EPFO ಗ್ರಾಹಕರಿಗೆ ಭರ್ಜರಿ ನ್ಯೂಸ್.. ನೌಕರರ ಭವಿಷ್ಯ ನಿಧಿ ಸಂಸ್ಥೆ ತನ್ನ ಏಳು ಕೋಟಿಗೂ ಹೆಚ್ಚು ಚಂದಾದಾರರಿಗೆ ಶೇಕಡಾ ನೂರರಷ್ಟು ಪಿಎಪ್‌ ವಿದ್‌ಡ್ರಾವಲ್‌ಗೆ ಅವಕಾಶ ಕೊಟ್ಟಿದೆ. ಇನ್ಮೇಲೆ ಸದಸ್ಯರು ಭವಿಷ್ಯ ನಿಧಿಯಲ್ಲಿ ಅರ್ಹ ಬಾಕಿ ಮೊತ್ತದ 100%ವರೆಗೆ ಸಂಗ್ರಹಿಸಲು ಸಾಧ್ಯವಾಗುತ್ತೆ. ಇದರಲ್ಲಿ ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರ ಪಾಲೂ ಸೇರಿದೆ. ಇನ್ನು ವಿದ್‌ಡ್ರಾವಲ್‌ ಲಿಮಿಟ್‌ಗೂ ಕೂಡ ರಿಲ್ಯಾಕ್ಸೇಷನ್‌ ನೀಡಲಾಗಿದೆ. ಈ ಮೊದ್ಲು ವಿವಾಹ ಮತ್ತು ಶಿಕ್ಷಣಕ್ಕೆ ಕೇವಲ ಮೂರು ಬಾರಿ ಮಾತ್ರ ವಿದ್‌ಡ್ರಾ ಮಾಡೋದಿಕ್ಕೆ ಅವಕಾಶ ಇತ್ತು. ಈ ಮಿತಿಯನ್ನ ಸಡಿಲಗೊಳಿಸಲಾಗಿದ್ದು, ಇದೀಗ ಶಿಕ್ಷಣ ಹಿಂಪಡೆಯುವಿಕೆಗೆ 10 ಬಾರಿ ಮತ್ತು ಮದುವೆಗೆ ಐದು ಬಾರಿ ವಿದ್‌ಡ್ರಾ ಮಾಡ್ಬಹುದು. ಇನ್ನು, ಪಾರ್ಷಿಯಲ್‌ ವಿದ್‌ಡ್ರಾವಲ್‌ಗೆ ಉದ್ಯೋಗಿ ಕನಿಷ್ಠ 12 ತಿಂಗಳುಗಳ ಕಾಲ ಸೇವೆಯನ್ನ ಸಲ್ಲಿಸಿರಬೇಕು. ಅಂದ್ರೆ ಕೆಲಸಕ್ಕೆ ಜಾಯಿನ್‌ ಆಗಿ ಮಿನಿಮಮ್‌ ಒಂದು ವರ್ಷ ಆಗಿರ್ಬೇಕು. ಈ ಹಿಂದೆ, ವಿಶೇಷ ಸಂದರ್ಭಗಳಲ್ಲಿ ಅಂದ್ರೆ ನೈಸರ್ಗಿಕ ವಿಕೋಪ, ಸಂಸ್ಥೆಗಳ ಮುಚ್ಚುವಿಕೆ, ನಿರಂತರ ನಿರುದ್ಯೋಗ, ಸಾಂಕ್ರಾಮಿಕ ರೋಗ ಹರಡುವಿಕೆ ಮುಂತಾದ ಸಂದರ್ಭಗಳಲ್ಲಿ ಭಾಗಶಃ ಹಿಂಪಡೆಯುವಿಕೆಗೆ ಕಾರಣಗಳನ್ನು ಸ್ಪಷ್ಟಪಡಿಸಬೇಕಾಗಿತ್ತು. ಈಗ, ಈ ವರ್ಗದ ಅಡಿಯಲ್ಲಿ ಸದಸ್ಯರು ಯಾವುದೇ ಕಾರಣಗಳನ್ನು ನೀಡದೆ ಅರ್ಜಿ ಸಲ್ಲಿಸಬಹುದು.

Read Also : RSS ಬ್ಯಾನ್‌ ಮಾಡ್ಬೇಕು ಎಂದಿದ್ದ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಕರೆ : ಮೋದಿ ಅವರ ತಾಯಿಗೆ ಈ ರೀತಿ ನಿಂದಿಸುವುದನ್ನು ಬಿಜೆಪಿಗರು ಒಪ್ಪುತ್ತಾರೆಯೆ ಎಂದು ಪ್ರಶ್ನೆ..?

Share.
Leave A Reply