ಮುಗ್ದ ಮನಸ್ಸು, ಯಾರಿಗೂ ಕೇಡು ಬಯಸದ ಪರಿಶುದ್ಧ ಹೃದಯ, ಬೆಳೆದಿದ್ದು ಕಡುಬಡತನದಲ್ಲಿ ಆದ್ರೂ ಈಗ ಬಿಗ್ಬಾಸ್ ಮನೆಯಲ್ಲಿ ಸಖತ್ ಸೌಂಡ್ ಮಾಡ್ತಿರೋ ಮಲ್ಲಮ್ಮ ಯಾರು? ಉತ್ತರ ಕರ್ನಾಟಕದಿಂದ ಬಿಗ್ಬಾಸ್ ಮನೆಗೆ ಬಂದಿದ್ದು ಹೇಗೆ? ಮಲ್ಲಮ್ಮ ಬದುಕಿನಲ್ಲಿ ಪಟ್ಟಿರೋ ಕಷ್ಟಗಳೇನು ಗೊತ್ತಾ? ಕಳೆದ ಬಾರಿ ಉತ್ತರ ಕರ್ನಾಟಕ ಪ್ರತಿಭೆ ಹನುಮಂತ ಅವರಿಗೆ ಬಿಗ್ ಬಾಸ್ನಲ್ಲಿ ಅವಕಾಶ ನೀಡಲಾಗಿತ್ತು. ದೊಡ್ಮನೆಗೆ ಬಂದಿದ್ದೂ ಅಲ್ಲದೆ, ಗೆದ್ದು ಕಪ್ ಕೊಂಡೊಯ್ದರು. ಅದ್ರಂತೆ ಈ ಬಾರಿ ಮಲ್ಲಮ್ಮ ಅವರು ಬಿಗ್ ಬಾಸ್ಗೆ ಬಂದಿದ್ದಾರೆ. ಮಲ್ಲಮ್ಮ ಅವರು ಉತ್ತರ ಕರ್ನಾಟಕದ ಪ್ರತಿಭೆ. ಯಾದಗಿರಿ ಜಿಲ್ಲೆಯ, ಸುರಪುರ ತಾಲೂಕಿನ ಸಣ್ಣ ಹಳ್ಳಿಯವರು. ಅವರು ತಮ್ಮ ಮಾತಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದರು. ಸದ್ಯ ಬಿಗ್ಬಾಸ್ ಅಖಾಡದಲ್ಲಿ ಸೌಂಡ್ ಮಾಡ್ತಿರೋ ಮಲ್ಲಮ್ಮ ಪಟ್ಟಿರುವ ಕಷ್ಟ ಅಷ್ಟಿಲ್ಲ. ಬಿಲ್ಡಿಂಗ್ ಕೆಲಸ, ಹೊಲದ ಕೆಲಸ.. ಎಲ್ಲಾ ತರಹದ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಮಲ್ಲಮ್ಮಗೆ 15ನೇ ವಯಸ್ಸಿಗೆ ಮದುವೆ ಮಾಡಿದ್ರಂತೆ. ಆಮೇಲೆ ಇಬ್ಬರು ಮಕ್ಕಳು, ಕುಡುಕ ಗಂಡನ ಕಟ್ಟಿಕೊಂಡು ಮಲ್ಲಮ್ಮ ಪಟ್ಟ ಸಾಹಸ ಹೇಳತೀರದು. ಅರ್ಧ ಜೀವನಕ್ಕೆ ಗಂಡನೂ ಹೋದಮೇಲೆ ಮಕ್ಕಳಿಗಾಗಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ರು. 12 ವರ್ಷಗಳ ಹಿಂದೆ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದಿದ್ದರು. ಇಬ್ಬರು ಗಂಡು ಮಕ್ಕಳ ಜೊತೆ ಕೂಲಿ ಕೆಲಸ ಮಾಡ್ಕೊಂಡು ಜೀವನ ಮಾಡ್ತಾರೆ. ಈ ಕುಟುಂಬಕ್ಕೆ ಆಶ್ರಯ ಕೊಟ್ಟಿದ್ದು ಖ್ಯಾತ ಫ್ಯಾಷನ್ ಡಿಸೈನರ್ ಪಲ್ಲವಿ.

ಇನ್ನು ಫ್ಯಾಷನ್ ಡಿಸೈನರ್ ಪಲ್ಲವಿ ಬಳಿ ಕೆಲಸ ಮಾಡುವಾಗ ಭಾರ್ಗವಿ LLB ಸೀರಿಯಲ್ ನಾಯಕ ಮನೋಜ್ ಕುಮಾರ್ ಅವರ ಕಣ್ಣಿಗೆ ಮಲ್ಲಮ್ಮ ಬೀಳ್ತಾರೆ. ಅಲ್ಲೇ ಕೆಲಸ ಮಾಡೋ ಮಲ್ಲಮ್ಮನ ಮಾತಿನ ಶೈಲಿ, ಕಾಮಿಡಿ ಪಂಚ್ ಅವ್ರು ಮಾಡಿ ಕೊಡೋ ಬಿಸಿ ಬಿಸಿ ಜೋಳದ ರೊಟ್ಟಿಗೆ ಮನೋಜ್ ಫಿದಾ ಆಗ್ತಾರೆ. ಇವ್ರ ಹೆಸರಲ್ಲಿ ಮಲ್ಲಮ್ಮ ಟಾಕ್ಸ್ ಅಂತ ಇನ್ಸ್ಟಾಗ್ರಾಮ್ ಖಾತೆ ಓಪನ್ ಮಾಡ್ತಾರೆ. ಇದರ ಮೂಲಕ ಸೋಷಿಯಲ್ ಮೀಡಿಯಾ ಸ್ಟಾರ್ ಆಗುವ ಮಲ್ಲಮ್ಮನಿಗೆ ಅಭಿಮಾನಿಗಳು ಹುಟ್ಟಿಕೊಳ್ತಾರೆ. ಸಿಕ್ಕಾಪಟ್ಟೆ ಫೇಮಸ್ ಆಗ್ತಾರೆ. ಈ ಕಾರಣಕ್ಕೆ ಬಿಗ್ಬಾಸ್ಗೆ ಆಯ್ಕೆಯಾಗಿ ಈಗ ದೊಡ್ಮನೆಯಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು, ಮೊದಲ ವಾರದಲ್ಲೇ ಕರುನಾಡ ಜನರ ಹೃದಯ ಗೆದ್ದಿದ್ದಾರೆ.
Read Also : ಮುಟ್ಟಿದರೆ ಮುನಿ ಆರೋಗ್ಯಕ್ಕೆ ಸಂಜೀವಿನಿ! : ಅಸಂಖ್ಯಾತ ಪ್ರಯೋಜನಗಳಿಂದ ಕೂಡಿದೆ ಮುಟ್ಟಿದರೆ ಮುದುಡುವ ಈ ಸಸ್ಯ!
