ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಸಿಹಿಸುದ್ದಿ ನೀಡಿದ್ದಾರೆ. ಇತ್ತೀಚೆಗೆ ದಿ ಕಪಿಲ್ ಶರ್ಮಾ ಶೋನಲ್ಲಿ ಪರಿಣಿತಿ ಗರ್ಭಧಾರಣೆಯ ಬಗ್ಗೆ ಸುಳಿವು ನೀಡಿದ ದಂಪತಿಗಳು, ಅಂತಿಮವಾಗಿ ತಮ್ಮ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ಘೋಷಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪರಿಣಿತಿ ಚೋಪ್ರಾ ಈ ಗುಡ್‌ನ್ಯೂಸ್ ಅನ್ನ ಹಂಚಿಕೊಂಡಿದ್ದಾರೆ.
ಮಗುವಿನ ಪಾದಗಳಿರುವ ಕ್ಯೂಟ್ ಆದ ಕೇಕ್ ಜೊತೆಗೆ ಅವರ್ ಲಿಟಲ್ ಯೂನಿವರ್ಸ್ ಆನ್ ಇಟ್ಸ್ ವೇ ಅಂತಾ ಕ್ಯಾಪ್ಷನ್ ಕೊಟ್ಟಿದ್ದಾರೆ. ಬಾಲಿವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ಪರಿಣಿತಿ ಹಾಗೂ ರಾಘವ್ ಕೂಡ ಸೇರಿದ್ದಾರೆ. ಆಪ್ ಸಂಸದ ಆಗರುವ ರಾಘವ್ ಚಡ್ಡಾ ಅವ್ರನ್ನ 2023ರಲ್ಲಿ ಪರಿಣಿತಿ ಮದುವೆ ಆದ್ರು.
ಇದೀಗ ಇವರ ಸುಖ ದಾಂಪತ್ಯಕ್ಕೆ 2 ವರ್ಷಗಳಾಗಿದ್ದು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನು, ಪರಿಣಿತಿ ಚೋಪ್ರಾ ಈ ವಿಚಾರವನ್ನ ರಿವೀಲ್ ಮಾಡ್ತಿದ್ದಂತೆ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಪರಿಣಿತಿ ಅವರ ಅಕ್ಕ ಪ್ರಿಯಾಂಕಾ ಚೋಪ್ರಾ, ಕತ್ರೀನಾ ಕೈಫ್, ಅನನ್ಯಾ ಪಾಂಡೆ ಸೇರಿದಂತೆ ಹಲವು ಸ್ಟಾರ್ ನಟರು ಇನ್‌ಸ್ಟಾಗ್ರಾಮ್‌ನಲ್ಲಿ ಶುಭಕೋರಿದ್ದಾರೆ.
Read Also : ರಾಜಸ್ಥಾನದ ಬೆಡಗಿಗೆ.. ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ..!