ಯಾದಗಿರಿ: 1 ಕೋಟಿ ರೂ.ಗೂ ಅಧಿಕ ಮೌಲ್ಯದ ಹತ್ತಿ ಸುಟ್ಟು ಭಸ್ಮವಾಗಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ (Yadagiri) ಜಿಲ್ಲೆಯ ಶಹಾಪುರ (Shahapura) ತಾಲೂಕಿನ ಸಾದ್ಯಪುರ ಹತ್ತಿರ ಈ ಘಟನೆ ನಡೆದಿದೆ. ಸಾದ್ಯಾಪುರ ಗ್ರಾಮದ ಹತ್ತಿರ ಇದ್ದ ಶ್ರೀಲಕ್ಷ್ಮೀ ಬಾಲಾಜಿ ಕಾಟನ್ ಮಿಲ್ ನಲ್ಲಿ ಈ ಘಟನೆ ನಡೆದಿದೆ. ಈ ಮಿಲ್ ಸಾಹೇಲ್ ಎಂಬುವವರಿಗೆ ಸೇರಿದ್ದು ಎನ್ನಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಬೆಂಕಿಯಿಂದಾಗಿ 60 ಟನ್ ಗೂ ಅಧಿಕ ಕಾಟನ್ ಬೆಂಕಿಗೆ ಆಹುತಿಯಾಗಿದೆ. ಕಾಟನ್ ಮಿಲ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಗೆ ಹತ್ತಿ ಎಲ್ಲ ಸುಟ್ಟು ಭಸ್ಮವಾಗಿದೆ. ಅಲ್ಲದೇ, ಮಿಲ್ ನಲ್ಲಿದ್ದ ಹಲವು ಯಂತ್ರಗಳು ಸೇರಿದಂತೆ ಇನ್ನಿತರ ವಸ್ತುಗಳು ಕೂಡ ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ, ಭೇಟಿ ನೀಡಿ ನಂದಿಸಲು ಯತ್ನಿಸಿದ್ದಾರೆ.
