ಇಟಾನಗರ: ಸಾವಿರಕ್ಕೂ ಹೆಚ್ಚು ಅಡಿ ಪ್ರಪಾತಕ್ಕೆ ಟ್ರಕ್ ವೊಂದು ಉರುಳಿ ಬಿದ್ದ ಪರಿಣಾಮ ಸುಮಾರು ಕನಿಷ್ಠ 18 ಜನ ಕಾರ್ಮಿಕರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಈ ಘಟನೆ ಅರುಣಾಚಲ ಪ್ರದೇಶ(Arunachal Pradesh) ದ ಅಂಜಾವ್ ನಲ್ಲಿ ನಡೆದಿದೆ. ಚಾಲಕನ ಆಜಾಗರೂಕತೆಯಿಂದಾಗಿ ಸುಮಾರು 1 ಸಾವಿರ ಅಡಿ ಪ್ರಪಾತಕ್ಕೆ ಟ್ರಕ್ ಉರುಳಿ ಬಿದ್ದಿದೆ. ಘಟನೆಯಲ್ಲಿ ಅಸ್ಸಾಂನ (Assam) ಟಿನ್ಸುಕಿಯಾ ಜಿಲ್ಲೆಯ 18 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ನಿರ್ಮಾಣ ಹಂತದ ಸೈಟ್ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಕಳೆದ ಎರಡು ದಿನಗಳ ಹಿಂದೆಯೇ ನಡೆದಿದ್ದು, ಯಾರ ಗಮನಕ್ಕೂ ಬಂದಿಲ್ಲ. ಆದರೆ, ಎರಡು ದಿನಗಳ ನಂತರ ಅಪಘಾತಕ್ಕೀಡಾಗಿದ್ದ ವ್ಯಕ್ತಿಯೋರ್ವ ಜಿಆರ್ ಇಎಫ್ ಶಿಬಿರ ತಲುಪಿದ ನಂದರ ಮಾಹಿತಿ ಗೊತ್ತಾಗಿದೆ. ನಂತರ ಕಾರ್ಯಾಚರಣೆ ನಡೆಸಲಾಗಿದೆ.
ಸುಮಾರು 200 ಮೀ. ಕೆಳಗೆ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಟ್ರಕ್ನ ಅವಶೇಷಗಳು ಪತ್ತೆಯಾಗಿವೆ. ಇಲ್ಲಿಯವರೆಗೆ 18 ಶವಗಳು ಪತ್ತೆಯಾಗಿವೆ. ಈ ಟ್ರಕ್ ನಲ್ಲಿ 22 ಜನರಿದ್ದರು ಎಂದು ತಿಳಿದು ಬಂದಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎನ್ನಲಾಗಿದೆ.
