ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪಾ ವಿದೇಶದಲ್ಲಿ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಕೊಲೆ ಪ್ರಕರಣ ಸಂಬಂಧ ದರ್ಶನ್‌ಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿತ್ತು. ಅದ್ರಂತೆ ವಿದೇಶದಲ್ಲಿ ಶೂಟಿಂಗ್ ನಡೆಸಲು ಕೋರ್ಟ್‌ ಅನುಮತಿಯೂ ನೀಡಿತ್ತು. ಈ ಹಿನ್ನೆಲೆಯಲ್ಲಿ ದರ್ಶನ್‌ ಡೆವಿಲ್‌ ಶೂಟಿಂಗ್‌ಗಾಗಿ ವಿದೇಶ ಪ್ರವಾಸದಲ್ಲಿದ್ದಾರೆ. ಡೆವಿಲ್‌ ಸಿನಿಮಾದ ಹಾಡೊಂದರ ಶೂಟಿಂಗ್‌ಗಾಗಿ ಥೈಲ್ಯಾಂಡ್‌ ತೆರಳಿರುವ ನಟ ದರ್ಶನ್‌, ಫಾರಿನ್‌ ಹುಡ್ಗೀರ ಜೊತೆ ಫೋಟೋಗೆ ಪೋಸ್‌ ನೀಡಿದ್ದಾರೆ.

ಥೈಲ್ಯಾಂಡ್ ತೆರಳಿದ ಆರೋಪಿ ದರ್ಶನ್‌
ಕೊಲೆ ಆರೋಪಿಯಾಗಿ ಜಾಮೀನು ಪಡೆದ ಬಳಿಕ ದರ್ಶನ್ಗೆ, ಇದೇ ಮೊದಲ ವಿದೇಶ ಪ್ರಯಾಣ. ಸದ್ಯ ನಟ ದರ್ಶನ್ ಥೈಲ್ಯಾಂಡ್ ಪ್ರವಾಸದಲ್ಲಿದ್ದಾರೆ. ಪುತ್ರ ವಿನೀಶ್ ಜೊತೆಯಲ್ಲಿ ವಿದೇಶಕ್ಕೆ ನಿನ್ನೆ ರಾತ್ರಿ ಪ್ರಯಾಣಿಸಿದ್ದು, ಡೆವಿಲ್ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಚಿತ್ರದ ನಿರ್ದೇಶಕ ಪ್ರಕಾಶ್ ಜಯರಾಂ ಮತ್ತು ಚಿತ್ರತಂಡದೊಂದಿಗೆ ವಿದೇಶಕ್ಕೆ ತೆರಳಿದ್ದಾರೆ. ಐದು ದಿನ ಸಿನಿಮಾದ ಶೂಟಿಂಗ್ ಇದ್ದು, ಒಟ್ಟು ಹತ್ತು ದಿನ ವಿದೇಶದಲ್ಲಿರಲಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Share.
Leave A Reply