ಬೆ. ಡಿ.02 : ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಆಂತರಿಕ ಭಿನ್ನಮತದ ಕುರಿತಾದ ಊಹಾಪೋಹಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಡಿಸಿಎಂ ನಿವಾಸದಲ್ಲಿ ನಡೆದ ಮಹತ್ವದ ಉಪಾಹಾರ ಕೂಟದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಉಭಯ ನಾಯಕರು, “ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ. ಒಂದೇ ಪಕ್ಷ ಒಂದೇ ಸಿದ್ಧಾಂತ ಎಂದು ಸ್ಪಷ್ಟಪಡಿಸುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.

ಉಪಹಾರ ಬಳಿಕ ಸಿಎಂ ಸಿದ್ದು ಸ್ಫೋಟಕ ಹೇಳಿಕೆ :
ಡಿಸಿಎಂ ಡಿಕೆಶಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಬ್ರೇಕ್‌ಫಾಸ್ಟ್ ಮೀಟಿಂಗ್ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಉಭಯ ನಾಯಕರು, ಮುಂಬರುವ ಚಳಿಗಾಲ ಅಧಿವೇಶನ ವೇಳೆ ವಿಪಕ್ಷಗಳನ್ನು ಎದುರಿಸಲು ಸನ್ನದ್ದರಾಗಿರುವ ಕುರಿತು ಮಾತನಾಡಿದರು. ಒಳಗೊಳಗೆ ಬುಸುಗುಡುತ್ತಿರುವ ಸಿಎಂ ಕುರ್ಚಿ ಫೈಟ್ ನಡುವೆ, ಡಿಕೆ ಶಿವಕುಮಾರ್ ಸಿಎಂ ಯಾವಾಗ ಆಗ್ತಾರೆ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ಖಾರವಾಗಿಯೇ ಉತ್ತರಿಸಿರುವ ಸಿದ್ದರಾಮಯ್ಯ ʼಹೈಕಮಾಂಡ್ ಹೇಳಿದಾಗ ಆಗ್ತಾರೆʼ ಎಂದು ಸ್ಫೋಟಕ ಹೇಳಿಕೆ ನೀಡಿರುವುದು ಮತ್ತೊಮ್ಮೆ ಕುತೂಹಲಕ್ಕೆ ಕಾರಣವಾಗಿದೆ.
