ಅಹ್ಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಪ್ರಯಾಣಿಕರು ಸಜೀವ ದಹನಗೊಂಡ್ರು.. ಕುಟುಂಬಸ್ಥರ ಜೊತೆಗೆ ಖುಷಿ ಖುಷಿಯಾಗಿರಬೇಕಾಗಿದ್ದವರು ಬೆಂಕಿಯುಂಡೆಯಾಗಿ ಉರಿದು ಬಿಟ್ರು.. ಲಂಡನ್‌ನಲ್ಲಿ ಕಚೇರಿ, ಇನ್ನಿತರ ಕೆಲಸದಲ್ಲಿ ಬ್ಯುಸಿಯಾಗಬೇಕಾಗಿದ್ದವರು ಈಗ ಸ್ಮಶಾನದ ಪಾಲಾದ್ರು. ಅಹ್ಮದಾಬಾದ್‌ನಲ್ಲಿ ನಡೆದ ಘೋರ ವಿಮಾನ ದುರಂತ 265 ಜನರ ಬದುಕನ್ನೇ ಹೊಸಕಿ ಹಾಕಿದೆ.. 265 ಜನರ ಕುಟುಂಬಗಳ ನೆಮ್ಮದಿ, ಸುಖ, ಸಂತೋಷವನ್ನೇ ತಿಂದು ಹಾಕಿದೆ.. ಆದ್ರೆ, ಘೋರ ದುರಂತದ ಮಧ್ಯೆಯೂ ಕೆಲವೊಂದಿಷ್ಟು ಜೀವಗಳು ಯಮನ ಪಾಶದಿಂದ ಪವಾಡವೆಂಬಂತೆ ಪುಟಿದೆದ್ದಿದ್ದು ಬಂದಿವೆ.. ಅಂತಹವರ ರೋಚಕ ಕಥೆ ಹೇಳ್ತೀವಿ ನೋಡಿ..

ಸಾವು ಗೆದ್ದ ಕಥೆ -1 :265 ಜನರ ಮಧ್ಯೆ ಉಲ್ಕೆಯಂತೆ ಜಿಗಿದು ಬಂದ..!
ನಿಜ.. ಇದೇನು ಪವಾಡವೋ ಎನ್ನಬೇಕೋ? ಮರು ಜನ್ಮ ಎನ್ನಬೇಕೋ ಗೊತ್ತಿಲ್ಲ.. ಏರ್‌ ಇಂಡಿಯಾ ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ 241 ಜನರು ಸಜೀವದಹನಗೊಂಡ್ರೆ ಓರ್ವ ಪ್ರಯಾಣಿಕ ಮಾತ್ರ ಸಾವು ಗೆದ್ದು ಬಂದಿದ್ದಾನೆ.. ಹೌದು.. ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನದಲ್ಲಿ ಬದುಕುಳಿದಿದ್ದು ಓರ್ವ ಮಾತ್ರ.. ಅದು ರಮೇಶ್ ವಿಶ್ವಾಸ್‌ಕುಮಾರ್..‌ ವಿಮಾನದ 11A ಸೀಟ್‌ನಲ್ಲಿ ಕುಳಿತಿದ್ದರು..

ಸೀಟ್ 11A ಎಕಾನಮಿ ಕ್ಲಾಸ್‌ನ ಮೊದಲ ಸಾಲಿನಲ್ಲಿ ಬಿಸಿನೆಸ್ ಕ್ಲಾಸ್‌ನ ಹಿಂದೆ ನೇರವಾಗಿ ಇರುತ್ತೆ. ಈ ಸೀಟು ತುರ್ತು ಕಿಟಕಿಯ ಪಕ್ಕದಲ್ಲಿತ್ತು. ಇದರಿಂದ ರಮೇಶ್ ಈ ಮಾರ್ಗದಿಂದ ಹೊರಬಂದಿದ್ದಾರೆ. ವಿಮಾನ ಅಪಘಾತಕ್ಕೆ ಈಡಾಗುತ್ತೆ ಅಂತಾ ಗೊತ್ತಾದ ತಕ್ಷಣ ತುರ್ತು ಕಿಟಕಿಯಿಂದ ಹೊರಬಂದಿದ್ದಾರೆ.. ಅವರು ಇಂದು ಜೀವಂತವಾಗಿರುವುದಕ್ಕೆ ಇದೇ ಕಾರಣ ಅಂತಾ ಹೇಳಲಾಗುತ್ತದೆ.. ಇನ್ನೊಂದು ವಿಚಾರ ಅಂದ್ರೆ 11 A ಸೀಟು ಕೊನೆಯಲ್ಲಿ ಇರುತ್ತೆ.. ಇದು ಯಾರಿಗೂ ಬೇಡವಾದ ಸೀಟ್‌ ಆಗಿರುತ್ತೆ ಅಂತಾ ಹೇಳಲಾಗ್ತಿದೆ..

ಸಾವು ಗೆದ್ದ ಕಥೆ -2 : ಹಾಸ್ಟೆಲ್‌ ಕಟ್ಟಡದಿಂದಲೇ ಜಿಗಿದ ವಿದ್ಯಾರ್ಥಿ!
ಇನ್ನೊಂದು ಪವಾಡ ಸದೃಶ ಸ್ಟೋರಿ ಅಂದ್ರೆ, ಅದು ಹಾಸ್ಟೆಲ್‌ ವಿದ್ಯಾರ್ಥಿಯೊಬ್ಬ ಕಟ್ಟಡದ ಮೇಲಿಂದ ಜಿಗಿದು ಜೀವ ಉಳಿಸಿಕೊಂಡಿದ್ದು.. ಹೌದು.. 242 ಜನರನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ವಿಮಾನ, ಮೆಘಾನಿ ಪ್ರದೇಶದಲ್ಲಿರುವ ಬಿಜೆಪಿ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ ಮೇಲೆ ಬಿದ್ದಿದೆ… ಈ ವೇಳೆ, ವಿದ್ಯಾರ್ಥಿಗಳು ಹಾಸ್ಟೆಲ್‌ನ ಸ್ಟೂಡೆಂಟ್ಸ್‌ ಮಧ್ಯಾಹ್ನದ ಭೋಜನ ಸೇವಿಸುತ್ತಿದ್ರು.. ಯಾವಾಗ ವಿಮಾನ ಕಟ್ಟಡದ ಮೇಲೆ ಬೀಳುತ್ತೆ ಅಂತಾ ಗೊತ್ತಾಯ್ತೋ ತಕ್ಷಣ 2ನೇ ಮಹಡಿಯಿಂದ ಜಿಗಿದು ಜೀವ ಉಳಿಸಿಕೊಂಡಿದ್ದಾನೆ.. ಈ ವಿಚಾರವನ್ನು ಆ ವಿದ್ಯಾರ್ಥಿಯ ತಾಯಿ ಬಹಿರಂಗಪಡಿಸಿದ್ದಾರೆ..

ಸಾವು ಗೆದ್ದ ಕಥೆ -3 : ಮಹಿಳೆಯ ಜೀವ ಉಳಿಸಿತು ಟ್ರಾಫಿಕ್..!
ಇನ್ನು, ಲಂಡನ್‌ನಲ್ಲಿ ಪತಿಯೊಂದಿಗೆ ವಾಸವಿದ್ದ ಭೂಮಿ ಚೌಹಾಣ್‌ ಎಂಬ ಮಹಿಳೆ ರಜೆಯ ಕಾರಣ ಭಾರತಕ್ಕೆ ಬಂದಿದ್ರು.. ವಿಮಾನ ದುರಂತ ನಡೆದ ದಿನ ಬೆಳಗ್ಗೆ ಭೂಮಿ ಆಸ್ಪತ್ರೆಗೆ ಭೇಟಿ ನೀಡಿದ್ರು.. ಅದೇ ದಿನವೇ ಅವರು ಲಂಡನ್‌ಗೆ ಪ್ರಯಾಣ ಬೆಳೆಸಲು ಏರ್‌ಇಂಡಿಯಾ 171 ವಿಮಾನವನ್ನ ಬುಕ್‌ ಮಾಡಿದ್ರು.. ಆದ್ರೆ, ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ತೆರಳೋದು ಲೇಟಾಗಿತ್ತು.. ಭೂಮಿ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು..

ಹೀಗಾಗಿ ಅವರು ಮಧ್ಯಾಹ್ನ 12.30ಕ್ಕೆ ವಿಮಾನ ನಿಲ್ದಾಣವನ್ನ ತಲುಪುತ್ತಾರೆ.. ಆದ್ರೆ ಅದಾಗಲೇ ಚೆಕ್‌-ಇನ್‌ ಪ್ರಕ್ರಿಯೆ ಮುಗಿದಿದ್ದ ಕಾರಣ ಅವರು ಒಳಹೋಗಲು ಸಾಧ್ಯವಾಗ್ಲಿಲ್ಲ.. ಭೂಮಿ ಹತ್ತು ನಿಮಿಷ ತಡವಾಗಿ ವಿಮಾನ ನಿಲ್ದಾಣ ತಲುಪಿದ ಕಾರಣ ಎಷ್ಟೇ ಬೇಡಿಕೊಂಡ್ರು ಅಲ್ಲಿನ ಅಧಿಕಾರಿಗಳು ಬಿಡಲಿಲ್ಲ.. ಹೀಗಾಗಿ ಭೂಮಿ 1:30ಕ್ಕೆ ವಾಪಸ್‌ ಆಗ್ತಾರೆ.. ಆದ್ರೆ 1:38ಕ್ಕೆ ಅವರು ಹೋಗಬೇಕಿದ್ದ ವಿಮಾನ ದುರಂತ ಅಂತ್ಯ ಕಂಡಿದೆ. ಅವರು ಅಲ್ಲಿದ್ದಾಗಲೇ ವಿಷಯ ಕಿವಿಗೆ ಬಿದ್ದಾಗ ಒಮ್ಮೆಲೆ ಬೆಚ್ಚಿಬಿದ್ದಿದ್ರಂತೆ..

ಒಟ್ನಲ್ಲಿ, 265 ಜನರ ಜೊತೆಗೆ ಈ ಮೂವರು ಸಾವಿನ ಮನೆ ಸೇರುವ ಸನ್ನಿವೇಶ ಸೃಷ್ಟಿಯಾಗಿತ್ತು. ಆದ್ರೆ, ಪವಾಡ ಸದೃಶದಿಂದ ಮೃತ್ಯುಂಜಯರಾಗಿ ಬಂದಿದ್ದು, ಅವರ ಕುಟುಂಬಸ್ಥರಲ್ಲಿ ಸಂತಸ ಹೆಚ್ಚಿದೆ..

Share.
Leave A Reply