ಎಲ್ಲರಿಗೂ ನಮಸ್ಕಾರ! ನಾನು ಧ್ರುವ ಸರ್ಜಾ. ನಾನು ಇಂದು ನಿಮ್ಮಲ್ಲಿ ಕೇಳಿಕೊಳ್ಳುತ್ತಿರುವುದಕ್ಕೆ ಕಾರಣ, 2 ವರ್ಷದ ಮಗು ಸಾಯಿ ಚಿರಾಗ್ SMA ಎಂಬ ಅಪರೂಪದ ಅನುವಂಶಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದಾನೆ – ಇದು ಮಗುವಿನ ಚಲಿಸುವ ಮತ್ತು ಉಸಿರಾಡುವ ಸಾಮರ್ಥ್ಯವನ್ನು ಕಸಿದುಕೊಳ್ಳುವ ಕಾಯಿಲೆಯಾಗಿದೆ.ಭಾರತದಲ್ಲಿ ಇದರ ಚಿಕಿತ್ಸೆಗೆ 16 ಕೋಟಿ ರೂಪಾಯಿ ವೆಚ್ಚವಾಗುತ್ತದೆ.ವಿದೇಶದಲ್ಲಿ, ಇದೇ ಚಿಕಿತ್ಸೆಗೆ ಕೇವಲ 2 ಕೋಟಿ ರೂಪಾಯಿ ಖರ್ಚಾಗುತ್ತದೆ.ಆತನ ಕುಟುಂಬವು ತಮ್ಮ ಬಳಿ ಇದ್ದದ್ದನ್ನೆಲ್ಲಾ ಖರ್ಚು ಮಾಡಿದೆ. ಆದರೂ ಅವರಿಗೆ ಇನ್ನೂ ಸಹಾಯದ ಅಗತ್ಯವಿದೆ. ದಯವಿಟ್ಟು ಈಗಲೇ ನಿಮ್ಮ ಸ್ಕ್ರೀನ್ ಮೇಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮತ್ತು ದೇಣಿಗೆ ನೀಡಿ. ನಿಮ್ಮ 100 ರೂಪಾಯಿ ಕೂಡ ದೊಡ್ಡ ಬದಲಾವಣೆ ತರಬಹುದು ಮತ್ತು ನಿಮಗೆ ದೇಣಿಗೆ ನೀಡಲು ಸಾಧ್ಯವಾಗದಿದ್ದರೆ, ದಯವಿಟ್ಟು ಈ ವಿಡಿಯೋವನ್ನು ಶೇರ್ ಮಾಡಿ. ನಿಮ್ಮ ಸ್ಟೋರಿ, ವಾಟ್ಸಾಪ್ ಗ್ರೂಪ್‌ಗಳು ಮತ್ತು ಎಲ್ಲೆಡೆ ಹಂಚಿಕೊಳ್ಳಿ. ನೀವು ಮಾಡುವ ಒಂದು ಶೇರ್ ಈ ಮಗುವಿನ ಜೀವ ಉಳಿಸಬಹುದು ಎಂದು ಮನವಿ ಮಾಡಿದ್ದಾರೆ.

ಧ್ರುವ ಸರ್ಜಾ ನೆರವಿಗಾಗಿ ಮನವಿ ಮಾಡಿರುವ ವಿಡಿಯೋದಲ್ಲಿ ಮಗು ಹಾಗೂ ಮಗುವಿನ ಪೋಷಕರು ಕೂಡ ಇದ್ದಾರೆ. ಅವರ ಸಮ್ಮುಖದಲ್ಲಿಯೇ ಧ್ರುವ ಸರ್ಜಾ ನೆರವು ಕೋರಿದ್ದಾರೆ. ಧ್ರುವ ಸರ್ಜಾ ಅವರ ಈ ಸಹಾಯ ಮನೋಭಾವವನ್ನು ಅವರ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕೂಡ ಭೇಷ್ ಎಂದಿದ್ದಾರೆ.

ಸಹಾಯಮಾಡಲು ಸಂಪರ್ಕಿಸಿ
Phone number : 8142497703 / 9743393397

Share.
Leave A Reply