EMI ಮೂಲಕ ಮೊಬೈಲ್‌ ಖರೀದಿಸುವವರಿಗೆ RBI ಅತಿ ದೊಡ್ಡ ಶಾಕ್‌ ಕೊಟ್ಟಿದೆ. ಸಾಲ ಪಡೆದು ಆನ್‌ ಟೈಮ್‌ ಮರುಪಾವತಿ ಮಾಡದಿದ್ರೆ ನಿಮ್ಮ ಫೋನ್‌ ಲಾಕ್‌ ಆಗುವುದು ಖಂಡಿತ. ಯಾಕಂದ್ರೆ, ಭಾರತೀಯ ರಿಸರ್ವ್‌ ಬ್ಯಾಂಕ್‌ ಸಾಲ ಮರುಪಾವತಿ ಮಾಡದವರ ಫೋನ್‌ ಲಾಕ್‌ ಮಾಡುವ ನಿಯಮವನ್ನು ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಿದೆ. ಆರ್‌ಬಿಐನ ಈ ನಿಯಮವು ಸಾಲದಾತರಿಗೆ ಸಾಲ ಮರುಪಡೆಯುವಲ್ಲಿ ಸಹಾಯಕವಾಗಲಿದೆ. ಸಾಲ ನೀಡುವ ಸಂಸ್ಥೆಗಳು ಫೋನ್‌ಗಳಲ್ಲಿ ಅಪ್ಲಿಕೇಶನ್ ಇನ್‌ಸ್ಟಾಲ್‌ ಮಾಡಿ, ಸಾಲಗಾರರ ಫೋನ್‌ಗಳನ್ನು ಲಾಕ್ ಮಾಡಬಹುದು. ಇದ್ರಿಂದ ಫೋನ್‌, ಫೋನ್‌ನಲ್ಲಿರುವ ಡೇಟಾಗಾಗ್ಲಿ ಯಾವುದೇ ತೊಂದ್ರೆ ಆಗೋದಿಲ್ಲ. ಸಾಲ ಮರುಪಾವತಿ ಆಗ್ತಿದ್ದಾಗೆ ಫೋನ್‌ ಅನ್‌ಲಾಕ್‌ ಆಗಿ ಮೊದಲಿನಂತೆ ವರ್ಕ್‌ ಮಾಡುತ್ತೆ. ಸಾಲಗಾರರು ಸಮಯಕ್ಕೆ ಸರಿಯಾಗಿ ಪಾವತಿಸದಿದ್ದರೆ, ಫೋನ್ ಲಾಕ್ ಆಗಿ ದೈನಂದಿನ ಜೀವನಕ್ಕೆ ಅಡ್ಡಿಯಾಗಬಹುದು. ಈ ಕಾರಣದಿಂದ ಸಾಲ ಬೇಗನೆ ಮರು ಪಾವತಿಯಾಗಲಿ ಎಂಬ ಉದ್ದೇಶವನ್ನು ಇಟ್ಟುಕೊಂಡು ಈ ನಿಯಮ ಜಾರಿಗೆ ತರುವ ಚಿಂತನೆ ನಡೆಸುತ್ತಿದೆ.

CIBILನಂತಹ ಕ್ರೆಡಿಟ್ ಬ್ಯೂರೋಗಳ ಪ್ರಕಾರ, ₹1,00,000ಕ್ಕಿಂತ ಕಡಿಮೆ ಸಾಲಗಳು ಡೀಫಾಲ್ಟ್ ಆಗುವ ಅಪಾಯ ಹೆಚ್ಚು. ಹೀಗಾಗಿ ಫೋನ್ ಲಾಕ್ ಮಾಡುವ ಮೂಲಕ ಸಾಲಗಾರರ ಮೇಲೆ ಒತ್ತಡ ಹೇರಿ, ಸಾಲ ಮರುಪಾವತಿಯ ಸಾಧ್ಯತೆಯನ್ನು ಹೆಚ್ಚಿಸಬಹುದು. ಆದ್ರೆ ಟೆಲಿಕಾಂ ನಿಯಂತ್ರಕ TRAIಯ ಪ್ರಕಾರ, ಇಂತಹ ನಿಯಮಗಳು ಗ್ರಾಹಕರ ಹಕ್ಕುಗಳನ್ನು ಉಲ್ಲಂಘಿಸಿದಂತಾಗುತ್ತೆ. ಒಟ್ನಲ್ಲಿ, ಆರ್‌ಬಿಐ ಈ ನಿಯಮವನ್ನ ಯಾವಾಗ ಜಾರಿಗೆ ತರುತ್ತೆ ಅನ್ನೋದು ಇನ್ನೂ ಕೂಡ ಸ್ಪಷ್ಟವಾಗಿಲ್ಲ. ಚರ್ಚೆಗಳ ನಂತರ ಮುಂದಿನ ತಿಂಗಳುಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಲಾಗುವುದು. ಈ ನಿಯಮವು ಗ್ರಾಹಕರ ಹಕ್ಕುಗಳನ್ನು ರಕ್ಷಿಸುವಂತೆ ರೂಪಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

Read Also ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ : 7,300 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

Share.
Leave A Reply