ಯುದ್ಧಕಾಂಡ ಸಿನಿಮಾ ಸಕ್ಸಸ್‌ಗಾಗಿ ಸಾಕಷ್ಟು ಯುದ್ಧ ಮಾಡಿದ್ದ ಸ್ಯಾಂಡಲ್‌ವುಡ್‌ ನಟ ಅಜಯ್‌ ರಾವ್‌ ದಾಂಪತ್ಯದಲ್ಲಿ ದೊಡ್ಡ ಯುದ್ಧವೇ ನಡೆದು ಹೋಗಿದೆ… 11 ವರ್ಷಗಳಿಂದ ಒಟ್ಟಾಗಿದ್ದ ಅಜಯ್ ರಾವ್ ಹಾಗೂ ಸ್ವಪ್ನ ರಾವ್ ಮಧ್ಯೆ ಬಿರುಕು ಮೂಡಿದೆ.. ಹೌದು.. ಪ್ರೀತಿಸಿ ಮದುವೆ ಆಗಿದ್ದ ಅಜಯ್ ರಾವ್ ಹಾಗೂ ಸ್ವಪ್ನ ರಾವ್ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಇದೀಗ ಈ ಸುದ್ದಿ ಸ್ಯಾಂಡಲ್‌ವುಡ್ ಸೇರಿದಂತೆ, ಹಲವು ಕಡೆಗಳಲ್ಲಿ ಬಿರುಗಾಳಿಯಂತೆ ಹಬ್ಬುತ್ತಿದೆ.

ನಟ ಅಜಯ್‌ ರಾವ್‌ ದಾಂಪತ್ಯದಲ್ಲಿ ಬಿರುಕು..!

ನಟ ಅಜಯ್ ರಾವ್ ವಿರುದ್ಧ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಅಂತಾ ಹೇಳಲಾಗುತ್ತಿದೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟು ಬಹಿರಂಗವಾಗಬೇಕಿದೆ. 2014ರಲ್ಲಿ ಅಜಯ್ ರಾವ್ ಹಾಗೂ ಸಪ್ನಾ ಪ್ರೀತಿಸಿ ಮದುವೆ ಆಗಿದ್ದರು. ಹೊಸಪೇಟೆಯಲ್ಲಿ ಆಪ್ತರು, ಸಂಬಂಧಿಕರ ಎದುರು ಸರಳವಾಗಿ ಈ ಜೋಡಿಯ ವಿವಾಹ ನಡೆದಿತ್ತು.. ಈ ದಂಪತಿಗೆ ಚರಿಷ್ಮಾ ಎಂಬ ಮಗಳಿದ್ದಾಳೆ. ಇದೀಗ ಇಬ್ಬರೂ ಡಿವೋರ್ಸ್‌ ಕೋರಿ ಅರ್ಜಿ ಸಲ್ಲಿಸಿರೋದು ಬಾರಿ ಕುತೂಹಲ ಕೆರಳಿಸಿದೆ..

ಇನ್ನು, ಅಜಯ್‌ ರಾವ್‌ 2003ರಲ್ಲಿ ನಾಯಕ ನಟನಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ರು. ಜೋಗಿ ಪ್ರೇಮ್‌ ನಿರ್ದೇಶನದ ಎಕ್ಸ್​ಕ್ಯೂಸ್ ಮೀ ಸಿನಿಮಾ ಮೂಲಕ ಅಜಯ್ ರಾವ್ ನಾಯಕ ನಟನಾಗಿ ಗುರುತಿಸಿಕೊಂಡಿದ್ರು. ಅದಕ್ಕೂ ಮೊದಲು ಸುದೀಪ್ ನಟನೆಯ ಕಿಚ್ಚ ಸಿನಿಮಾದಲ್ಲಿ ಸುದೀಪ್ ಗೆಳೆಯನ ಪಾತ್ರದಲ್ಲಿ ಮಿಂಚಿದ್ದರು. ಇದಾದ ನಂತರ ತಾಜ್ ಮಹಲ್, ಪ್ರೇಮ್ ಕಹಾನಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣನ್ ಮ್ಯಾರೇಜ್ ಸ್ಟೋರಿ, ಕೃಷ್ಣ-ಲೀಲಾ ಇನ್ನೂ ಹಲವು ಹಿಟ್ ಸಿನಿಮಾಗಳಲ್ಲಿ ಅಜಯ್ ನಟಿಸಿದ್ದಾರೆ.

ಕೋರ್ಟ್‌ ಮೆಟ್ಟಿಲೇರಿದ್ಯಾಕೆ ಪತ್ನಿ?

ಇನ್ನು, ಸತತ ಸೋಲುಗಳಿಂದ ಕಂಗೆಟ್ಟಿದ್ದ ಅಜಯ್‌ ರಾವ್‌, ಇದೇ ವರ್ಷ ರಿಲೀಸ್‌ ಆಗಿದ್ದ ಯುದ್ಧಕಾಂಡ 2 ಸಿನಿಮಾ ದೊಡ್ಡ ಗೆಲುವು ತಂದುಕೊಂಡಿತ್ತು.. ಆ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಅಜಯ್‌ ರಾವ್, ತುಂಬಾ ಹಣ ಖರ್ಚು ಮಾಡಿದ್ದರು ಎನ್ನಲಾಗಿತ್ತು.. ಅಲ್ಲದೇ, ಯುದ್ಧಕಾಂಡ 2 ಸಿನಿಮಾಗಾಗಿ ಎಲ್ಲವನ್ನೂ ಮಾರಿಕೊಂಡಿದ್ದೇನೆ ಅಂತಾ ಅಜಯ್‌ ರಾವ್‌ ಹೇಳಿಕೊಂಡಿದ್ದರು.. ಐಷಾರಾಮಿ ಕಾರನ್ನೂ ಕೂಡ ಸಿನಿಮಾಗಾಗಿ ಸೇಲ್‌ ಮಾಡಿದ್ದು, ಆ ಕಾರಿನ ಮುಂದೆ ನಿಂತು ಅಜಯ್‌ ರಾವ್‌ ಮಗಳು ಅತ್ತಿದ್ದ ದೃಶ್ಯ ಎಲ್ಲೆಡೆ ವೈರಲ್‌ ಆಗಿತ್ತು.. ಇದೆಲ್ಲಾ ಆದ ನಂತರ ಸಿನಿಮಾ ರಿಲೀಸ್‌ ಆಗಿ ಯುದ್ಧಕಾಂಡ 2 ಸಿನಿಮಾ ಸಕ್ಸಸ್‌ ಕಂಡಿತ್ತು.

ಒಟ್ನಲ್ಲಿ, 11 ವರ್ಷಗಳಿಂದ ಜೊತೆಗಿದ್ದ ಅಜಯ್‌ ರಾವ್‌ ಹಾಗೂ ಸ್ವಪ್ನಾ ರಾವ್‌ ಈಗ ದೂರ ದೂರ ಆಗಲು ನಿರ್ಧರಿಸಿದ್ದಾರೆ. ಆದ್ರೆ, ಸ್ವಪ್ನ ರಾವ್‌, ಅಜಯ್‌ ರಾವ್‌ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್‌ ಹಾಕಿರೋದು ಭಾರಿ ಸಂಚಲನ ಸೃಷ್ಟಿಸಿದೆ..

Read Also : ದರ್ಶನ್‌ ಮತ್ತೆ ಅರೆಸ್ಟ್‌.. ಕೊನೆಗೂ ಫಲ ಕೊಡಲಿಲ್ಲ ಪತ್ನಿ ಹರಕೆ, ಪೂಜೆ : ದರ್ಶನ್‌ ಬೇಲ್‌ ರದ್ದಾಗಲು ಕಾರಣಗಳೇನು?

Share.
Leave A Reply