242 ಜನರನ್ನ ಹೊತ್ತೊಯ್ಯುತ್ತಿದ್ದ ಏರ್‌ ಇಂಡಿಯಾದ ವಿಮಾನ ಯಮನಯಾನವಾಗಿ 241 ಜನರ ಪ್ರಾಣವನ್ನ ಕಿತ್ತುಕೊಂಡಿದೆ. ಈ ದುರಂತದಲ್ಲಿ ಸಾವನ್ನಪ್ಪಿರುವವರ (Air India Plane Crash) ಸಂಖ್ಯೆ 274 ಕ್ಕೆ ಏರಿಕೆಯಾಗಿದೆ. ಈ ದುರ್ಘಟನೆಯಲ್ಲಿ ತಮ್ಮವರನ್ನ ಕಳೆದುಕೊಂಡವರ ಆಕ್ರಂದನ ಮುಗಿಲುಮುಟ್ಟಿದೆ. ಕೆಲ ಕುಟುಂಬಗಳ ಬದುಕು ಈ ವಿಮಾನ ದುರಂತದಲ್ಲಿ ಸರ್ವನಾಶವಾಗಿದೆ. ಬಾಳಿ ಬದುಕಬೇಕಾದ ಮಕ್ಕಳು ಕೂಡ ಬದುಕಿನ ಕೊನೆ ಪಯಣ ಮುಗಿಸಿದ್ದಾರೆ. ಬದಕನ್ನ ಕಟ್ಟಿಕೊಳ್ಳಲು ಹೊರಟ್ಟಿದ್ದವರು ದುರಂತ ಅಂತ್ಯವಾಗಿದ್ದಾರೆ. ವೈದ್ಯರಾಗೋ ಕನಸು ಕಂಡಿದ್ದ ಹಾಸ್ಟೆಲ್‌ ವಿದ್ಯಾರ್ಥಿಗಳು ದಾರುಣ ಸಾವನ್ನಪ್ಪಿದ್ದಾರೆ.

ಮೃತದೇಹಗಳು ಗುರುತೇ ಸಿಗಲಾರದಷ್ಟು ಸುಟ್ಟುಕರಕಲಾಗಿದ್ದು, ಆಸ್ಪತ್ರೆ ಮುಂದೆ ಕುಟುಂಬಸ್ಥರ ಕಣ್ಣೀರ ಹೊಳೆಯೇ ಹರಿಯುತ್ತಿದೆ. ಇನ್ನು ಟಾಟಾ ಗ್ರೂಪ್‌ ಮೃತರ ಕುಟುಂಬಕ್ಕೆ ಪರಿಹಾರ ಘೋಷಿಸಿದೆ. ಸಂತ್ರಸ್ತರಿಗೆ ತಲಾ 1 ಕೋಟಿ ರೂ. ಪರಿಹಾರವನ್ನು ನೀಡಿದೆ.

ಆದ್ರೆ, ಈ ಒಂದು ಕೋಟಿ ರೂಪಾಯಿ ಪರಿಹಾರ ಧನ ನಮಗೆ ಬೇಡ.. ನಾನೇ ನಿಮಗೆ ಎರಡು ಕೋಟಿ ಕೊಡುವೆ ನಮ್ಮ ತಂದೆಯನ್ನ ನಿಮಗೆ ಮರಳಿ ತರಲು ಸಾಧ್ಯವಾ? ಎಂದು ಫಾಲ್ಗುಣಿ ಎಂಬುವವರು ಟಾಟಾ ಗ್ರೂಪ್‌ ಸಂಸ್ಥೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದುರಂತದಲ್ಲಿ ಮೃತಪಟ್ಟ 241 ಜನರ ಪೈಕಿ ಫಾಲ್ಗುಣಿ ಅವರ ತಂದೆಯು ಸಾವನ್ನಪ್ಪಿದ್ದಾರೆ.

ಪರಿಹಾರವು ಎಂದಾದರೂ ನನ್ನ ತಂದೆಯನ್ನು ಮರಳಿ ತರಲು ಸಾಧ್ಯವೇ? ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ, ಮತ್ತು ಅವರಿಗೆ ನನ್ನ ತಂದೆ ಬೇಕು. ನನಗೆ ಅವರ ಪ್ರೀತಿ ಮತ್ತು ವಾತ್ಸಲ್ಯ ಬೇಕು. ಏರ್ ಇಂಡಿಯಾದಲ್ಲಿ ಪ್ರಯಾಣಿಸಲು ಯಾವಾಗಲೂ ಇಷ್ಟಪಡುವ ನನ್ನ ತಂದೆಯನ್ನು ಮರಳಿ ಕರೆತರಲು ಸಾಧ್ಯವಾದರೆ ನಾನು ಅವರಿಗೆ 2 ಕೋಟಿ ರೂ. ಪಾವತಿಸುತ್ತೇನೆ” ಎಂದು ಫಲ್ಗುಣಿ ಅವರು ತಮ್ಮ ತಂದೆಯ ಮೃತದೇಹಕ್ಕಾಗಿ ಡಿಎನ್‌ಎ ಟೆಸ್ಟ್‌ ಕೊಡಲು ಬಿಜೆ ವೈದ್ಯಕೀಯ ಕಾಲೇಜಿಗೆ ಬಂದಾಗ ಮಾಧ್ಯಮದವರ ಮುಂದೆ ತಮ್ಮ ಅಂತಃಕರಣದ ದುಃಖವನ್ನ ಹೊರಹಾಕಿ ಟಾಟಾ ಗ್ರೂಪ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share.
Leave A Reply