆ ಮತ್ತು ಉಗ್ರರ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿತ್ತು.

Read More

ಚಿಕ್ಕಬಳ್ಳಾಪುರ: ಕಿಲಾಡಿ ಲವರ್ಸ್ ಗಳಿಬ್ಬರು ತಮ್ಮ ಮೋಜು, ಮಸ್ತಿಗಾಗಿ ಪರಿಚಯಸ್ಥರಿಗೆ ಪಂಗನಾಮ ಹಾಕಿರುವ ಘಟನೆ ನಡೆದಿದೆ. ಈ ಘಟನೆ ತಾಲೂಕಿನ (Chikkaballapur) ಅಂಕಣಗುಂದಿ ಗ್ರಾಮದಲ್ಲಿ ನಡೆದಿದೆ. ಪರಿಚಯಸ್ಥರಿಗೆ ಕೆಲಸ ಕೊಡಿಸುವಾದಿಗ ಲಕ್ಷಾಂತರ ರೂ. ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಂಕಣಗುಂದಿಯ ಅನುಷಾ ಮತ್ತು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ನಿವಾಸಿಯಾಗಿರುವ ಬಾಯ್ ಫ್ರೆಂಡ್ ಅರುಣ್ ಸೇರಿ ಪರಿಚಯಸ್ಥರಿಗೆ ಮೋಸ ಮಾಡಿದ್ದಾರೆ. ಬಾಯ್ ಫ್ರೆಂಡ್ ಅರುಣ್ ಬೆಂಗಳೂರಿನ ಸಾಯಿ ಸೇಲ್ಪ್ ಡ್ರೈವ್ ಖಾಸಗಿ ಸಂಸ್ಥೆಯಲ್ಲಿ ಸಿಇಒ ಆಗಿದ್ದು, ಕೈ ತುಂಬಾ ಹಣ ಸಂಪಾದಿಸುವ ಕೆಲಸ ಕೊಡಿಸುತ್ತಾರೆ. ಅದಕ್ಕೆ ಹಣ ಕಟ್ಟಬೇಕು ಎಂದು ನಂಬಿಸಿ ಪರಿಚಯಸ್ಥರಿಂದ ಹಣ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಚನಬಲೆ ನಿವಾಸಿ ಎಲ್ಎಲ್ಬಿ ವಿದ್ಯಾರ್ಥಿನಿ ಪ್ರತಿಭಾ ಎನ್ನುವವರಿಗೆ ಒಂದು ಲಕ್ಷ 85 ಸಾವಿರ ರೂ., ಚಿಕ್ಕಬಳ್ಳಾಪುರ ತಾಲೂಕಿನ ಕಣಜೇನಹಳ್ಳಿ ನಿವಾಸಿ ಎಂಸಿಎ ಪದವೀಧರೆ ಹರ್ಷಿತಾ ಎನ್ನುವವರಿಗೆ 2 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ಕೇಳಿ…

Read More