ಕನ್ನಡದ ಯುವ ನಟಿಗೆ ನಿರ್ಮಾಪಕ ಹಾಗೂ ನಟ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಸಂಭಾವನೆಯ ಹಣ ನೀಡದೆ ವಂಚಿಸಿದ್ದ ಆರೋಪದ ಮೇಲೆ ಹೇಮಂತ್ ಕುಮಾರ್‌ನನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ನಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆರೋಪಿ ಕಾಟದಿಂದ ಬೇಸತ್ತ ನೊಂದ ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತನಗಾದ ನೋವು ತೋಡಿಕೊಂಡಿದ್ದಾರೆ. 2022ರಲ್ಲಿ ಹೇಮಂತ್ ನಟಿಯನ್ನು ಪರಿಚಯಿಸಿಕೊಂಡಿದ್ದ. ತಾನು ನಿರ್ಮಿಸುತ್ತಿರುವ ರಿಚ್ಚಿ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಅವಕಾಶ ನೀಡುವುದಾಗಿ ಹೇಳಿ ಆಫರ್ ನೀಡಿದ್ದ. ಈ ಸಂಬಂಧ, ನಟಿಗೆ 2 ಲಕ್ಷ ರೂಪಾಯಿ ಸಂಭಾವನೆ ನೀಡುವುದಾಗಿ ಅಗ್ರಿಮೆಂಟ್ ಕೂಡ ಆಗಿತ್ತು. ಆರಂಭದಲ್ಲಿ ಮುಂಗಡವಾಗಿ 60 ಸಾವಿರ ಹಣವನ್ನು ಸಹ ಹೇಮಂತ್ ನೀಡಿದ್ದ. ಆದರೆ, ಸಿನಿಮಾ ಶೂಟಿಂಗ್ ಪದೇಪದೆ ತಡ ಆಗಿದ್ದರಿಂದ ನಟಿಗೆ ಬೇಸರವಾಗಿತ್ತು. ಈ ಸಂದರ್ಭದಲ್ಲಿ ಆರೋಪಿ ಹೇಮಂತ್‌ನ ವಿಕೃತ ಮನಸು ಬಯಲಾಗಿದೆ. ಚಿತ್ರದಲ್ಲಿ ಅಶ್ಲೀಲ ಬಟ್ಟೆಗಳನ್ನು ಧರಿಸುವಂತೆ ಮತ್ತು ಅಸಭ್ಯವಾಗಿ ನಟಿಸುವಂತೆ ನಟಿಯ ಮೇಲೆ ಒತ್ತಾಯ ಮಾಡಿದ್ದಾನೆ. ಇದನ್ನು ವಿರೋಧಿಸಿದ್ದಕ್ಕೆ ಕಿರುಕುಳ ಮುಂದುವರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ..

ಹೇಮಂತ್ ಅಸಭ್ಯವಾಗಿ ವರ್ತಿಸಿದ್ದಷ್ಟೇ ಅಲ್ಲ, ಆಕೆಯನ್ನು ಲೈಂಗಿಕವಾಗಿ ಅಸಭ್ಯ ರೀತಿಯಲ್ಲಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ಸಿನಿಮಾ ಪ್ರಚಾರಕ್ಕಾಗಿ ಮುಂಬೈಗೆ ಕರೆದುಕೊಂಡು ಹೋದಾಗಲೂ ಆತ ತನ್ನ ಕಿರುಕುಳ ಮುಂದುವರಿಸಿದ್ದ. ನಟಿ ಆತನ ಈ ಕೃತ್ಯಗಳನ್ನು ಸಂಪೂರ್ಣವಾಗಿ ನಿರಾಕರಿಸಿ, ದೂರ ಉಳಿಯಲು ಪ್ರಯತ್ನಿಸಿದಾಗ, ಹೇಮಂತ್ ರೌಡಿಗಳನ್ನು ಬಿಟ್ಟು ಬೆದರಿಕೆ ಹಾಕಿದ್ದಾನೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಅಲ್ದೇ, ಕಿರುಕುಳ ಮತ್ತು ಬೆದರಿಕೆ ಜೊತೆಗೆ, ಸಂಭಾವನೆ ಹಣ ನೀಡದೇ ಆರ್ಥಿಕ ವಂಚನೆಯನ್ನೂ ಮಾಡಿದ್ದಾನೆ. ಸಿನಿಮಾ ಚಿತ್ರೀಕರಣ ಮುಗಿದ ಬಳಿಕ ಹೇಮಂತ್ ನೀಡಿದ್ದ ಸಂಭಾವನೆಯ ಚೆಕ್ ಬೌನ್ಸ್ ಆಗಿದೆ. ಇದರಿಂದ ನಟಿಗೆ ಹಣವೂ ಸಿಕ್ಕಿಲ್ಲ. ಬದಲಿಗೆ ಮಾನಸಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾಳೆ. ಇನ್ನೊಂದು ಶಾಕಿಂಗ್‌ ವಿಚಾರ ಅಂದ್ರೆ, ಚಿತ್ರದ ಸೆನ್ಸಾರ್ ಆಗದ ಕೆಲವು ದೃಶ್ಯಗಳನ್ನು ಆರೋಪಿ ತನ್ನ ಸ್ವಾರ್ಥಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ ಎಂಬ ಮತ್ತೊಂದು ಆರೋಪವೂ ನಟಿಯ ದೂರಿನಲ್ಲಿದೆ.

Read Also : ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿ : ನವೆಂಬರ್ 6, 11ಕ್ಕೆ ಎಲೆಕ್ಷನ್‌‌

Share.
Leave A Reply