ವಿಮಾನದ ದುರಂತದಲ್ಲಿ ಗುಜರಾತ್‌ನ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ವಿಧಿವಶರಾಗಿದ್ದಾರೆ. ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಇದೇ ಫ್ಲೈಟ್‌ನಲ್ಲಿ ಲಂಡನ್‌ಗೆ ಹೊರಟಿದ್ರು.. ಅಹಮದಾಬಾದ್ ಟು ಲಂಡನ್ ಏರ್ ಇಂಡಿಯಾದ AI-171 ಫ್ಲೈಟ್‌ನಲ್ಲಿ ಪ್ರಯಾಣ ಬೆಳೆಸಿದ್ರು.. ಆದ್ರೆ ನಿನ್ನೆ ನಡೆದ ವಿಮಾನ ದುರಂತ ಎಲ್ಲರನ್ನ ಬೆಚ್ಚಿಬೀಳಿಸಿದೆ. ಏರ್ ಇಂಡಿಯಾದ ವಿಮಾನ ಜನನಿಬಿಡ ಮೇಘನಿ ಪ್ರದೇಶದಲ್ಲಿ ಪತನಗೊಂಡು ವಿಮಾನದಲ್ಲಿದ್ದ 242 ಮಂದಿಯ ಪೈಕಿ 241 ಜನರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಏಕೈಕ ವ್ಯಕ್ತಿ ಮಾತ್ರ ಬದುಕುಳಿದ್ದಾನೆ.

ಇನ್ನು ಏರ್ ಇಂಡಿಯಾದ ವಿಮಾನ ಮೇಘನಿ ಪ್ರದೇಶದ ಮೆಡಿಕಲ್ ಹಾಸ್ಟೇಲ್ ಮೇಲೆ ಪತನಗೊಂಡಿದ್ರಿಂದ ಅಲ್ಲಿದ್ದ ಹಲವರಿಗೆ ಗಂಭೀರ ಗಂಭೀರ ಗಾಯಗಳಾಗಿದ್ರೆ, ಇನ್ನು ಹಲವರು ಬಲಿಯಾಗಿದ್ದಾರೆ. ಒಟ್ಟಾರೆ ದುರಂತದಲ್ಲಿ ಬಲಿಯಾದವರು 266 ಜನರು ಎಂದು ಹೇಳಲಾಗ್ತಿದೆ.. ಇನ್ನು ಇದೇ ವಿಮಾನ ಮಾಜಿ ಸಿಎಂ ವಿಜಯ್ ರೂಪಾನಿ ಅವರು ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.
ಇನ್ನು ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟಿರುವ ಗುಜರಾತ್ ಮಾಜಿ ಮುಖ್ಯಂತ್ರಿ ವಿಜಯ್ ರುಪಾನಿ ಅವರ ಪತ್ನಿ ಅಂಜಲಿ ರುಪಾನಿ, ಇಂದು ಅಹಮಾದಾಬಾದ್ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ. ದುಃಖತಪ್ತ ಅಂಜಲಿ ರುಪಾನಿ, ಅಪಘಾತ ನಡೆದ ಸ್ಥಳವನ್ನು ಪರಿಶೀಲಿಸಿ ಕಣ್ಣೀರಾದರು.
ಇದೇ ವೇಳೇ ಏರ್ ಇಂಡಿಯಾ ವಿಮಾನ ಅಪಘಾತ ನಡೆದ ಸ್ಥಳಕ್ಕೆ ಬ್ರಿಟಿಷ್ ಹೈಕಮಿಷನ್ ಕಚೇರಿಯ ಹಿರಿಯ ಅಧಿಕಾರಿಗಳೂ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
ಇನ್ನು ದಿವಂಗತ ವಿಜಯ್ ರೂಪಾನಿ ಅವರ ನಿವಾಸಕ್ಕೆ ತೆರಳಿದ ಪ್ರಧಾನಿ ಮೋದಿ ಹಾಗೂ ಗುಜರಾತ್ ಸಿಎಂ ಭೂಪೆಂದ್ರ ಪಟೇಲ್ ರೂಪಾನಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಈ ಕುರಿತು ಪ್ರಧಾನಿ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ವಿಜಯ್‌ಭಾಯ್ ನಮ್ಮ ನಡುವೆ ಇಲ್ಲ ಎಂಬುದು ಊಹಿಸಲೂ ಸಾಧ್ಯವಿಲ್ಲ. ನಾನು ಅವರನ್ನು ದಶಕಗಳಿಂದ ಬಲ್ಲೆ. ನಾವು ಕೆಲವು ಅತ್ಯಂತ ಸವಾಲಿನ ಸಮಯಗಳಲ್ಲಿಯೂ ಸೇರಿದಂತೆ, ಹೆಗಲಿಗೆ ಹೆಗಲು ಕೊಟ್ಟು ಒಟ್ಟಿಗೆ ಕೆಲಸ ಮಾಡಿದ್ದೇವೆ. ವಿಜಯ್‌ಭಾಯ್ ವಿನಮ್ರ ಮತ್ತು ಕಠಿಣ ಪರಿಶ್ರಮಿಯಾಗಿದ್ದರು, ಪಕ್ಷದ ಸಿದ್ಧಾಂತಕ್ಕೆ ದೃಢವಾಗಿ ಬದ್ಧರಾಗಿದ್ದರು. ಅವರು ಸಂಘಟನೆಯಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು ಮತ್ತು ಗುಜರಾತ್ ಮುಖ್ಯಮಂತ್ರಿಯಾಗಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು ಎಂದು ಭಾವುಕ ನುಡಿಗಳ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ.
